ವಿಮಾನಗಳ ಟಿಕೆಟ್ ಸೋಲ್ಡ್‌ ಔಟ್.. KKRTC ಇಂದ ಕುಂಭಮೇಳಕ್ಕೆ ವಿಶೇಷ ಬಸ್​ ವ್ಯವಸ್ಥೆ

author-image
Bheemappa
Updated On
ವಿಮಾನಗಳ ಟಿಕೆಟ್ ಸೋಲ್ಡ್‌ ಔಟ್.. KKRTC ಇಂದ ಕುಂಭಮೇಳಕ್ಕೆ ವಿಶೇಷ ಬಸ್​ ವ್ಯವಸ್ಥೆ
Advertisment
  • ಕುಂಭದಲ್ಲಿ ಎಷ್ಟು ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ?
  • ಕುಂಭಮೇಳಕ್ಕೆ ಹೋಗಿದ್ದ ಭಕ್ತರಿಂದ ಬಾಲ ರಾಮನ ದರ್ಶನ
  • 650ಕ್ಕೂ ಹೆಚ್ಚು ವಿಮಾನಗಳಲ್ಲಿ ಬಂದು ಹೋಗಿರುವ ಭಕ್ತರು

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕುಂಭಮೇಳದ ಜೊತೆಗೆ ಅಯೋಧ್ಯೆಗೂ ಭಕ್ತರು ಭೇಟಿ ನೀಡುತ್ತಿದ್ದಾರೆ. ಎಷ್ಟು ಮಂದಿ ಪುಣ್ಯಸ್ನಾನ ಮಾಡಿ ಬಾಲ ರಾಮನ ದರ್ಶನ ಪಡೆದಿದ್ದಾರೆ ಅನ್ನೋದು ಬಗ್ಗೆ ಒಂದು ವರದಿ ಇಲ್ಲಿದೆ.

ಮಹಾಕುಂಭದಲ್ಲಿ ಗಂಗಾ, ಯಮುನಾ ಮತ್ತು ಅದೃಶ್ಯ ಸರಸ್ವತಿಯ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸದ್ಯ ಇಷ್ಟು ದಿನ ಈ ಪ್ರಯಾಗರಾಜ್ ಅಮೃತ ಸ್ನಾನದಲ್ಲಿ ಮಿಂದೆದ್ದವರ ಅಧಿಕೃತ ಮಾಹಿತಿ ನ್ಯೂಸ್​ ಫಸ್ಟ್​ಗೆ ಲಭ್ಯವಾಗಿದೆ.

publive-image

ಕಳೆದ 19 ದಿನದಲ್ಲಿ ಸುಮಾರು 31 ಕೋಟಿ ಭಕ್ತರಿಂದ ಪುಣ್ಯಸ್ನಾನ

ಮಹಾಕುಂಭ ಮೇಳದಲ್ಲಿ ಇಲ್ಲಿಯವರೆಗೆ 31 ಕೋಟಿ 46 ಲಕ್ಷಕ್ಕೂ ಅಧಿಕ ಭಕ್ತರು ಸಂಗಮ ಸ್ನಾನ ಮಾಡಿದ್ದಾರೆ. ಈ 19 ದಿನದಲ್ಲಿ ಒಂದು ಲಕ್ಷ ಮಂದಿ 650ಕ್ಕೂ ಹೆಚ್ಚು ವಿಮಾನಗಳಲ್ಲಿ ಪ್ರಯಾಗ್‌ರಾಜ್‌ಗೆ ಬಂದು ಹೋಗಿದ್ದಾರೆ.

10 ದಿನದಲ್ಲಿ ಅಯೋಧ್ಯೆಗೆ 70 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ

ಅತ್ತ ಕುಂಭಮೇಳಕ್ಕೆ ಅಂತ ಉತ್ತರಪ್ರದೇಶಕ್ಕೆ ಬರುತ್ತಿರುವ ಭಕ್ತರು ಅಯೋಧ್ಯೆಗೂ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯ ರಾಮಲಲ್ಲಾನನ್ನ ನೋಡಿ ಪುನೀತರಾಗೋದಕ್ಕೆ 10 ದಿನದಲ್ಲಿ 70 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ನಿತ್ಯ ಸರಾಸರಿ 7 ಲಕ್ಷ ಮಂದಿ ಬಾಲರಾಮನ ದರ್ಶನ ಪಡೀತ್ತಿದ್ದಾರೆ.

ಪ್ರಯಾಗ್‌ರಾಜ್‌ಗೆ ತೆರಳುವ ವಿಮಾನಗಳ ಟಿಕೆಟ್‌ ಸೋಲ್ಡ್‌ ಔಟ್

ಸದ್ಯ ರಾಜ್ಯದಿಂದ ತೆರಳುವ ಪ್ರಯಾಗ್‌ರಾಜ್‌ಗೆ ಎಲ್ಲಾ ವಿಮಾನಗಳು ಫುಲ್ ಆಗಿದ್ದು, ಫೆಬ್ರುವರಿ 26ರ ವರೆಗೆ ಟಿಕೆಟ್‌ ಸೋಲ್ಡ್‌ ಔಟ್ ಆಗಿವೆ. ಪ್ರತಿದಿನ ಪ್ರಯಾಗ್‌ ರಾಜ್‌ಗೆ 3 ವಿಮಾನಗಳು ತೆರಳುತ್ತವೆ. ಇನ್ನು ರಾಜ್ಯದ ಹಲವಾರು ಜನರು ಪ್ರಯಾಗ್‌ರಾಜ್‌ನಿಂದ ವಾಪಸ್‌ ಬರಲು ಬಸ್‌, ರೈಲು ಅಥವಾ ವಿಮಾನಗಳು ಸಿಗದೇ ಪರದಾಡುತ್ತಿದ್ದಾರೆ.

ಇದನ್ನೂ ಓದಿಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾದಲ್ಲಿ ನಟಿಸಲ್ವಾ.. ಪಡೆದ ಅಡ್ವಾನ್ಸ್​ ಹಣ ವಾಪಸ್ ಕೊಟ್ರಾ?

publive-image

ಬಳ್ಳಾರಿ ಕೆಕೆಆರ್‌ಟಿಸಿಯಿಂದ ಮಹಾಕುಂಭಕ್ಕೆ ವಿಶೇಷ ಬಸ್

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ತೆರಳುತ್ತಿರೋ ಕೋಟ್ಯಾಂತರ ಭಕ್ತರಿಗೆ ರೈಲು, ವಿಮಾನಗಳ ಟಿಕೆಟ್‌ಗಳು ಸಿಗದೇ ಪರದಾಡ್ತಿದ್ದಾರೆ. ಹೀಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಪ್ರಯಾಗರಾಜ್​ ಮಹಾ ಕುಂಭಮೇಳಕ್ಕೆ ಹೋಗುವ ಭಕ್ತಾದಿಗಳ ಅನುಕೂಲಕ್ಕಾಗಿ ಸಾಂದರ್ಭಿಕ ಒಪ್ಪಂದದ ಮೇರೆಗೆ ವಿಶೇಷ ಬಸ್ಸುಗಳನ್ನ ಒದಗಿಸಲಾಗುತ್ತಿದೆ.

ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಉತ್ತರ ಪ್ರದೇಶ ರಾಜ್ಯದ ಪ್ರಯಾಗರಾಜ್‌ಗೆ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಕುಂಭಮೇಳಕ್ಕೆ ಹೋಗಿ, ವಾಪಾಸ್​ ಬರಲು ಪರದಾಡುತ್ತಿರುವ ಜನಕ್ಕೆ ಬಸ್​ ವ್ಯವಸ್ತೆ ಉತ್ತಮ ಅನುಕೂಲವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment