/newsfirstlive-kannada/media/post_attachments/wp-content/uploads/2024/11/kl-rahul.jpg)
ಟೀಂ ಇಂಡಿಯಾ ಆಟಗಾರ ಕೆ.ಎಲ್​.ರಾಹುಲ್ ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ. ಕೆ.ಎಲ್​.ರಾಹುಲ್ ಹಾಗೂ ಆಥಿಯಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಸದ್ಯದಲ್ಲಿಯೇ ಮಗುವೊಂದು ಅವರ ಮನೆಯ ಅಂಗಳಕ್ಕೆ ಎಂಟ್ರಿ ಕೊಡಲಿದೆ. ಈ ಸುದ್ದಿಯನ್ನು ಖುದ್ದು ಆಥಿಯಾ ಶೆಟ್ಟಿ ತಮ್ಮ ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು. ಸದ್ಯದಲ್ಲಿಯೇ ಇಬ್ಬರೂ ತಂದೆ ತಾಯಿಯಾಗಲಿರುವ ವಿಷಯ ಬಹಿರಂಗಗೊಳಿಸಿದ್ದಾರೆ.
ಜಸ್ಟ್ ಒಂದು ಗಂಟೆ ಮುಂಚೆ ಇನ್​ಸ್ಟಾದಲ್ಲಿ ಒಂದು ಪೋಸ್ಟ್ ಮಾಡಿರುವ ಆಥಿಯಾ ಶೆಟ್ಟಿ ನಮ್ಮ ಮುದ್ದಿನ ಬಯಕೆ ಸದ್ಯದಲ್ಲಿಯೇ ಮನೆಗೆ ಬರಲಿದೆ ಎಂದು ಪೋಸ್ಟರ್​ವೊಂದನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ತಮ್ಮ ಮಗುವನ್ನು ಒಡಲಲ್ಲಿ ಹೊತ್ತುಕೊಂಡಿರುವ ಆಥಿಯಾ 2025ಕ್ಕೆ ಮಗು ಬರಲಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
View this post on Instagram
ಸದ್ಯ ಈ ಒಂದು ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿದ್ದು. ಎಲ್ಲರೂ ರಾಹುಲ್ ಹಾಗೂ ಆಥಿಯಾಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ. ಜನವರಿ 23, 2023ರಂದು ಕೆ.ಎಲ್.ರಾಹುಲ್ ಹಾಗೂ ಆಥಿಯಾ ಹಸೆಮಣೆಯನ್ನು ಏರಿದ್ದರು. ಅವರ ಪ್ರೀತಿಯ ದಾಂಪತ್ಯದ ಗುರುತಾಗಿ 2025ರಲ್ಲಿ ಅವರ ಮನೆ ಹಾಗೂ ಮನ ಬೆಳಗಲು ಮುದ್ದಾದ ಮಗುವೊಂದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us