/newsfirstlive-kannada/media/post_attachments/wp-content/uploads/2025/06/KL-RAHUL-6.jpg)
ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಬ್ಬರ ಮುಂದುವರೆದಿದೆ. ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ದಾಳಿಯನ್ನ ಧೂಳಿಪಟ ಮಾಡಿದ್ದ ಟೀಮ್ ಇಂಡಿಯಾ ಬ್ಯಾಟರ್ಸ್, ಎರಡನೇ ಇನ್ನಿಂಗ್ಸ್ನಲ್ಲೂ ಮಿಂಚು ಹರಿಸಿದ್ದಾರೆ. ಕನ್ನಡಿಗ ಕೆ.ಎಲ್.ರಾಹುಲ್ರ ಕೆಚ್ಚೆದೆಯ ಹೋರಾಟ ಮತ್ತು ರಿಷಭ್ ಪಂತ್ರ ಆಕ್ರಮಣಕಾರಿ ಬ್ಯಾಟಿಂಗ್, ಟೀಮ್ ಇಂಡಿಯಾಕ್ಕೆ ಭಾರೀ ಮುನ್ನಡೆ ದೊರಕಿಸಿಕೊಟ್ಟಿದೆ. ಆ ಮೂಲಕ ಟೀಂ ಇಂಡಿಯಾಗೆ ಕೊಹ್ಲಿ, ರೋಹಿತ್ ಬಳಿಕ ಮತ್ತೊಂದು ಜೋಡೆತ್ತು ಸಿಕ್ಕಂತಾಗಿದೆ.
ಹೆಡ್ಡಿಂಗ್ಲೆಯಲ್ಲಿ ಟೀಮ್ ಇಂಡಿಯಾ ಫ್ಯಾನ್ಸ್ ‘ಫುಲ್ ಖುಷ್’
ಕೆ.ಎಲ್.ರಾಹುಲ್-ರಿಷಭ್ ಪಂತ್ ಬ್ಯಾಟಿಂಗ್ ನೋಡೋಕೆ ಎರಡು ಕಣ್ಣು ಸಾಲದು. ಒಂದೆಡೆ ರಾಹುಲ್ರ ಕಾಮ್-ಕಂಪೋಸ್ಡ್ ಬ್ಯಾಟಿಂಗ್. ಮತ್ತೊಂದೆಡೆ ರಿಷಭ್ ಪಂತ್ರ ಅಗ್ರೆಸಿವ್-ಅಟ್ಯಾಕಿಂಗ್ ಬ್ಯಾಟಿಂಗ್. ಹೆಂಡ್ಡಿಂಗ್ಲೆಯಲ್ಲಿ ಇವರಿಬ್ಬರ ಕ್ಲಾಸ್ ಌಂಡ್ ಮಾಸ್ ಬ್ಯಾಟಿಂಗ್ ನೋಡಿ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಫುಲ್ ಖುಷ್ ಆದರು.
ಇದನ್ನೂ ಓದಿ: ಶತಕ ಬಾರಿಸ್ತಿದ್ದಂತೆ ಪಲ್ಟಿ ಹೊಡಿ ಎಂದ ಗವಾಸ್ಕರ್.. ಪಂತ್ ಪ್ರತಿಕ್ರಿಯೆ ಹೇಗಿತ್ತು? ಹೃದಯಗೆದ್ದ ವಿಡಿಯೋ..!
ಲೀಡ್ಸ್ನಲ್ಲಿ ಕನ್ನಡಿಗ KL ರಾಹುಲ್ ‘ರಾಕ್ಸ್’!
ಮೊದಲ ಇನ್ನಿಂಗ್ಸ್ನಲ್ಲಿ ರಾಹುಲ್, ಸಾಲಿಡ್ ಟಚ್ನಲ್ಲಿ ಬ್ಯಾಟಿಂಗ್ ನಡೆಸಿದ್ರು. ಆದ್ರೆ ರಾಹುಲ್ಗೆ ಬಿಗ್ ಸ್ಕೋರ್ ಕಲೆಹಾಕಲು ಆಗಲಿಲ್ಲ. 42 ರನ್ಗಳಿಸಿ ಇನ್ನಿಂಗ್ಸ್ ಮುಗಿಸಿದ ರಾಹುಲ್, ಭಾರೀ ನಿರಾಸೆಗೊಂಡ್ರು. 2ನೇ ಇನ್ನಿಂಗ್ಸ್ನಲ್ಲಿ ರಾಹುಲ್, ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ್ರು. ಟೆಸ್ಟ್ ಕ್ರಿಕೆಟ್ನಲ್ಲಿ 9ನೇ ಶತಕ ಸಿಡಿಸಿ ಮಿಂಚಿದ್ರು.
ಇಂಗ್ಲೆಂಡ್ಗೆ ಪಂತ್ ಪವರ್ಫುಲ್ ಪಂಚ್
ಹೆಡ್ಡಿಂಗ್ಲೆಯಲ್ಲಿ ಉಪನಾಯಕ ರಿಷಭ್ ಪಂತ್ ಎಕ್ಸ್ಟ್ರಾರ್ಡಿನರಿ ಬ್ಯಾಟಿಂಗ್ ನಡೆಸಿದ್ರು. 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ಗೆ ಪಂತ್, ಪವರ್ಫುಲ್ ಪಂಚ್ ನೀಡಿದ್ರು. ಇನ್ನಿಂಗ್ಸ್ ಉದ್ದಕ್ಕೂ ಆಂಗ್ಲ ಬೌಲರ್ಗಳನ್ನ ಬೆಂಡೆತ್ತಿದ ವಿಕೆಟ್ ಕೀಪರ್ ಬ್ಯಾಟರ್, 9ನೇ ಟೆಸ್ಟ್ ಶತಕ ಬಾರಿಸಿ ಸಂಭ್ರಮಿಸಿಕೊಂಡ್ರು.
ಇದನ್ನೂ ಓದಿ: KL ರಾಹುಲ್, ಪಂತ್ ಶತಕ ಬಾರಿಸಿದರೂ ಸಂಕಷ್ಟ.. ಕುತೂಹಲದಲ್ಲಿ ಟೆಸ್ಟ್ನ ಕೊನೆಯ ದಿನ!
2 ಇನ್ನಿಂಗ್ಸ್, 2 ಶತಕ, ಪಂತ್ ಹೊಸ ದಾಖಲೆ
ಮೊದಲ ಇನ್ನಿಂಗ್ಸ್ನಲ್ಲಿ 134 ರನ್ ಮತ್ತು 2ನೇ ಇನ್ನಿಂಗ್ಸ್ನಲ್ಲಿ 118 ರನ್ ಕಲೆ ಹಾಕಿದ ಪಂತ್, ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದ್ರು. ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಶತಕ ಸಿಡಿಸಿದ ಭಾರತ ಮೊದಲ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಂತ್ ಪಾತ್ರರಾದರು.
ರಾಹುಲ್-ಪಂತ್ ಮಸ್ತ್ ಆಟ, ಆಂಗ್ಲರು ಪರದಾಟ
4ನೇ ವಿಕೆಟ್ಗೆ ರಾಹುಲ್ ಜೊತೆಯಾದ ರಿಷಭ್ ಪಂತ್, ಶತಕದ ಜೊತೆಯಾಟವಾಡಿದ್ರು. 283 ಬಾಲ್ ಫೇಸ್ ಮಾಡಿದ ಈ ಜೋಡಿ, 195 ರನ್ ಕಲೆಹಾಕಿತು. ಗಂಟೆಗಟ್ಟಲೇ ಕ್ರೀಸ್ನಲ್ಲಿ ನಿಂತು ಬ್ಯಾಟಿಂಗ್ ನಡೆಸಿದ ರಾಹುಲ್ ಮತ್ತು ಪಂತ್, ಆಂಗ್ಲರನ್ನ ಕಾಡಿ ಕಾಡಿ ಸುಸ್ತು ಮಾಡಿದ್ರು.
ಒಟ್ನಲ್ಲಿ, ಲೀಡ್ಸ್ ಪಿಚ್ ಟೀಮ್ ಇಂಡಿಯಾ ಬ್ಯಾಟರ್ಸ್ ಪಾಲಿಗೆ ಲಕ್ಕಿ ಪಿಚ್ ಆಗಿದೆ. ಈಗಾಗಲೇ ಟೆಸ್ಟ್ ಪಂದ್ಯದಲ್ಲಿ 5 ಶತಕಗಳನ್ನ ಸಿಡಿಸಿರುವ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ, ಈ ಪಂದ್ಯ ಅವಿಸ್ಮರಣೀಯ ಪಂದ್ಯವಾಗಿದೆ.
ಇದನ್ನೂ ಓದಿ: ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಮಿಸ್ಟರಿ ಗರ್ಲ್.. ಯಾರು ಈ ಹುಡುಗಿ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ