/newsfirstlive-kannada/media/post_attachments/wp-content/uploads/2025/06/PRASIDH-KRISHNA-5.jpg)
- ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸೋಲು
- ಕೊನೆಯ ದಿನ ಕನ್ನಡದಲ್ಲಿ ಮಾತನಾಡಿದ ಕನ್ನಡಿಗರು
- ರಾಹುಲ್, ಪ್ರಸಿದ್ಧ್ ಕೃಷ್ಣರ ಸಂಭಾಷಣೆ ವೈರಲ್
ಲೀಡ್ಸ್​​ನಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದ ಕೊನೆಯ ದಿನದಾಟದಲ್ಲಿ ಕೆ.ಎಲ್.ರಾಹುಲ್​, ಪ್ರಸಿದ್ಧ್​ ಕೃಷ್ಣ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದಿದ್ದಾರೆ. ಬೌಲಿಂಗ್​ ಮಾಡ್ತಿದ್ದ ಪ್ರಸಿದ್ಧ್​ಗೆ ಕನ್ನಡದಲ್ಲಿ ರಾಹುಲ್​ ಕೆಲವು ಸಲಹೆಗಳನ್ನ ನೀಡಿದ್ದಾರೆ. ಈ ವಿಡಿಯೋ ಸಖತ್​ ವೈರಲ್​ ಆಗಿದೆ.
ಏನಂದ್ರು ರಾಹುಲ್​..?
ಮಗಾ.. ಪ್ರಸಿದ್ಧ್.. ಪ್ರಸಿದ್ಧ್.. ಹೀಗೆ ಇರಲಿ.. ಒಂದು ಹೋದರೆ ಪರ್ವಾಗಿಲ್ಲ ಎನ್ನುತ್ತಾರೆ.. ಆಗ ಪ್ರಸಿದ್ಧ್ ಕೃಷ್ಣ ಪ್ರತಿಕ್ರಿಯಿಸಿ.. ಒಳಗಡೆ ಬೌಲಿಂಗ್ ಮಾಡಲು ಪ್ರಯತ್ನ ಮಾಡ್ತಿದ್ದೀನಿ ಅಂತಾರೆ. ಅದಕ್ಕೆ ಮತ್ತೆ ಕನ್ನಡದಲ್ಲೇ ತಿಳಿ ಹೇಳುವ ರಾಹುಲ್.. ಬೇಡ, ಬೇಡ. ಚೆನ್ನಾಗಿ ಹೋಗ್ತಿದೆ. ಅಲ್ಲೇ ಇರಲಿ ಎನ್ನುತ್ತಾರೆ. ಈ ವಿಡಿಯೋ ಕನ್ನಡಿಗರಿಗೆ, ಕನ್ನಡ ಅಭಿಮಾನಿಗಳಿಗೆ ಕೇಳಲು ತುಂಬಾ ಖುಷಿ ನೀಡ್ತಿದೆ..
ಮಗ ಚೆನ್ನಾಗ್ ಹೋಗ್ತಿದೆ ಮಗ #SonySportsNetwork#GroundTumharaJeetHamari#ENGvIND#NayaIndia#DhaakadIndia#TeamIndia#ExtraaaInnings | @KLRahul@prasidh43pic.twitter.com/fNbb5rl39J
— Sony Sports Network (@SonySportsNetwk) June 24, 2025
ಅಂದ್ಹಾಗೆ ಮೊದಲ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಸೋಲನ್ನು ಕಂಡಿದೆ. ಇಂಗ್ಲೆಂಡ್ ಐದು ವಿಕೆಟ್​ಗಳ ಜಯ ಸಾಧಿಸಿ, ಐದು ಪಂದ್ಯಗಳಲ್ಲಿ 1-0 ಮುನ್ನಡೆಯನ್ನು ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯವು ಜುಲೈ 2 ರಿಂದ ಆರಂಭವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ