KKRvCSK: ಕೋಲ್ಕತ್ತಾದಲ್ಲಿ M.S ಧೋನಿ ಕಮಾಲ್.. ಚೆನ್ನೈಗೆ ಸೂಪರ್ ಜಯ; ಪ್ಲೇ ಆಫ್‌ಗೆ KKR ಡೌಟ್‌?

author-image
admin
Updated On
KKRvCSK: ಕೋಲ್ಕತ್ತಾದಲ್ಲಿ M.S ಧೋನಿ ಕಮಾಲ್.. ಚೆನ್ನೈಗೆ ಸೂಪರ್ ಜಯ; ಪ್ಲೇ ಆಫ್‌ಗೆ KKR ಡೌಟ್‌?
Advertisment
  • ಬೃಹತ್ ಟಾರ್ಗೆಟ್‌ಗೆ ಪರದಾಡಿದ ಕೋಲ್ಕತ್ತಾ ನೈಟ್ ರೈಡರ್ಸ್
  • ಚೆನ್ನೈ ತಂಡದ ನೂರ್ ಅಹ್ಮದ್ ಮಾರಕ ದಾಳಿಗೆ ತತ್ತರಿಸಿದ KKR
  • 4 ಬೌಂಡರಿ 4 ಸಿಕ್ಸರ್ ಸಿಡಿಸಿದ ಡೆವಾಲ್ಡ್ ಬ್ರೆವಿಸ್ ಅರ್ಧ ಶತಕ

ಕೋಲ್ಕತ್ತಾ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ IPL ಹಣಾಹಣಿಯಲ್ಲಿ ಎಂ.ಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಕಮಾಲ್ ಮಾಡಿದೆ. KKR ವಿರುದ್ಧ CSK ಕೊನೇ ಓವರ್‌ನಲ್ಲಿ ಗೆದ್ದು ಬೀಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಬಿಗ್ ಟಾರ್ಗೆಟ್ ನೀಡುವಲ್ಲಿ ವಿಫಲವಾಯಿತು. ಚೆನ್ನೈ ಪರ ನೂರ್ ಅಹ್ಮದ್ ಮಾರಕ ದಾಳಿಗೆ KKR ತತ್ತರಿಸಿ ಹೋಯಿತು. ನಾಯಕ ಅಂಜಿಕ್ಯಾ ರಹಾನೆ 48 ರನ್ ಸಿಡಿಸಿದ್ದೇ KKR ತಂಡಕ್ಕೆ ದುಬಾರಿ ಆಯ್ತು. ಸುನಿಲ್ ನರೈನ್ 26, ಆ್ಯಂಡ್ರೆ ರಸೆಲ್ 38, ರಿಂಕು ಸಿಂಗ್ 9 ರನ್‌ಗೆ ಔಟ್‌ ಆದರು.

publive-image

ಅಂತಿಮವಾಗಿ ಕೋಲ್ಕತ್ತಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಚೆನ್ನೈ ಪರ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ನೂರ್ ಅಹ್ಮದ್ 4 ವಿಕೆಟ್ ಪಡೆದು ಗಮನ ಸೆಳೆದರು.

ಇದನ್ನೂ ಓದಿ: BREAKING: ಟೆಸ್ಟ್‌ ಕ್ರಿಕೆಟ್‌ಗೆ ರೋಹಿತ್ ಶರ್ಮಾ ದಿಢೀರ್‌ ನಿವೃತ್ತಿ ಘೋಷಣೆ; ಕಾರಣವೇನು? 

180 ರನ್ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಆರಂಭದಲ್ಲಿ ಎಡವಿತು. ಸತತ ವಿಕೆಟ್ ನಷ್ಟದಲ್ಲಿದ್ದಾಗ CSK ತಂಡಕ್ಕೆ ಡೆವಾಲ್ಡ್ ಬ್ರೆವಿಸ್ ಭರವಸೆ ಕೊಟ್ಟರು. 4 ಬೌಂಡರಿ 4 ಸಿಕ್ಸರ್ ಸಿಡಿಸಿದ ಡೆವಾಲ್ಡ್ ಬ್ರೆವಿಸ್ ಅರ್ಧಶತಕ ಸಿಡಿಸಿದರು.

publive-image

ಅಂತಿಮವಾಗಿ ಶಿವಂ ದುಬೆ, ಎಂ.ಎಸ್ ಧೋನಿ ಮೇಲೆ CSK ತಂಡವನ್ನ ದಡ ಸೇರಿಸುವ ಜವಾಬ್ದಾರಿ ಇತ್ತು. ಶಿವಂ ದುಬೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿದರು. ನಾಯಕ ಎಂ.ಎಸ್ ಧೋನಿ ಕೂಡ ಶಿವಂ ದುಬೆಗೆ ಸಾಥ್ ಕೊಟ್ಟರು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ವಿರುದ್ಧ 2 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತು.

ಐಪಿಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ KKR 6ನೇ ಸ್ಥಾನದಲ್ಲಿದೆ. 5 ಪಂದ್ಯ ಗೆದ್ದು 5 ಪಂದ್ಯ ಸೋತಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ವಿರುದ್ಧ ಸೋಲಿನಿಂದ ಪ್ಲೇ ಆಫ್ ಹಾದಿ ಬಹಳ ಕಷ್ಟವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment