Advertisment

ಕೊಹ್ಲಿ ಜರ್ಸಿ 40 ಲಕ್ಷಕ್ಕೆ ಸೇಲ್.. KL ರಾಹುಲ್​ ಮಾನವೀಯ ಸೇವೆಗೆ ಹರಿದುಬಂದು ಹಣದ ಹೊಳೆ..!

author-image
Ganesh
Updated On
ಕೊಹ್ಲಿ ಜರ್ಸಿ 40 ಲಕ್ಷಕ್ಕೆ ಸೇಲ್.. KL ರಾಹುಲ್​ ಮಾನವೀಯ ಸೇವೆಗೆ ಹರಿದುಬಂದು ಹಣದ ಹೊಳೆ..!
Advertisment
  • ಧೋನಿ, ರೋಹಿತ್ ಬ್ಯಾಟ್ ಬಂಪರ್​​ ಬೆಲೆಗೆ ಬಿಡ್ ಆಗಿದೆ
  • ಕೆಎಲ್ ರಾಹುಲ್, ಅಥಿಯಾ ಶೆಟ್ಟಿಗೆ ಜನರು ಸೆಲ್ಯೂಟ್
  • ಹರಾಜು ಪ್ರಕ್ರಿಯೆಯಲ್ಲಿ ಒಟ್ಟು ಎಷ್ಟು ಹಣ ಖರೀದಿ ಆಗಿದೆ?

ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಪತ್ನಿ ಅಥಿಯಾ ಶೆಟ್ಟಿ ಇತ್ತೀಚೆಗೆ ‘ಕ್ರಿಕೆಟ್ ಫಾರ್ ಚಾರಿಟಿ’ ಹರಾಜು ನಡೆಸಿದ್ದರು. ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ವಿಪ್ಲ ಸಂಸ್ಥೆಗೆ ಸಹಾಯ ಮಾಡಲು ಈ ಹರಾಜು ಆಯೋಜಿಸಲಾಗಿತ್ತು. ಈ ಹರಾಜಿಗೆ ಖ್ಯಾತ ಕ್ರಿಕೆಟಿಗರು ತಮ್ಮ ವೈಯಕ್ತಿಕ ವಸ್ತುಗಳನ್ನು ನೀಡಿದ್ದರು. ಅದರಲ್ಲಿ ವಿರಾಟ್ ಕೊಹ್ಲಿಯ ಜೆರ್ಸಿ 40 ಲಕ್ಷ ರೂಪಾಯಿಗೆ ಮಾರಾಟವಾಗಿದೆ.

Advertisment

ವಿರಾಟ್ ಕೊಹ್ಲಿ ಜೆರ್ಸಿಯ ಅತ್ಯಂತ ದುಬಾರಿ ಬೆಲೆ 40 ಲಕ್ಷ ರೂಪಾಯಿಗೆ ಹರಾಜು ಆಗಿದೆ. ಅವರ ಕೈಗವಸುಗಗಳ ಮೇಲೆ 28 ಲಕ್ಷ ರೂಪಾಯಿ ಬಿಡ್ ನಡೆದಿದೆ. ರೋಹಿತ್ ಶರ್ಮಾರ ಬ್ಯಾಟ್ 24 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಎಂಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಅವರ ಬ್ಯಾಟ್‌ಗಳಿಗೆ ಕ್ರಮವಾಗಿ 13 ಲಕ್ಷ ಮತ್ತು 11 ಲಕ್ಷ ರೂಪಾಯಿಗೆ ಮಾರಾಟ ಆಗಿದೆ. ಕೆಎಲ್ ರಾಹುಲ್ ಜೆರ್ಸಿ 11 ಲಕ್ಷ ರೂಪಾಯಿಗೆ ಮಾರಾಟ ಆಗಿದೆ.

ಇದನ್ನೂ ಓದಿ:ರೋಹಿತ್​ ಖರೀದಿಗೆ 50 ಕೋಟಿ ರೂಪಾಯಿ ಖರ್ಚು ಮಾಡಲು ರೆಡಿಯಾದ ಎರಡು ಫ್ರಾಂಚೈಸಿ..!

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಆರಂಭಿಸಿದ ಈ ಅಭಿಯಾನದಲ್ಲಿ ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಬೆಂಬಲಿಸಿದ್ದಾರೆ. ಜೋಸ್ ಬಟ್ಲರ್, ಕ್ವಿಂಟನ್ ಡಿ ಕಾಕ್ ಮತ್ತು ನಿಕೋಲಸ್ ಪೂರನ್ ಕೂಡ ಈ ಅಭಿಯಾನದ ಭಾಗವಾಗಿದ್ದಾರೆ.

Advertisment

ಎಷ್ಟು ಹಣವನ್ನು ಸಂಗ್ರಹಿಸಲಾಗಿದೆ

ವರದಿಗಳ ಪ್ರಕಾರ.. ಕ್ರಿಕೆಟ್ ಫಾರ್ ಚಾರಿಟಿ ಹರಾಜು ಒಟ್ಟು 1.93 ಕೋಟಿ ರೂಪಾಯಿ ಸಂಗ್ರಹಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿರುವ ರಾಹುಲ್ .. ಹರಾಜು ಯಶಸ್ವಿಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಹಣವನ್ನು ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ಬಳಸಲಾಗುವುದು ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿಖರ್ ಧವನ್​ಗೂ ಬಿಸಿಸಿಐ ಅನ್ಯಾಯ -ಗಬ್ಬರ್ ಸಿಂಗ್ ನಿವೃತ್ತಿ ಹಿಂದಿದೆ ಕೋಪ, ಆಕ್ರೋಶ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment
Advertisment