ಅಬ್​ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!

author-image
Ganesh
Updated On
ಅಬ್​ ಕಿ ಬಾರ್ 300 ಎಂದ ತಂಡಕ್ಕೆ ಹ್ಯಾಟ್ರಿಕ್ ಸೋಲು.. IPL ಇತಿಹಾಸದಲ್ಲಿ ಕೆಟ್ಟ ದಾಖಲೆ..!
Advertisment
  • ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದ SRH, ರನ್​ಗಳಿಸಲು ಪರದಾಟ
  • ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ತಂಡಕ್ಕೆ ಸೋಲು
  • ವೆಂಕಟೇಶ್ ಅಯ್ಯರ್ ನಂತರ ವೈಭವ್-ಚಕ್ರವರ್ತಿ ಮಿಂಚಿಂಗು..

ನಿನ್ನೆ ನಡೆದ ಐಪಿಎಲ್​​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR), ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು 80 ರನ್‌ಗಳಿಂದ ಸೋಲಿಸಿದೆ. ಕೋಲ್ಕತ್ತಾಗೆ ಸಿಕ್ಕ ಎರಡನೇ ಗೆಲುವು ಇದಾಗಿದೆ.

ಈಡನ್ ಗಾರ್ಡರ್ನ್ಸ್​ನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ಮೊದಲು ಬ್ಯಾಟ್ ಮಾಡಿ 200 ರನ್​ಗಳ ಟಾರ್ಗೆಟ್ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ SRH, ಕೇವಲ 16.4 ಓವರ್​ಗೆ ಎಲ್ಲಾ ವಿಕೆಟ್ ಕಳೆದುಕೊಂಡು 120 ರನ್​ಗಳಿಸಿ ಸೋಲಿಗೆ ಶರಣಾಯ್ತು. ಇದರೊಂದಿಗೆ ಸನ್‌ರೈಸರ್ಸ್ ಹೈದರಾಬಾದ್, ಸತತ ಮೂರನೇ ಬಾರಿಗೆ ಸೋತಿದೆ. ಕೋಲ್ಕತ್ತಾ ತಂಡದ ಗೆಲುವಿಗೆ ವೆಂಕಟೇಶ್ ಅಯ್ಯರ್ ಮತ್ತು ವೈಭವ್ ಅರೋರಾ ದೊಡ್ಡ ಕೊಡುಗೆ ನೀಡಿದರು.

ಇದನ್ನೂ ಓದಿ: ಸೋಲಿನ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಆಘಾತ; ಪಾಯಿಂಟ್ಸ್​ ಟೇಬಲ್​​ನಲ್ಲಿ ರೂಲ್ ಮಾಡ್ತಿರೋದ್ಯಾರು?

publive-image

ಹೈದರಾಬಾದ್‌ಗೆ ಹ್ಯಾಟ್ರಿಕ್ ಸೋಲು..!

ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ 201 ರನ್‌ಗಳ ಬಿಗ್​ ಟಾರ್ಗೆಟ್ ಇತ್ತು. ಈ ಗುರಿ ಬೆನ್ನಟ್ಟಲು ಬಂದ ಹೈದರಾಬಾದ್, ಆರಂಭಿಕ ಆಘಾತ ಎದುರಿಸಿತು. ಅಗ್ರ ಕ್ರಮಾಂಕದ ಬ್ಯಾಟರ್​ಗಳು ವೈಫಲ್ಯ ಅನುಭವಿಸಿದರು. 9 ರನ್‌ಗಳ ಹೊತ್ತಿಗೆ ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಔಟ್ ಆದರು. ಕ್ಲಾಸೆನ್ 33 ರನ್‌ಗಳನ್ನು ಗಳಿಸಿದರು. ಕಮಿಂಡು ಮೆಂಡಿಸ್ 27 ರನ್‌ ಗಳಿಸಿದರು. ಆ ಮೂಲಕ SRH ಹೇಗೋ 100 ರನ್​ಗಳ ಗಡಿ ದಾಟಿತು.

ಇದನ್ನೂ ಓದಿ: ಕೊಹ್ಲಿಗೆ ಬೌಲ್ ಮಾಡುವಾಗ ಕಣ್ಣಲ್ಲಿ ನೀರು ತುಂಬಿತ್ತು.. ಗಿಲ್​ರ ಈ ರಿಯಾಕ್ಷನ್ ನೋಡಿದ್ರೆ ನಿಮಗೂ ಚುರ್ ಎನ್ನುತ್ತೆ -VIDEO

ಕೋಲ್ಕತ್ತಾ ಗೆಲುವಿನ ಅಂಗ್‌ಕ್ರಿಶ್ ರಘುವಂಶಿ ಭದ್ರ ಅಡಿಪಾಯ ಹಾಕಿದರು. 32 ಎಸೆತಗಳಲ್ಲಿ 50 ರನ್ ಗಳಿಸಿದರು. ನಾಯಕ ಅಜಿಂಕ್ಯ ರಹಾನೆ ಜೊತೆ 81 ರನ್‌ಗಳ ನಿರ್ಣಾಯಕ ಪಾರ್ಟ್ನರ್​ಶಿಪ್ ನೀಡಿದರು. ನಂತರ ಬಂದ ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಸಂಚಲನ ಮೂಡಿಸಿದರು. ಅಯ್ಯರ್ 29 ಎಸೆತಗಳಲ್ಲಿ 60 ರನ್ ಗಳಿಸಿ ಬಿರುಗಾಳಿಯ ಇನ್ನಿಂಗ್ಸ್ ಆಡಿದ್ರೆ, ರಿಂಕು ಸಿಂಗ್ 17 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗುಳಿದರು.

ಅತಿ ದೊಡ್ಡ ಸೋಲು

ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಎದುರಾದ ಅತಿ ದೊಡ್ಡ ಸೋಲಾಗಿದೆ. ಇದಕ್ಕೂ ಮೊದಲು ಹೈದರಾಬಾದ್, ಸಿಎಸ್‌ಕೆ ವಿರುದ್ಧ ಅತಿದೊಡ್ಡ ಸೋಲು ಅನುಭವಿಸಿತ್ತು. 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಹೈದರಾಬಾದ್ ತಂಡವನ್ನು 78 ರನ್‌ಗಳಿಂದ ಸೋಲಿಸಿತ್ತು. 2013 ರಲ್ಲಿ ಚೆನ್ನೈ, 77 ರನ್‌ಗಳಿಂದ ಸೋಲಿಸಿತ್ತು.

ಇದನ್ನೂ ಓದಿ: ವಕ್ಫ್​ ತಿದ್ದುಪಡಿ ಮಸೂದೆ ಸ್ವಾಗತಿಸಿದ ದೇವೇಗೌಡ.. ಬಿಜೆಪಿ ಮೈತ್ರಿ ಪಕ್ಷ ಜೆಡಿಯುನ ಹಿರಿಯ ನಾಯಕ ರಾಜೀನಾಮೆ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment