/newsfirstlive-kannada/media/post_attachments/wp-content/uploads/2025/06/KL_RAHUL.jpg)
ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಅನಧಿಕೃತ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭಾರತ- ಎ ತಂಡದ ಪರವಾಗಿ ಬ್ಯಾಟಿಂಗ್ ಮಾಡಿದ ಕನ್ನಡಿಗ ಕೆ.ಎಲ್ ರಾಹುಲ್ ಅರ್ಧಶತಕ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ನಾರ್ಥಾಂಪ್ಟನ್ನ ಕೌಂಟಿ ಮೈದಾನದಲ್ಲಿ ನಡೆಯುತ್ತಿರುವ 2ನೇ ಅನಧಿಕೃತ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಇಂಗ್ಲೆಂಡ್ ಲಯನ್ಸ್ ತಂಡ 327 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ- ಎ ತಂಡ 21 ರನ್ಗಳ ಮುನ್ನಡೆ ಕಾಯ್ದುಕೊಂಡಿತು. ಇಂಗ್ಲೆಂಡ್ ಲಯನ್ಸ್ ತಂಡದ ಆಟಗಾರರು ಆಲೌಟ್ ಆಗಿದ್ದರಿಂದ ಎರಡನೇ ಇನ್ನಿಂಗ್ಸ್ನಲ್ಲಿ ಓಪನರ್ಗಳಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ಗೆ ಆಗಮಿಸಿದ್ದರು.
ಇದನ್ನೂ ಓದಿ:ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ; ಮೊದಲೇ ಅಪಾಯದ ಎಚ್ಚರಿಕೆ, ದೊಡ್ಡ ನಿರ್ಲಕ್ಷ್ಯ ಮಾಡಿದವರು ಯಾರು?
ಮೊದಲ ಟೆಸ್ಟ್ನಲ್ಲಿ ಬ್ಯಾಟಿಂಗ್ನಲ್ಲಿ ವಿಫಲರಾಗಿದ್ದ ಜೈಸ್ವಾಲ್ ಎರಡನೇ ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲೂ ಕೆಟ್ಟ ಪ್ರದರ್ಶನ ನೀಡಿದರು. ಆದರೆ ಕೆ.ಎಲ್ ರಾಹುಲ್ ಅಂತೂ ಭರ್ಜರಿ ಫಾರ್ಪಮೆನ್ಸ್ ನೀಡಿ ತಂಡಕ್ಕೆ ನೆರವಾದರು. 2ನೇ ಇನ್ನಿಂಗ್ಸ್ನಲ್ಲಿ 64 ಎಸೆತಗಳನ್ನು ಎದುರಿಸಿದ ಕೆ.ಎಲ್ ರಾಹುಲ್ ಅವರು ಸಿಕ್ಸರ್ ಇಲ್ಲದೇ 9 ಬೌಂಡರಿಗಳಿಂದ 51 ರನ್ ಸಿಡಿಸಿದ್ದಾರೆ. ಅರ್ಧಶತಕದಿಂದ ಬ್ಯಾಟಿಂಗ್ ಮುಂದುವರೆಸಿದ್ದ ರಾಹುಲ್, ಎಡ್ಡಿ ಜ್ಯಾಕ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇನ್ನು ಕ್ಯಾಪ್ಟನ್ ಅಭಿಮನ್ಯು ಈಶ್ವರನ್ ಕೂಡ ಅರ್ಧಶತಕ ಸಿಡಿಸಿದ್ದು ಬ್ಯಾಟಿಂಗ್ ಮುಂದುವರೆಸಿದ್ದಾರೆ. ಮೊದಲ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿದ್ದ ಕನ್ನಡಿಗ ಕರುಣ್ ನಾಯರ್ ಈ ಇನ್ನಿಂಗ್ಸ್ನಲ್ಲಿ ಕೇವಲ 15 ರನ್ಗಳಿಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದ್ದಾರೆ. ಸದ್ಯ ಭಾರತ- ಎ ತಂಡ 3 ವಿಕೆಟ್ಗೆ 137 ರನ್ಗಳಿಂದ ಆಡುತ್ತಿದ್ದು 158 ರನ್ಗಳ ಲೀಡ್ ಕಾಯ್ದುಕೊಂಡಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ