/newsfirstlive-kannada/media/post_attachments/wp-content/uploads/2024/04/KL-Rahul_Athiya-Shetty-1.jpg)
ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ದಂಪತಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಕೆ.ಎಲ್ ರಾಹುಲ್ ಟ್ವೀಟ್ ಮಾಡಿ ಈ ಗುಡ್ನ್ಯೂಸ್ ಹಂಚಿಕೊಂಡಿದ್ದಾರೆ.
ನಮಗೆ ಹೆಣ್ಣು ಮಗು ಆಗಿದೆ ಎಂದು ಕೆ.ಎಲ್ ರಾಹುಲ್ ಮಾಡಿರೋ ಟ್ವೀಟ್ಗೆ ಲಕ್ಷಗಟ್ಟಲೇ ರೀಚ್ ಸಿಕ್ಕಿದೆ. ಈ ಜೋಡಿಗೆ ನಟಿ ಪೂಜಾ ಹೆಗ್ಡೆ, ಅಹಾನ್ ಶೆಟ್ಟಿ, ಸುನೀಲ್ ಶೆಟ್ಟಿ, ವಿಕ್ರಾಂತ್ ಮಾಸ್ಸಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.
— K L Rahul (@klrahul) March 24, 2025
">March 24, 2025
ಎರಡು ವರ್ಷಗಳ ಹಿಂದೆ 2023 ಜನವರಿ 23ನೇ ತಾರೀಕಿನಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಜೊತೆ ಅಥಿಯಾ ಅದ್ಧೂರಿಯಾಗಿ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.
2024ರ ಐಪಿಎಲ್ ಸೀಸನ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿದ್ದ ಕೆಎಲ್ ರಾಹುಲ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ತೊರೆದ ಕೆ.ಎಲ್ ರಾಹುಲ್ ಐಪಿಎಲ್ ಹರಾಜಿಗೆ ಬಂದಿದ್ದರು. ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಆದರೀಗ, ತಂದೆ ಆಗಿರೋ ಕಾರಣ ಕೆ.ಎಲ್ ರಾಹುಲ್ ಇಂದು ಸೇರಿ ಮೂರು ಪಂದ್ಯಗಳಿಗೆ ಲಭ್ಯರಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ:ಫ್ಯಾನ್ಸ್ಗೆ ಬಿಗ್ ಶಾಕ್; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೈ ಕೊಟ್ಟ ಕೆ.ಎಲ್ ರಾಹುಲ್; ಕಾರಣವೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ