ಮತ್ತೆ ಆಸರೆಯಾದ ಕನ್ನಡಿಗ KL ರಾಹುಲ್.. ಇವತ್ತು ಕೊನೆಯ ದಿನ, ಮತ್ತಷ್ಟು ಕುತೂಹಲ..!

author-image
Ganesh
Updated On
ಮತ್ತೆ ಆಸರೆಯಾದ ಕನ್ನಡಿಗ KL ರಾಹುಲ್.. ಇವತ್ತು ಕೊನೆಯ ದಿನ, ಮತ್ತಷ್ಟು ಕುತೂಹಲ..!
Advertisment
  • ಕುತೂಹಲ ಘಟ್ಟ ತಲುಪಿದ ಮ್ಯಾಂಚೆಸ್ಟರ್ ಟೆಸ್ಟ್​ ಪಂದ್ಯ
  • ಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​
  • 669 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​​, 311 ರನ್​ ಲೀಡ್

ಇಂಡೋ-ಇಂಗ್ಲೆಂಡ್​​​ ಮ್ಯಾಂಚೆಸ್ಟರ್​ ಟೆಸ್ಟ್​ ಪಂದ್ಯ ಕುತೂಹಲ ಘಟ್ಟ ತಲುಪಿದೆ. 4ನೇ ದಿನದಾಟದ ಮೊದಲ ಸೆಷನ್​ನಲ್ಲಿ ಮೇಲುಗೈ ಸಾಧಿಸಿದ ಇಂಗ್ಲೆಂಡ್​​, ಬಿಗ್​ಸ್ಕೋರ್​ ಕಲೆ ಹಾಕಿ ಮರೆದಾಡ್ತಿತ್ತು. ಆ ಬಳಿಕ ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​​ ಹೋರಾಟಕ್ಕೆ ಆಂಗ್ಲರ ಪಡೆ ಪರದಾಡಿ ಬಿಡ್ತು.

7 ವಿಕೆಟ್​ ನಷ್ಟಕ್ಕೆ 544 ರನ್​ಗಳೊಂದಿಗೆ 4 ದಿನದಾಟ ಆರಂಭಿಸಿದ ಇಂಗ್ಲೆಂಡ್​ ತಂಡಕ್ಕೆ ಅರಂಭದಲ್ಲೇ ವೇಗಿ ಜಸ್​​ಪ್ರಿತ್​ ಬೂಮ್ರಾ ಶಾಕ್​ ನೀಡಿದ್ರು. ಬೂಮ್ರಾ,26 ರನ್​ಗಳಿಸಿದ್ದ ಲಯಾಮ್​ ಡಾಸನ್​ ವಿಕೆಟ್​ ಉರುಳಿಸಿದ್ರು. ಅತ್ತ ಬೆನ್​​ ಸ್ಟೋಕ್ಸ್​​ ಅಬ್ಬರದ ಆಟ ಮುಂದುವರೆಸಿದ್ರು. 77 ರನ್​ಗಳೊಂದಿಗೆ ಬ್ಯಾಟಿಂಗ್​ ಮುಂದುವರೆಸಿದ ಸ್ಟೋಕ್ಸ್​​, 164 ಎಸೆತಗಳಲ್ಲಿ ಶತಕದ ಗಡಿ ದಾಟಿದ್ರು.
ಶತಕದ ಬಳಿಕ ಮತ್ತಷ್ಟು ವೇಗವಾಗಿ ರನ್​ ಕಲೆ ಹಾಕಿದ ಸ್ಟೋಕ್ಸ್​ 198 ಎಸೆತಗಳಲ್ಲಿ 141 ರನ್​ಗಳಿಸಿದ್ರು. 11 ಬೌಂಡರಿ, 3 ವಿಕೆಟ್​ ಉರುಳಿಸಿದ್ರು. ಅಂತಿಮವಾಗಿ ರವೀಂದ್ರ ಜಡೇಜಾ, ಸ್ಟೋಕ್ಸ್​ ಅಬ್ಬರಕ್ಕೆ ಬ್ರೇಕ್​ ಹಾಕಿದ್ರು. 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಬ್ರೇಂಡನ್​ ಕರ್ಸ್​ ಟೀಮ್​ ಇಂಡಿಯಾ ಬೌಲರ್​ಗಳನ್ನ ಕಾಡಿದ್ರು. 54 ಎಸೆತಗಳಲ್ಲಿ 47 ರನ್​ಗಳಿಸಿದ ಬ್ರೆಂಡನ್​ ಕರ್ಸ್​​ ತಂಡ ಲೀಡ್​ನ ಹೆಚ್ಚಿಸಿದ್ರು.

669 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​​! 311 ರನ್​ ಲೀಡ್​

157.1ನೇ ಓವರ್​ನಲ್ಲಿ ರವೀಂದ್ರ ಜಡೇಜಾ, ಬ್ರೆಂಡನ್​ ಕರ್ಸ್​ ಆಟಕ್ಕೆ ಅಂತ್ಯ ಹಾಡಿದ್ರು. ಇದ್ರೊಂದಿಗೆ ಇಂಗ್ಲೆಂಡ್ ತಂಡ 669 ರನ್​ಗಳಿಗೆ ಮೊದಲ ಇನ್ನಿಂಗ್ಸ್​ ಆಲೌಟ್​ ಆಯ್ತು. 311 ರನ್​ಗಳ ಬಿಗ್​ ಲೀಡ್​ ಪಡೆದುಕೊಳ್ತು.

ಇದನ್ನೂ ಓದಿ: ಸೊಸೆ ವಿರುದ್ಧ ಅತ್ತೆಗೆ ವಿಷ ನೀಡಿ ಜೀವ ತೆಗೆದ ಆರೋಪ; ಭಾರೀ ಸಂಚಲನ ಸೃಷ್ಟಿಸಿದ ಪತಿ, ಪತ್ನಿ ಪ್ರತ್ಯಾರೋಪಗಳು

ಟೀಮ್​ ಇಂಡಿಯಾಗೆ ಆರಂಭದಲ್ಲೇ ಆಘಾತ

ಬಳಿಕ ಇನ್ನಿಂಗ್ಸ್​ ಆರಂಭಿಸಿದ ಟೀಮ್​ ಇಂಡಿಯಾಗೆ ಕ್ರಿಸ್​ವೋಕ್ಸ್​ ಶಾಕ್​ ನೀಡಿದ್ರು. ಮೊದಲ ಓವರ್​ನಲ್ಲೇ ಯಶಸ್ವಿ ಜೈಸ್ವಾಲ್​, ಸಾಯಿ ಸುದರ್ಶನ್​ ವಿಕೆಟ್​​ ಉರುಳಿಸಿದ್ರು. ಲಂಚ್​ ಬ್ರೇಕ್​ ವೇಳೆಗೆ 2 ವಿಕೆಟ್​ ಕಳೆದುಕೊಂಡ ಟೀಮ್​ ಇಂಡಿಯಾ ಗಳಿಸಿದ್ದು ಜಸ್ಟ್​ 1 ರನ್​ ಮಾತ್ರ.

ಕುಸಿದ ತಂಡಕ್ಕೆ ಆಸರೆಯಾದ ರಾಹುಲ್​-ಗಿಲ್!

ಆರಂಭದಲ್ಲೇ ಆಘಾತ ಕಂಡ ತಂಡಕ್ಕೆ ಕೆ.ಎಲ್​ ರಾಹುಲ್​, ಶುಭ್​ಮನ್​ ಗಿಲ್​ ಜೊತೆಯಾಟದ ಬಲ ತುಂಬಿದ್ರು. ಇಂಗ್ಲೆಂಡ್​​ನ ಬಿಗಿ ಬೌಲಿಂಗ್​ ದಾಳಿಯನ್ನ ಎಚ್ಚರಿಕೆಯ ಆಟದಿಂದಲೇ ಎದುರಿಸಿದ್ರು. ಆಂಗ್ಲ ಬೌಲರ್​ಗಳನ್ನ ತಾಳ್ಮೆಯಿಂದಲೇ ಕಾಡಿದ ಈ ಜೋಡಿ ಕುಸಿದ ತಂಡಕ್ಕೆ ಚೇತರಿಕೆ ನೀಡಿತು. ರಾಹುಲ್​ ರಕ್ಷಣಾತ್ಮಕ ಆಟವಾಡಿದ್ರೆ, ಶುಭ್​ಮನ್​ ಗಿಲ್​ ಕೌಂಟರ್​ ಅಟ್ಯಾಕ್​ ನಡೆಸಿದ್ರು. 77 ಎಸೆತಕ್ಕೆ ಕ್ಯಾಪ್ಟನ್​ ಗಿಲ್​ ಹಾಫ್​ ಸೆಂಚುರಿ ಸಿಡಿಸಿದ್ರು. 2ನೇ ಸೆಷನ್​ನಲ್ಲಿ ವಿಕೆಟ್​ ಬಿಟ್ಟುಕೊಡದ ರಾಹುಲ್​, ಗಿಲ್ ಟೀ ಬ್ರೇಕ್​ ವೇಳೆಗೆ 86 ರನ್​​ಗಳ ಕಾಣಿಕೆ ನೀಡಿದ್ರು.

ಇದನ್ನೂ ಓದಿ: ಕೋಟಿ ಕೋಟಿ ಮೌಲ್ಯದ ಆಸ್ತಿ, 15 ಕಂಪನಿ, ಐಷಾರಾಮಿ ಜೀವನ ಎಲ್ಲ ಬಿಟ್ಟ.. ಶಿವಭಕ್ತನಾದ ಉದ್ಯಮಿ!

publive-image

ರಾಹುಲ್​-ಗಿಲ್​ ಶತಕದ ಜೊತೆಯಾಟ, ಆಂಗ್ಲರ ಪರದಾಟ

3ನೇ ಸೆಷನ್​ನಲ್ಲೂ ಕೆ.ಎಲ್​ ರಾಹುಲ್​, ಶುಭ್​​ಮನ್​​ ಗಿಲ್​ ಬೊಂಬಾಟ್​ ಬ್ಯಾಟಿಂಗ್​ ನಡೆಸಿದ್ರು. ರಾಹುಲ್​​-ಗಿಲ್​ ಆಟಕ್ಕೆ ಇಂಗ್ಲೆಂಡ್​ ಬೌಲರ್ಸ್​ ಸುಸ್ತು ಹೊಡೆದ್ರು. ಇಂಗ್ಲೆಂಡ್​ ನಾಯಕನ ಯಾವ ಪ್ಲಾನ್​​ ಕೂಡ ವರ್ಕೌಟ್​ ಆಗಲಿಲ್ಲ. ಬೌಲರ್​​ಗಳ ಆರ್ಭಟವೂ ನಡೆಯಲಿಲ್ಲ.

ತಾಳ್ಮೆಯ ಆಟವನ್ನ ಮುಂದುವರೆಸಿದ ಕೆ.ಎಲ್.ರಾಹುಲ್​​ 137 ಎಸೆತಗಳಲ್ಲಿ ಹಾಫ್​ ಸೆಂಚುರಿ ಸಿಡಿಸಿದ್ರು. ಸಾಲಿಡ್​ ಜೊತೆಯಾಟ ಕಟ್ಟಿದ ರಾಹುಲ್​-ಗಿಲ್​ ಕೊನೆಯ ಸೆಷನ್​ನಲ್ಲೂ ಇಂಗ್ಲೆಂಡ್​ ಬೌಲರ್​ಗಳನ್ನ ಸತಾಯಿಸಿದ್ರು. 3ನೇ ವಿಕೆಟ್​ಗೆ ಬರೋಬ್ಬರಿ 377 ಎಸೆತಕ್ಕೆ ಅಜೇಯ 174 ರನ್​ಗಳ ಕಾಣಿಕೆ ನೀಡಿದೆ.

ಕೆ.ಎಲ್​ ರಾಹುಲ್​ - ಶುಭ್​ಮನ್​ ಗಿಲ್​ ಹೋರಾಟದ ಫಲವಾಗಿ 4ನೇ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 2 ವಿಕೆಟ್​ ನಷ್ಟಕ್ಕೆ 174 ರನ್​​ಗಳಿಸಿದೆ. 87 ರನ್​ಗಳೊಂದಿಗೆ ರಾಹುಲ್​, 78 ರನ್​ಗಳೊಂದಿಗೆ ಶುಭ್​ಮನ್​ ಗಿಲ್​ ಕ್ರಿಸ್​ ಕಾಯ್ದುಕೊಂಡಿದ್ದಾರೆ. ಟೀಮ್​ ಇಂಡಿಯಾ ಇನ್ನೂ 137 ರನ್​ಗಳ ಹಿನ್ನಡೆಯಲ್ಲಿರೋದ್ರಿಂದ ಇಂದಿನ ಕೊನೆಯ ದಿನದಾಟ ತೀವ್ರ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್​ ತನಿಖೆ ಚುರುಕು; ರಹಸ್ಯ ಹೇಳ್ತೀನಿ ಎಂದಿದ್ದ ದೂರುದಾರನ ವಿಚಾರಣೆ ಹೇಗಿತ್ತು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment