/newsfirstlive-kannada/media/post_attachments/wp-content/uploads/2025/07/KL_RAHUL_NEW_PHOTO.jpg)
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಆಟಗಾರರು ಈಗಾಗಲೇ ಅಭ್ಯಾಸ ನಡೆಸಿದ್ದಾರೆ. ಸರಣಿಯಲ್ಲಿ 2-1 ಅಂತರ ಇರುವುದಿಂದ ಭಾರತ ಕೊನೆ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. 5ನೇ ಪಂದ್ಯ ಡ್ರಾ ಆದ್ರೆ ಅಥವಾ ಸೋತರೇ ಟೀಮ್ ಇಂಡಿಯಾ ಸರಣಿಯನ್ನು ಕೈಬಿಟ್ಟಂತೆ ಆಗುತ್ತದೆ. ಗೆಲುವು ಅನಿವಾರ್ಯವಾಗಿರುವ ಭಾರತಕ್ಕೆ ಕೆ.ಎಲ್ ರಾಹುಲ್ ಅಗತ್ಯತೆ ಇದೆ. ಇದರ ನಡುವೆ ಕನ್ನಡಿಗ ಕೆ.ಎಲ್ ರಾಹುಲ್ ಮತ್ತೊಂದು ದಾಖಲೆ ಬ್ರೇಕ್ ಮಾಡಲಿದ್ದಾರೆ.
ಲಂಡನ್ನ ಓವಲ್ನಲ್ಲಿ ನಾಳೆಯಿಂದ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ ಕೂಡ ಮಹತ್ವದ ಪಡೆದಿದೆ. ಈ ಸರಣಿಯಲ್ಲಿ ಈಗಾಗಲೇ ಎರಡು ಸೆಂಚುರಿ (137, 100) ಸಿಡಿಸಿದ್ದಾರೆ. ಜೊತೆಗೆ ಎರಡು ಅರ್ಧಶತಕಗಳು (55, 90) ಇವೆ. ಒಟ್ಟು ಈ ಸರಣಿಯ 4 ಪಂದ್ಯಗಳಿಂದ 511 ರನ್ಗಳನ್ನು ಬಾರಿಸಿದ್ದು ಕೊನೆಯ ಟೆಸ್ಟ್ನಲ್ಲಿ ಕನ್ನಡಿಗನ ಬ್ಯಾಟಿಂಗ್ ಅತ್ಯಂತ ಮುಖ್ಯ ಪಾತ್ರ ವಹಿಸಲಿದೆ. ಜೊತೆಗೆ ಈ ಲೆಜೆಂಡರಿ ಬ್ಯಾಟರ್ನ ರೆಕಾರ್ಡ್ ಕೂಡ ದೂಳೀಪಟ ಮಾಡಲಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಆಂಗ್ಲರ ನಾಡಲ್ಲಿ ಬಾರ್ಮಿ ಆರ್ಮಿ ಕಾಟ.. ಕೌಂಟರ್ಗೆ ರೆಡಿಯಾದ ಭಾರತ್ ಆರ್ಮಿ!
ಇಂಗ್ಲೆಂಡ್ ವಿರುದ್ಧವೇ ಅವರ ನೆಲದಲ್ಲಿಯೇ ಅತಿ ಹೆಚ್ಚು ರನ್ಗಳಿಸಿದವರ ಪೈಕಿ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. 2ನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದಾರೆ. ಇವರ ಬಳಿಕ ಸುನಿಲ್ ಗವಾಸ್ಕರ್ ಇದ್ದಾರೆ. ಸದ್ಯ ಕೆ.ಎಲ್ ರಾಹುಲ್ ಅವರು ಇನ್ನು 28 ರನ್ ಗಳಿಸಿದರೆ ಸುನಿಲ್ ಗವಾಸ್ಕರ್ ಅವರ ರೆಕಾರ್ಡ್ ಬ್ರೇಕ್ ಮಾಡಲಿದ್ದಾರೆ.
ಕೆ.ಎಲ್ ರಾಹುಲ್ ಅವರು 2014ರಲ್ಲಿ ಟೀಮ್ ಇಂಡಿಯಾಕ್ಕೆ ಡೆಬ್ಯು ಮಾಡಿದರು. ಅಂದಿನಿಂದ ಇಂದಿನವರೆಗೆ ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲಿಯೇ ಒಟ್ಟು 13 ಟೆಸ್ಟ್ಗಳಿಂದ 1125 ರನ್ ಬಾರಿಸಿದ್ದಾರೆ. ಹೀಗಾಗಿ ಇನ್ನು 28 ರನ್ ಬಾರಿಸಿದರೆ ಸುನಿಲ್ ಗವಾಸ್ಕರ್ 1,152 ರನ್ಗಳನ್ನ ಹಿಂದಿಕ್ಕಿ ಹೊಸ ದಾಖಲೆ ತಮ್ಮ ಹೆಸರಿಗೆ ಬರೆಯಿಸಿಕೊಳ್ಳಲ್ಲಿದ್ದಾರೆ. ಅಲ್ಲದೇ ಈ ಪಟ್ಟಿಯಲ್ಲಿ ಕೆ.ಎಲ್ ರಾಹುಲ್ 3ನೇ ಸ್ಥಾನ, ಅದು ರಾಹುಲ್ ದ್ರಾವಿಡ್ ಅವರ ನಂತರದ ಹಿಂದಿನ ಸ್ಥಾನದಲ್ಲಿರುವುದು ವಿಶೇಷ ಎನಿಸುತ್ತದೆ.
ಇಂಗ್ಲೆಂಡ್ ವಿರುದ್ಧ ಅವರ ನೆಲದಲ್ಲೇ ಹೆಚ್ಚು ರನ್ ಗಳಿಸಿದವರು?
- ಸಚಿನ್ ತೆಂಡುಲ್ಕರ್- 1575
- ರಾಹುಲ್ ದ್ರಾವಿಡ್- 1376
- ಸುನಿಲ್ ಗವಾಸ್ಕರ್- 1152
- ಕೆ.ಎಲ್ ರಾಹುಲ್- 1125
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ