/newsfirstlive-kannada/media/post_attachments/wp-content/uploads/2024/07/KL-Rahu_Kohli.jpg)
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಮುಕ್ತಾಯವಾಗಿದೆ. ಈ ಬೆನ್ನಲ್ಲೇ ನಾಡಿದ್ದರಿಂದ 3 ಏಕದಿನ ಪಂದ್ಯಗಳ ಸರಣಿ ಶುರುವಾಗಲಿದೆ. ಈಗಾಗಲೇ ಶ್ರೀಲಂಕಾ ವಿರುದ್ಧದ ಸರಣಿಗೆ ಬಲಿಷ್ಠ ಟೀಮ್ ಇಂಡಿಯಾ ಅನೌನ್ಸ್ ಆಗಿದೆ.
ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ, ರೋಹಿತ್ 20 ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ರೆಸ್ಟ್ ಕೂಡ ಕೇಳಿದ್ದರು. ಬಿಸಿಸಿಐ ಕೊಹ್ಲಿ, ರೋಹಿತ್ ಮತ್ತು ಬುಮ್ರಾಗೆ ರೆಸ್ಟ್ ನೀಡಿತ್ತು.
ಗಂಭೀರ್ ಕೋಚ್ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಸಮ್ಮತಿಸಿದ್ದು, ಈಗ ತಂಡಕ್ಕೆ ವಾಪಸ್ಸಾಗಿದ್ದಾರೆ. ಹಲವು ದಿನಗಳ ಬಳಿಕ ಕೆ.ಎಲ್ ರಾಹುಲ್ ಕೂಡ ಸ್ಟ್ರಾಂಗ್ ಕಮ್ಬ್ಯಾಕ್ ಮಾಡಿದ್ದಾರೆ.
Future RCB captain with Virat Kohli #INDvsSL#ViratKohli#CricketTwitter
— RCBIANS OFFICIAL (@RcbianOfficial)
Future RCB captain with Virat Kohli #INDvsSL#ViratKohli#CricketTwitter
pic.twitter.com/tC0KMGxGHg— RCBIANS OFFICIAL (@RcbianOfficial) July 31, 2024
">July 31, 2024
ಕೊಹ್ಲಿ, ಕೆ.ಎಲ್ ರಾಹುಲ್ ವಿಡಿಯೋ ವೈರಲ್!
ಸದ್ಯ ನೆಟ್ನಲ್ಲಿ ಕೊಹ್ಲಿ, ಕೆ.ಎಲ್ ರಾಹುಲ್ ಪ್ರಾಕ್ಟೀಸ್ ಮಾಡುತ್ತಿರೋ ವಿಡಿಯೋ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಆರ್ಸಿಬಿ ಫ್ಯೂಚರ್ ಕ್ಯಾಪ್ಟನ್ ಕೆ.ಎಲ್ ರಾಹುಲ್ ಅವರು ವಿರಾಟ್ ಕೊಹ್ಲಿ ಜತೆಗೆ ಇದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಇಬ್ಬರು ಒಟ್ಟಿಗೆ ಪ್ರಾಕ್ಟೀಸ್ ಮಾಡೋ ಮೂಲಕ ಆರ್ಸಿಬಿಗೆ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟಿದ್ದಾರೆ.
ಏಕದಿನ ಸರಣಿಗೆ ಭಾರತದ ತಂಡ ಹೀಗಿದೆ..!
ರೋಹಿತ್ ಶರ್ಮಾ (ಕ್ಯಾಪ್ಟನ್), ಶುಭ್ಮನ್ ಗಿಲ್ (ವೈಎಸ್ ಕ್ಯಾಪ್ಟನ್), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಶ್‌ದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್