newsfirstkannada.com

KKR ಟ್ರೋಫಿ ಗೆಲುವಿನ ಹಿಂದಿದ್ದಾರೆ ಇಬ್ಬರು ಮಾಸ್ಟರ್ ಮೈಂಡ್​ಗಳು.. ಗಂಭೀರ್​ ಜೊತೆ ಕೈ ಜೋಡಿಸಿದ್ಯಾರು? ​​​

Share :

Published May 27, 2024 at 2:10pm

    ಕೆಕೆಆರ್​​ನ ಭಲೇ ಜೋಡಿಯ ರಣತಂತ್ರ, ಎದುರಾಳಿಗಳು ತಬ್ಬಿಬ್ಬು​.!

    ಕೊಲ್ಕತ್ತಾ ತಂಡ ಆಡಿದ ರೀತಿಗೆ ಕ್ರಿಕೆಟ್​ ಲೋಕವೇ ಸಲಾಂ ಅಂತಿದೆ

    ಚೆಪಾಕ್​ನಲ್ಲಿ ನಡೆದ ಫೈನಲ್​​ನಲ್ಲಿ ಜಯಭೇರಿ ಬಾರಿಸಿದ ಕೊಲ್ಕತ್ತಾ

ಈ ಸೀಸನ್​​ನ ಆರಂಭದಲ್ಲಿ ಕೆಕೆಆರ್​​ ಫೈನಲ್ಸ್​ಗೆ ಬರುತ್ತೆ ಅಂತಾ ನಿರೀಕ್ಷೆ ಬಹುತೇಕರಲ್ಲಿ ಇರಲೇ ಇಲ್ಲ. ಆದ್ರೆ, ಕೆಕೆಆರ್​ ಮಾಡಿದ್ದು ಎಲ್ಲರೂ ಹುಬ್ಬೇರಿಸುವಂತಾ ಸಾಧನೆ. ಕಪ್​ ಗೆದ್ದು ಕ್ರಿಕೆಟ್​ ಲೋಕವನ್ನೇ ಬೆರಗಾಗಿಸಿಬಿಡ್ತು. ಇದಕ್ಕೆಲ್ಲ ಕಾರಣ ಗೌತಮ್​ ಗಂಭೀರ್​ ಎಂಬ ಗುರು. ಗಂಭೀರ್​ ಕೆಕೆಆರ್​ ತಂಡದ ಚಾರ್ಮ್​​ ಬದಲಿಸಿದ ರೋಚಕ ಕಥೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ 2024ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಚೆಪಾಕ್​ನಲ್ಲಿ ನಡೆದ ಫೈನಲ್​ ಫೈಟ್​ನಲ್ಲಿ ಜಯಭೇರಿ ಬಾರಿಸಿ ಕೊಲ್ಕತ್ತಾ ನೈಟ್​ ರೈಡರ್ಸ್​ ಐಪಿಎಲ್​ ಟ್ರೋಫಿಗೆ ಮುತ್ತಿಕ್ಕಿದೆ. 3ನೇ ಬಾರಿ ಕಿರೀಟ ಗೆಲ್ಲೋದ್ರೊಂದಿಗೆ ಐಪಿಎಲ್​ ಇತಿಹಾಸದ 3ನೇ ಸಕ್ಸಸ್​​ಫುಲ್​ ಫ್ರಾಂಚೈಸಿ ಎಂಬ ಪಟ್ಟ ದಕ್ಕಿಸಿಕೊಂಡಿದೆ. ಈ ಸೀಸನ್​ನಲ್ಲಿ ಕೊಲ್ಕತ್ತಾ ತಂಡ ಆಡಿದ ರೀತಿಗಂತೂ ಕ್ರಿಕೆಟ್​ ಲೋಕ ಸಲಾಂ ಹೊಡೀತಿದೆ.

7ನೇ ಸ್ಥಾನದಿಂದ ಚಾಂಪಿಯನ್​ ಪಟ್ಟದವರೆಗೆ.!

ಫೈನಲ್​ ಫೈಟ್​ನ ಸೋಲು ಗೆಲುವಿನಾಚೆಗೆ ಈ ಬಾರಿ ಐಪಿಎಲ್​​ನಲ್ಲಿ ಕೆಕೆಆರ್​ ತಂಡದ ಮಾಡಿದ ಮೋಡಿ ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿದ್ದು ಸುಳ್ಳಲ್ಲ. ಮೊದಲ ಪಂದ್ಯದಿಂದ ಹಿಡಿದು ಫೈನಲ್​ವರೆಗೆ ನೈಟ್​ರೈಡರ್ಸ್​ ಪಡೆ ಹೋರಾಡಿದ ರೀತಿ ಹಂಗಿತ್ತು. ಪ್ರತಿ ಪಂದ್ಯದಲ್ಲಿ ಗೆಲುವಿನ ಹಸಿವು ಇಡೀ ತಂಡದಲ್ಲಿ ಕಾಣ್ತಿತ್ತು. ಆಟಗಾರರು ನಾ ಮುಂದೆ ತಾ ಮುಂದೆ ಎಂಬಂತೆ ಪೈಪೋಟಿಗೆ ಬಿದ್ದು ಪರ್ಫಾಮ್​ ಮಾಡಿದ್ರು. 2022, 2023 ಈ ಎರಡೂ ವರ್ಷಗಳಲ್ಲಿ 7ನೇ ಸ್ಥಾನಿಯಾಗಿ ಕೆಕೆಆರ್ ಟೂರ್ನಿಗೆ ಗುಡ್​ ಬೈ ಹೇಳಿತ್ತು. ಆದ್ರೆ, ಕೆರಳಿ ನಿಲ್ತು. ಈ ವರ್ಷ ಆಡಿದ ರೀತಿ ಎಲ್ಲರನ್ನ ಬೆರಗಾಗಿಸಿಬಿಡ್ತು. ಅಂದಿದ್ದ ಕೆಕೆಆರ್​ಗೂ, ಈ ಸೀಸನ್​ನಲ್ಲಿ ಕಂಡ ಕೆಕೆಆರ್​ಗೂ ಇದ್ದಿದ್ದು ಅಜಗಜಾಂತರ ವ್ಯತ್ಯಾಸ.

ಗುರು ಗೌತಮ್​​ ಗಂಭೀರ್​​ ಎಂಟ್ರಿ.. ಬದಲಾದ ಕೆಕೆಆರ್​.!​

ಈ ತಂಡದಲ್ಲಿರುವ ಎಲ್ಲರೂ ಸಮಾನರು. ಇಲ್ಲಿ ಜೂನಿಯರ್​ -ಸೀನಿಯರ್​, ಡೊಮೆಸ್ಟಿಕ್​, ಇಂಟರ್​ನ್ಯಾಷನಲ್​ ಅನ್ನೋದಿಲ್ಲ. ನಮ್ಮ ಗುರಿ ಒಂದೆ ಐಪಿಎಲ್​ ಟ್ರೋಫಿ ಗೆಲ್ಲೋದು. ಎಲ್ಲರೂ ಈ ಒಂದು ದಾರಿಯಲ್ಲಿ ಸಾಗಬೇಕು. ಮೇ 26ಕ್ಕೆ ನಾವು ಅಲ್ಲಿರಬೇಕು. ನಿಮ್ಮಿಂದ ಏನು ಸಾಧ್ಯ ಎಲ್ಲವನ್ನ ಕೊಡಬೇಕು. ಎಲ್ಲ ಇಂದಿನಿಂದ ಆರಂಭವಾಗ್ತಿದೆ. ಮಾರ್ಚ್​ 23ರಿಂದಲ್ಲ. ಇಂದಿನಿಂದ ನಮ್ಮ ಐಪಿಎಲ್​ ಜರ್ನಿ ಆರಂಭವಾಗ್ತಿದೆ. ಅದೇ ದಾರಿಯಲ್ಲಿ ನಡೆದು, ಹೋರಾಡಿದರೆ ನಾವು ಯಶಸ್ಸು ಆಗುತ್ತೇವೆ ಅನ್ನೋ ನಂಬಿಕೆಯಿದೆ.

ಗೌತಮ್​ ಗಂಭೀರ್​​. ಕೆಕೆಆರ್​ ಮೆಂಟರ್​

ಐಪಿಎಲ್​ ಆರಂಭಕ್ಕೂ ಮುನ್ನ ಕೆಕೆಆರ್​ ತಂಡ ಈಡನ್​ ಗಾರ್ಡನ್​ನಲ್ಲಿ ಮೊದಲ ಪ್ರಾಕ್ಟೀಸ್​ ಸೆಷನ್​ ನಡೆಸ್ತಾ ಇತ್ತು. ಮೆಂಟರ್​ ಆಗಿ ಗಂಭೀರ್​​ ತಂಡಕ್ಕೆ ಮರು ಎಂಟ್ರಿ ಕೊಟ್ಟ ದಿನ ಅದು. ಅವತ್ತೇ ಆಟಗಾರರು ಎದುರು ಗಂಭೀರ್​ ಆಡಿದ ಮಾತುಗಳಿವು. ಮೊದಲ ದಿನದ ಅಭ್ಯಾಸದ ವೇಳೆ ಗಂಭೀರ್​​, ಫೈನಲ್​ ಆಡೋ ಮಾತನಾಡಿದ್ರು. ಆ ಆತ್ಮವಿಶ್ವಾಸದ ಮಾತು, ಹೋರಾಟದ ಮನೋಭಾವವೇ ಕೆಕೆಆರ್​​ ಚಹರೆಯನ್ನೇ ಬದಲಿಸಿಬಿಡ್ತು.

ಅಟ್ಯಾಕ್​.. ಅಟ್ಯಾಕ್​.. ಅಟ್ಯಾಕ್​​.. ಒಂದೇ ಮಂತ್ರ..!

ಈ ಸೀಸನ್​ನಲ್ಲಿ ಕೆಕೆಆರ್​ ತಂಡಕ್ಕೆ ಗಂಭೀರ್​ ಎಂಟ್ರಿ ಕೊಟ್ಟಿದ್ದೇ ಕೊಟ್ಟಿದ್ದು, ಕೊಲ್ಕತ್ತಾ ತಂಡ ಎದುರಾಳಿಗಳ ಮೇಲೆ ಅಕ್ಷರಶಃ ರೈಡ್​ ಮಾಡ್ತು. ಅಗ್ರೆಸ್ಸೀವ್​ ಇಂಟೆಂಟ್​ನಲ್ಲಿ ಹೋರಾಡಿದ ಕೆಕೆಆರ್​​, ಎದುರಾಳಿ ತಂಡ, ಎದುರಾಳಿ ಆಟಗಾರರು ಯಾವುವದಕ್ಕೂ ಕೇರ್​ ಮಾಡಲೇ ಇಲ್ಲ. ಡ್ರೆಸ್ಸಿಂಗ್​ ರೂಮ್​ನ ವಾತಾವರಣದಲ್ಲಾದ ಬದಲಾವಣೆ, ಸಿಗ್ತಿದ್ದ ಬೆಂಬಲ, ಪ್ರೋತ್ಸಾಹ ಆಟಗಾರರಲ್ಲಿ ಫಿಯರ್​ಲೆಸ್​ ಮನಸ್ಥಿತಿಯನ್ನ ಬೆಳೆಸಿಬಿಡ್ತು. ಇದು ಸಹಜವಾಗೇ ಆತ್ಮವಿಶ್ವಾಸವನ್ನ ಹೆಚ್ಚಿಸಿತು. ಆನ್​​ಫೀಲ್ಡ್​ನಲ್ಲಿ ರಿಸಲ್ಟ್​ ಕೂಡ ಸಿಗ್ತು.

2 ಕಠಿಣ ನಿರ್ಧಾರ, ಕೆಕೆಆರ್​​ ಆಟ ಅದ್ಭುತ.!

2021, 2022ರ ಸೀಸನ್​ನಲ್ಲಿ ಎರಡೂ ಸೀಸನ್​ನಲ್ಲಿ 7 ಬೇರೆ-ಬೇರೆ ಓಪನರ್ಸ್​ಗಳನ್ನ ಟ್ರೈ ಮಾಡಿತ್ತು. ಆರಂಭದಲ್ಲೇ ಆಗ್ತಿದ್ದ ಯಡವಟ್ಟು ತಂಡವನ್ನ 7ನೇ ಸ್ಥಾನಿಯಾಗಿ ಗುಡ್​ ಬೈ ಹೇಳುವಂತೆ ಮಾಡಿತು. ಆದ್ರೆ, ಗೌತಮ್​ ಗಂಭೀರ್​ ಎಂಟ್ರಿ ಕೊಟ್ಟ ಬಳಿಕ, ಲೋವರ್​ ಆರ್ಡರ್​ನಲ್ಲಿ ಬ್ಯಾಟಿಂಗ್​ ಮಾಡ್ತಿದ್ದ ಸುನೀಲ್​ ನರೈನ್​​ಗೆ ಪ್ರಮೋಷನ್​ ಕೊಟ್ರು. ಓಪನರ್​ ಆಗಿ ಕಣಕ್ಕಿಳಿದ ನರೈನ್​​​ ಧಮಾಕಾ ಸೃಷ್ಟಿಸಿದ್ರು. ಇನ್ನು, ಟೂರ್ನಿಗೂ ಮುನ್ನ ಜೇಸನ್​ ರಾಯ್​​ ಅಲಭ್ಯರಾದಾಗ ಫಿಲ್​ ಸಾಲ್ಟ್​ನ ರಿಪ್ಲೇಸ್​​ ಮೆಂಟ್​​ ಪ್ಲೇಯರ್​ ಆಗಿ ಕರೆತಂದ್ರು. ಓಪನರ್ಸ್​ಗಳಾಗಿ ಕಣಕ್ಕಿಳಿದ ಈ ಸಾಲ್ಟ್​ -ನರೈನ್​​​ ಜೋಡಿ ಬೌಲರ್​ಗಳನ್ನ ಬಿಡದೇ ಕಾಡಿದ್ರು.

ಹೆಡ್​​ ಕೋಚ್​​ ಚಂದ್ರಕಾಂತ್​ ಪಂಡಿತ್​​

ಗುರು ಗಂಭೀರ್​ಗೆ ಕೋಚ್ ಚಂದ್ರಕಾಂತ್​​ ಪಂಡಿತ್ ಸಾಥ್​​​​.!

ಮೆಂಟರ್​ ಆಗಿ ಕೆಕೆಆರ್​ಗೆ ಮರು ಎಂಟ್ರಿ ಕೊಟ್ಟ ಗೌತಮ್​ ಗಂಭೀರ್​ಗೆ ಹೆಡ್​​ ಕೋಚ್​​ ಚಂದ್ರಕಾಂತ್​ ಪಂಡಿತ್​​ ಸಖತ್​​ ಸಾಥ್​ ನೀಡಿದ್ರು. ಚಂದ್ರಕಾಂತ್ ಪಂಡಿತ್​​, ಇಂಡಿಯನ್​ ಡೊಮೆಸ್ಟಿಕ್​ ಸರ್ಕ್ಯೂಟ್​​ನ ಸಕ್ಸಸ್​ಫುಲ್​ ಕೋಚ್​. ಈ ಇಬ್ಬರು ಮಾಸ್ಟರ್​ ಮೈಂಡ್​ಗಳು ಹೆಣೆದ ರಣತಂತ್ರಗಳಿಗೆ ಎದುರಾಳಿ ಪಡೆಗಳು ತಬ್ಬಿಬ್ಬಾದ್ವು. ಪ್ರತಿ ಪಂದ್ಯಕ್ಕೂ ಮುನ್ನ ಎದುರಾಳಿಗಳ ಸ್ಟ್ರೆಂಥ್​ & ವೀಕ್​​​ನೆಸ್​ ಮೇಲೆ ಸಾಕಷ್ಟು ವರ್ಕೌಟ್​ ಮಾಡ್ತಿದ್ದ ಜೋಡಿ, ಪರ್ಫೆಕ್ಟ್​ ಗೇಮ್​​ಪ್ಲಾನ್​ ರೂಪಿಸ್ತಿದ್ರು. ಡಗೌಟ್​ನಲ್ಲಿ ಕುಳಿತು ಇಡೀ ಪಂದ್ಯ ನೋಡ್ತಿದ್ದ ಈ ಜೋಡಿ, ತಂಡಕ್ಕೆ ಅಗತ್ಯ ಟಿಪ್ಸ್​​ ನೀಡ್ತಿದ್ರು. ಈ ಭಲೇ ಜೋಡಿ ಒಟ್ಟಾಗಿ ಮಾಡಿದ ಮೋಡಿ, ಈ ಸೀಸನ್​​ನಲ್ಲಿ ಕೆಕೆಆರ್​ಗೆ ಸಕ್ಸಸ್​ನ ಗಿಫ್ಟ್​ ಕೊಡ್ತು.

ಈ ಸೀಸನ್​ ಆರಂಭದಲ್ಲಿ ಕೆಕೆಆರ್ ತಂಡದ ಪ್ಲೇ ಆಫ್​ಗೆ ಎಂಟ್ರಿ ಕೊಡುತ್ತೆ ಅಂತಾ ಬಹುತೇಕರು ಊಹೆ ಕೂಡ ಮಾಡಿರಲಿಲ್ಲ. ಆದ್ರೆ, ಟೂರ್ನಿಗೂ ಮುನ್ನ ತಂಡದ ಸಕ್ಸಸ್​ಫುಲ್​​ ಕ್ಯಾಪ್ಟನ್​​ ಗೌತಮ್​ ಗಂಭೀರ್​, ಮೆಂಟರ್​ ಆಗಿ ಮರು ಎಂಟ್ರಿ ಕೊಟ್ರು. ಈ ಗುರು ಗಂಭೀರ್​ ಎಂಟ್ರಿ ಇಡೀ ಕೆಕೆಆರ್​ ತಂಡದ ಹಣೆಬರಹವನ್ನೇ ಬದಲಿಸಿದ್ದಂತೂ ಸುಳ್ಳಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KKR ಟ್ರೋಫಿ ಗೆಲುವಿನ ಹಿಂದಿದ್ದಾರೆ ಇಬ್ಬರು ಮಾಸ್ಟರ್ ಮೈಂಡ್​ಗಳು.. ಗಂಭೀರ್​ ಜೊತೆ ಕೈ ಜೋಡಿಸಿದ್ಯಾರು? ​​​

https://newsfirstlive.com/wp-content/uploads/2024/05/KKR_GOUTAM_GAMBHIR.jpg

Load More