Advertisment

ಕನ್ನಡಿಗ KL ರಾಹುಲ್, ಬೂಮ್ರಾ ಸಿಡಿದ್ರೆ ಎದುರಾಳಿ ಫಿನೀಶ್.. ಆಂಗ್ಲರಿಗೆ ಶುರುವಾಗಿದೆ ಢವಢವ!

author-image
Bheemappa
Updated On
ಕನ್ನಡಿಗ KL ರಾಹುಲ್, ಬೂಮ್ರಾ ಸಿಡಿದ್ರೆ ಎದುರಾಳಿ ಫಿನೀಶ್.. ಆಂಗ್ಲರಿಗೆ ಶುರುವಾಗಿದೆ ಢವಢವ!
Advertisment
  • ಕನ್ನಡಿಗನ ನಾಯಕತ್ವದ ಬಳಿಕ ಆಂಗ್ಲರ ನಾಡಲ್ಲಿ ಭಾರತ ಟೆಸ್ಟ್​ ಗೆದ್ದಿಲ್ಲ
  • ಕೆ.ಎಲ್​ ರಾಹುಲ್ ಸಿಂಹಸ್ವಪ್ನ ಆದರೆ ಬ್ರಿಟಿಷರಿಗೆ ಬೂಮ್ರಾ ವಿಲನ್!
  • ಜೂನ್ 20ರಿಂದ ಹೊಸ ನಾಯಕ, ಹೊಸ ಸವಾಲು, ಹೊಸ ಅಧ್ಯಾಯ

ಇಂಗ್ಲೆಂಡ್ ಟೆಸ್ಟ್​ ಸರಣಿಗೆ, ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಸರಣಿಗೂ ಮುನ್ನ ಭರ್ಜರಿ ಸಿದ್ಧತೆ ನಡೆಸಿಕೊಂಡಿರುವ ಟೀಮ್ ಇಂಡಿಯಾ, 18 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ಅಗ್ನಿ ಪರೀಕ್ಷೆ ಗೆಲ್ಲಲು ಹೊರಟಿದೆ. ಆದ್ರೆ, ಇದು ನಿಜವಾಗಬೇಕಾದರೆ, ಇವರಿಬ್ಬರ ಆಟವೇ ಮುಖ್ಯ.

Advertisment

ಹೊಸ ನಾಯಕ, ಹೊಸ ಸವಾಲು, ಹೊಸ ಅಧ್ಯಾಯ. ಜೂನ್ 20ರಿಂದ ಟೀಮ್ ಇಂಡಿಯಾ ಟೆಸ್ಟ್​ ತಂಡದಲ್ಲಿ ಹೊಸ ಯುಗಾರಂಭ ಶುರುವಾಗಲಿದೆ. ಯುವ ಪಡೆಯೊಂದಿಗೆ ಇಂಗ್ಲೆಂಡ್ ಟೆಸ್ಟ್​ ಸರಣಿಯನ್ನ ಗೆಲ್ಲಲು ಹೊರಟಿರುವ ಯಂಗ್ ಇಂಡಿಯಾ, ಆಂಗ್ಲರ ನಾಡದಲ್ಲಿ ಇತಿಹಾಸ ಬರೆಯಲು ರೆಡಿಯಾಗಿದೆ. ಆದ್ರೆ, ಇದು ಅಷ್ಟು ಸುಲಭವಲ್ಲ. ಅಸಾಧ್ಯವೂ ಅಲ್ಲ. ಇದಕ್ಕೆ ಕಾರಣ ಕೆಎಲ್ ರಾಹುಲ್, ಜಸ್​ಪ್ರಿತ್ ಬೂಮ್ರಾ.

publive-image

ಟೀಮ್​​ ಇಂಡಿಯಾ ಸೋಲು ಇಂಗ್ಲೆಂಡ್​ಗೆ ಸುಲಭವಲ್ಲ..!

ರಾಹುಲ್ ದ್ರಾವಿಡ್ ನಾಯಕತ್ವದ ಬಳಿಕ ಟೀಮ್ ಇಂಡಿಯಾ ಆಂಗ್ಲರ ನಾಡಲ್ಲಿ ಟೆಸ್ಟ್​ ಗೆದ್ದಿಲ್ಲ. ದಿಗ್ಗಜ ನಾಯಕರೇ ಮಕಾಡೆ ಮಲಗಿದ್ದಾರೆ. ಯುವ ಆಟಗಾರರ ಪಡೆಯನ್ನು ಚಿಂದಿ ಉಡಾಯಿಸುವುದು ಯಾವ ಲೆಕ್ಕ ಅನ್ನೋ ಚಿಂತನೆಯಲ್ಲಿದ್ರೆ, ನಿಜಕ್ಕೂ ಇಂಗ್ಲೆಂಡ್​​, ಬಹುತೇಕ ಸೋಲು ಒಪ್ಪಿಕೊಂಡಂತೆ ಲೆಕ್ಕ. ಯಾಕಂದ್ರೆ, ಟೀಮ್ ಇಂಡಿಯಾಕ್ಕೆ ಕ್ಲಾಸಿ ಕೆ.ಎಲ್.ರಾಹುಲ್ ಆ್ಯಂಡ್ ಜಸ್​ಪ್ರೀತ್ ಬೂಮ್ರಾರ ಬಲವಿದೆ. ಇವರಿಬ್ಬರ ಆಟ ನಡೆದ್ರೆ ಟೀಮ್ ಇಂಡಿಯಾ, ಇಂಗ್ಲೆಂಡ್​ನಲ್ಲಿ 18 ವರ್ಷಗಳ ಬಳಿಕ ಟೆಸ್ಟ್​ ಸರಣಿ ಗೆಲ್ಲೋದು ಕಷ್ಟವೇನಲ್ಲ. ಇಷ್ಟು ಕಾನ್ಫಿಡೆನ್ಸ್​ ಆಗಿ ಹೇಳಲು ಕಾರಣ ಅವರ ಆಟ.

ಇಂಗ್ಲೆಂಡ್​ ಎದುರು ರಾಹುಲ್ ಬೊಂಬಾಟ್ ಆಟ..!

ಇಂಗ್ಲೆಂಡ್​ ಮೇಲೆ ಕೆ.ಎಲ್.ರಾಹುಲ್ ಸವಾರಿ ಫಿಕ್ಸ್​. ಇದು ಜಸ್ಟ್​ ಇಂಗ್ಲೆಂಡ್ ಲಯನ್ಸ್ ಎದುರು ಸಿಡಿಸಿದ ಶತಕ, ಅರ್ಧಶತಕ ಹಾಗೂ ಭಾರತ ಎದುರಿನ ಇಟ್ರಾಸ್ಕ್ವಾಡ್​​ ಮ್ಯಾಚ್​ನಲ್ಲಿ ಗಳಿಸಿದ ರನ್​ ನೋಡಿ ಹೇಳ್ತಿಲ್ಲ. ಇಂಗ್ಲೆಂಡ್​ ಎದುರು ಕೆ.ಎಲ್.ರಾಹುಲ್​ರ ಸಕ್ಸಸ್ ರೇಟ್​, ಟ್ರ್ಯಾಕ್ ರೆಕಾರ್ಡ್​ಗಳೇ ಆಂಗ್ಲರ ಪಾಲಿಗೆ ಕನ್ನಡಿಗನೇ ಬಿಗ್ ಥ್ರೆಟ್ ಅನ್ನೋದನ್ನ ಸಾರಿ ಸಾರಿ ಹೇಳ್ತಿವೆ.

Advertisment

ಟೆಸ್ಟ್​ನಲ್ಲಿ ಇಂಗ್ಲೆಂಡ್​ ಎದುರು ಕೆ.ಎಲ್.ರಾಹುಲ್

ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಎದುರು 13 ಪಂದ್ಯಗಳನ್ನಾಡಿರುವ ರಾಹುಲ್, 40ರ ಬ್ಯಾಟಿಂಗ್ ಅವರೇಜ್​​ನಲ್ಲಿ 955 ರನ್ ಗಳಿಸಿದ್ದಾರೆ. 3 ಶತಕ, 2 ಅರ್ಧಶತಕ ಗಳಿಸಿರುವ ಕೆ.ಎಲ್.ರಾಹುಲ್, ಆಂಗ್ಲರ ಪಾಲಿಗೆ ಸಿಂಹಸ್ವಪ್ನವಾಗೋದ್ರಲ್ಲಿ ಡೌಟೇ ಇಲ್ಲ.

ಆಂಗ್ಲರ ಎದುರು ಜಸ್​ಪ್ರೀತ್ ಬೂಮ್ರಾ ಮ್ಯಾಜಿಕ್..!

ಬ್ಯಾಟಿಂಗ್​ನಲ್ಲಿ ಕೆ.ಎಲ್.ರಾಹುಲ್, ಆಂಗ್ಲರ ಪಾಲಿಗೆ ಸಿಂಹಸ್ವಪ್ನವಾದ್ರೆ. ಬ್ಯಾಟರ್​ಗಳ ಪಾಲಿಗೆ ಜಸ್​ಪ್ರೀತ್ ಬೂಮ್ರಾನೇ ವಿಲನ್. ಕಂಡೀಷನ್ಸ್​ ಯಾವ್ದೇ ಆಗಲಿ, ಎದುರಾಳಿ ಯಾರೇ ಆಗಲಿ ಮ್ಯಾಚ್ ವಿನ್ನಿಂಗ್ ಸ್ಪೆಲ್ ಹಾಕೋ ಜಸ್​​ಪ್ರೀತ್​ ಬೂಮ್ರಾ, ತಾನಾಡುವ ಮೂರು ಮ್ಯಾಚ್​ಗಳಲ್ಲಿ ಬೆಂಕಿ ಚೆಂಡುಗಳನ್ನ ಉಗುಳುವುದು ಫಿಕ್ಸ್​. ಇಷ್ಟು ಕಾನ್ಫಿಡೆನ್ಸ್​ಗೆ ರೀಸನ್. ಆಂಗ್ಲರ ಎದುರಿನ ಅಟ್ಯಾಕಿಂಗ್ ಸ್ಪೆಲ್ಸ್.

ಟೆಸ್ಟ್​ನಲ್ಲಿ ಇಂಗ್ಲೆಂಡ್ ಎದುರು ಬೂಮ್ರಾ

ಇಂಗ್ಲೆಂಡ್ ಎದುರು 14 ಪಂದ್ಯಗಳನ್ನಾಡಿರುವ ಬೂಮ್ರಾ, 60 ವಿಕೆಟ್ ಬೇಟೆಯಾಡಿದ್ದಾರೆ. 45 ರನ್ ನೀಡಿ 6 ವಿಕೆಟ್ ಉರುಳಿಸಿರುವುದು ಬೂಮ್ರಾರ ಇನ್ನಿಂಗ್ಸ್​ ಒಂದರ ಬೆಸ್ಟ್ ಪರ್ಪಾಮೆನ್ಸ್ ಆಗಿದೆ. 3 ಬಾರಿ 5 ವಿಕೆಟ್ ಕಬಳಿಸಿದ ಬೂಮ್ರಾ, ಈಗ ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ಬಲವೇ ಆಗಿದ್ದಾರೆ.

Advertisment

ಇದನ್ನೂ ಓದಿ: ಕೇದಾರನಾಥ ಯಾತ್ರಿಕರ ಮೇಲೆ ಉರುಳಿ ಬಿದ್ದ ಬಂಡೆಗಳು.. ಜೀವ ಬಿಟ್ಟ ಇಬ್ಬರು, ಮೂವರು ಗಂಭೀರ

publive-image

ಇಂಗ್ಲೆಂಡ್​ಗೆ ಕೆ.ಎಲ್.ರಾಹುಲ್, ಬೂಮ್ರಾದ್ದೇ ಟೆನ್ಶನ್..!

ಬೆನ್ ಸ್ಟೋಕ್ಸ್​ ನಾಯಕತ್ವದ ಇಂಗ್ಲೆಂಡ್ ಬಲಿಷ್ಠವಾಗೇ ಕಾಣ್ತಿದೆ. ತವರಿನಲ್ಲಿ ಇಂಗ್ಲೆಂಡ್​ ಹಾಟ್ ಫೇವರಿಟ್ಸ್​ ಆಗಿಯೇ ಕಾಣ್ತಿದೆ. ಆದ್ರೆ, ಇದೇ ಇಂಗ್ಲೆಂಡ್​ಗೆ ಕೆ.ಎಲ್.ರಾಹುಲ್, ಜಸ್​ಪ್ರೀತ್ ಬೂಮ್ರಾ ಮುಳ್ಳಾಗ್ತಾರಾ ಎಂಬ ಭಯವೂ ಮನದಲ್ಲಿ ಕಾಡ್ತಿದೆ. ಯಾಕಂದ್ರೆ, ಸದ್ಯ ಟೀಮ್ ಇಂಡಿಯಾದಲ್ಲಿರುವ ಆಟಗಾರರ ಪೈಕಿ ಇಂಗ್ಲೆಂಡ್​ನಲ್ಲಿ ಸಕ್ಸಸ್ ಕಂಡವರು ಇವರಿಬ್ಬರೇ ಆಗಿದ್ದಾರೆ.

ಇಂಗ್ಲೆಂಡ್​ನಲ್ಲಿ ಕೆ.ಎಲ್.ರಾಹುಲ್, 9 ಪಂದ್ಯಗಳಿಂದ 614 ರನ್ ಗಳಿಸಿದ್ದಾರೆ. 2 ಶತಕ, 1 ಅರ್ಧಶತಕ ಹೊಂದಿರುವ ರಾಹುಲ್, ಸದ್ಯ ಅದ್ಬುತ ಫಾರ್ಮ್​ನಲ್ಲಿದ್ದಾರೆ. ಮತ್ತೊಂದ್ಕಡೆ ಇಂಗ್ಲೆಂಡ್​ನ ಸ್ವಿಂಗ್ ಕಂಡೀಷನ್ಸ್​ನಲ್ಲಿ ಬೂಮ್ರಾ, ಮತ್ತಷ್ಟು ಡೇಂಜರಸ್. ಇನ್ನು ಇಂಗ್ಲೆಂಡ್ ಬ್ಯಾಟಿಂಗ್​ಗೆ ಹೋಲಿಸಿದ್ರೆ, ಬೌಲಿಂಗ್ ಅನಾನುಭವಿಗಳಿಂದ ಕೂಡಿದೆ. ಹೀಗಾಗಿ ಕೆ.ಎಲ್.ರಾಹುಲ್ ಹಾಗೂ ಬೂಮ್ರಾಗೆ ಉತ್ತಮ ಸಾಥ್​ ಸಿಕ್ಕಲ್ಲಿ, ಟೀಮ್ ಇಂಡಿಯಾ ಇಂಗ್ಲೆಂಡ್​ನಲ್ಲಿ ಗೆಲ್ಲೋದು ಕಷ್ಟದ ಕೆಲಸವೇನಲ್ಲ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment