newsfirstkannada.com

ಅತ್ತ ರಸೆಲ್ ಇತ್ತ ಹೆನ್ರಿಚ್​.. ಬೌಂಡರಿ, ಸಿಕ್ಸರ್​ ಸುರಿಮಳೆಗೈದ ವಿದೇಶಿ ಆಟಗಾರರು.. ಏನು ಮ್ಯಾಚ್​ ಗುರು ಅಂದ್ರು ಫ್ಯಾನ್ಸ್​!

Share :

Published March 24, 2024 at 10:44am

    ನಿನ್ನೆ ಈಡನ್​ ಗಾರ್ಡನ್ಸ್​ನಲ್ಲಿ KKRvsSRH ತಂಡದಿಂದ ಬೌಂಡರಿ- ಸಿಕ್ಸರ್​ ಹೊಳೆ

    ರಸೆಲ್​ ಸಿಕ್ಸರ್​ ಸುನಾಮಿಗೆ ಕಂಗೆಟ್ಟ ಸನ್​ರೈಸರ್ಸ್​​ ಹೈದ್ರಾಬಾದ್​ ತಂಡ

    ಹೆನ್ರಿಚ್​ ಕ್ಲಾಸೆನ್​ ಕ್ಲಾಸಿಕ್​ ಆಟಕ್ಕೆ ಕಂಗೆಟ್ಟ ಕೋಲ್ಕತ್ತಾ ನೈಟ್​ ರೈಡರ್ಸ್​

ಕ್ಷಣ ಕ್ಷಣಕ್ಕೂ ಟ್ವಿಸ್ಟ್​ & ಟರ್ನ್​. ಬೌಂಡರಿಗಳ ಬೋರ್ಗರೆತ. ಸಿಕ್ಸರ್​​ನ ಸುನಾಮಿ. ಅಬ್ಬಾ..! ನಿನ್ನೆ ಈಡನ್​ ಗಾರ್ಡನ್​​ನಲ್ಲಿ ನಡೆದ ಕೊಲ್ಕತ್ತಾ – ಹೈದ್ರಾಬಾದ್​​​ ನಡುವಿನ ಫೈಟ್​​ ಫ್ಯಾನ್ಸ್​ಗೆ ನಿರಾಸೆ ಮಾಡಲೇ ಇಲ್ಲ. ಪಕ್ಕಾ ಪೈಸಾ ವಸೂಲ್​ ಎಂಟರ್​​ಟೈನ್​ಮೆಂಟ್​​ ಅಭಿಮಾನಿಗಳಿಗೆ ಸಿಗ್ತು. ಬೊಂಬಾಟ್​ ಫೈಟ್​ ಹೇಗಿತ್ತು.? ಈ ಸ್ಟೋರಿ ಓದಿ.

ಮೊದಲು ಬ್ಯಾಟಿಂಗ್​ಗಿಳಿದ ಕೆಕೆಆರ್​ ಆಘಾತದ ಮೇಲೆ ಆಘಾತ ಎದುರಿಸ್ತು. ಟಾಪ್​ ಆರ್ಡರ್​ ನಾಲ್ವರು ಬ್ಯಾಟ್ಸ್​ಮನ್​ಗಳು ಸಿಂಗಲ್​ ಡಿಜಿಟ್​ ಸ್ಕೋರ್​​ಗೆ ಗಂಟುಮೂಟೆ ಕಟ್ಟಿದ್ರು. ಆದ್ರೆ, ಇನ್ನೊಂದು ತುದಿಯಲ್ಲಿದ್ದ ಫಿಲ್​ ಸಾಲ್ಟ್​ ಆತ್ಮವಿಶ್ವಾಸದ ಆಟವಾಡಿದ್ರು.

ಬೊಂಬಾಟ್​ ಆಟವಾಡಿದ ರಮಣ್​ದೀಪ್​ ಸಿಂಗ್​.!

5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಂಪ್ಯಾಕ್ಟ್​ ಪ್ಲೇಯರ್​​ ರಮಣ್​ದೀಪ್​ ಸಿಂಗ್ 35 ರನ್​ಗಳ ಸ್ಪೋಟಕ ಇನ್ನಿಂಗ್ಸ್​ ಕಟ್ಟಿದ್ರು. ಫಿಲ್​ ಸಾಲ್ಟ್​​ ಅದ್ಭುತ ಅರ್ಧಶತಕ ಸಿಡಿಸಿ ಔಟಾದ್ರು.

ಕಂಗಾಲಾದ ಸನ್​​ರೈಸರ್ಸ್​ ಹೈದ್ರಾಬಾದ್​ ಬೌಲರ್ಸ್​.!​

ಬಳಿಕ ಕಣಕ್ಕಿಳಿದ ಕೆರಬಿಯನ್​ ದೈತ್ಯ ಆ್ಯಂಡ್ರೆ ರಸೆಲ್​, ಈಡನ್​ ಗಾರ್ಡನ್​ ಅಂಗಳದಲ್ಲಿ ರನ್​ ಎಬ್ಬಿಸಿದ್ರು. ಬೌಲರ್​​ಗಳನ್ನ ಮನಬಂದಂತೆ ದಂಡಿಸಿದ ರಸೆಲ್​, ಬೌಂಡರಿಗಳನ್ನ ಚಚ್ಚಿ, ಸಿಕ್ಸರ್​​ಗಳ ಸುನಾಮಿ ಎಬ್ಬಿಸಿದ್ರು. ಜಸ್ಟ್​​ 25 ಎಸೆತಗಳಲ್ಲಿ 64 ರನ್​ ಚಚ್ಚಿದ್ರು.

ರಸೆಲ್​ಗೆ ಸಾಥ್ ಕೊಟ್ಟ ರಿಂಕು ಸಿಂಗ್​ 23 ರನ್​ ಸಿಡಿಸಿದ್ರು. ಅಂತಿಮವಾಗಿ 20 ಓವರ್​​ಗಳಲ್ಲಿ ಕೆಕೆಆರ್​​ 7 ವಿಕೆಟ್​ ನಷ್ಟಕ್ಕೆ 208 ರನ್​ಗಳ ಸವಾಲಿನ ಮೊತ್ತ ಪೇರಿಸಿತು.

209 ರನ್​ಗಳ ಬಿಗ್​ ಟಾರ್ಗೆಟ್​ ಬೆನ್ನತ್ತಿದ ಸನ್​ರೈಸರ್ಸ್​ ತಂಡಕ್ಕೆ ಬ್ಯಾಟ್ಸ್​ಮನ್​ಗಳು ಕೈ ಕೊಟ್ರು. ಮಯಾಂಕ್​ ಅಗರ್​ವಾಲ್​, ಅಭಿಶೇಕ್​ ಶರ್ಮಾ, ರಾಹುಲ್​ ತ್ರಿಪಾಠಿ, ಏಡನ್​ ಮರ್ಕರಮ್ ಹಾಗೂ ಅಬ್ದುಲ್​ ಸಮದ್​​​ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.

ಕೋಟಿ ವೀರ ಸ್ಟಾರ್ಕ್​​ ಚಳಿ ಬಿಡಿಸಿದ ಕ್ಲಾಸೆನ್​.!

ಬ್ಯಾಟ್ಸ್​ಮನ್​ಗಳು ಕೈ ಕೊಟ್ಟ ಸಮಯದಲ್ಲಿ ಟೊಂಕ ಕಟ್ಟಿ ನಿಂತ ಹೆನ್ರಿಚ್​ ಕ್ಲಾಸೆನ್​, ಕೆಕೆಆರ್​ ಬೌಲರ್​​ಗಳ ಮೇಲೆ ಸವಾರಿ ಮಾಡಿದ್ರು. ಅಬ್ಬಬ್ಬಾ ಏನ್​​ ಬ್ಯಾಟಿಂಗ್​..! ಯಾರೊಬ್ಬರೂ ಕನಿಷ್ಟ ನಿರೀಕ್ಷೆಯನ್ನೂ ಮಾಡಿರಲಿಲ್ಲ.. ಕೆಕೆಆರ್​ನ ಕೋಟಿ ವೀರ ಮಿಚೆಲ್​ ಸ್ಟಾರ್ಕ್​ಗೆ ಒಂದೇ ಓವರ್​ನಲ್ಲಿ ಸ್ವರ್ಗ ತೋರಿಸಿಬಿಟ್ಟ.​

29 ಎಸೆತಗಳಲ್ಲಿ 8 ಸಿಕ್ಸರ್​ ಸಿಡಿಸಿದ ಹೆನ್ರಿಚ್​ ಕ್ಲಾಸೆನ್​ 63 ರನ್​​ಗಳಿಸಿದ್ರು. ಕ್ಲಾಸಿನ್​ಗೆ ಸಖತ್​ ಸಾಥ್​ ಕೊಟ್ಟ ಶಹಬಾಜ್​ ಅಹಮದ್​ 2 ಸಿಕ್ಸರ್​, 1 ಬೌಂಡರಿ ಸಿಡಿಸಿದ್ರು. ಆದ್ರೆ, ​ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಫೇಲ್​ ಆದ್ರು. ಕೊನೆಯ ಓವರ್​​ನಲ್ಲಿ ಮ್ಯಾಜಿಕ್​​ ಮಾಡಿದ ಹರ್ಷಿತ್​ ರಾಣಾ ಕೊಲ್ಕತ್ತಾದ ಗೆಲುವಿನ ರೂವಾರಿಯಾದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅತ್ತ ರಸೆಲ್ ಇತ್ತ ಹೆನ್ರಿಚ್​.. ಬೌಂಡರಿ, ಸಿಕ್ಸರ್​ ಸುರಿಮಳೆಗೈದ ವಿದೇಶಿ ಆಟಗಾರರು.. ಏನು ಮ್ಯಾಚ್​ ಗುರು ಅಂದ್ರು ಫ್ಯಾನ್ಸ್​!

https://newsfirstlive.com/wp-content/uploads/2024/03/Russell.jpg

Load More