/newsfirstlive-kannada/media/post_attachments/wp-content/uploads/2025/04/KL_RAHUL_FAMILY.jpg)
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಕೆ.ಎಲ್ ರಾಹುಲ್​ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 33ನೇ ವರ್ಷಕ್ಕೆ ಕಾಲಿಟ್ಟಿರುವ ಕ್ರಿಕೆಟರ್​ ಕನ್ನಡಿಗ ಬರ್ತ್​ಡೇ ಸೆಲೆಬ್ರೆಷನ್ ಮೂಡ್​ನಲ್ಲಿದ್ದಾರೆ. ಇದರ ಜೊತೆಯೇ ಮಾರ್ಚ್​ 24 ರಂದು ಜನಿಸಿದ ತಮ್ಮ ಮುದ್ದಾದ ಮಗುವಿಗೆ ನಾಮಕರಣ ಕೂಡ ಮಾಡಿದ್ದಾರೆ.
ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ಕಳೆದ ತಿಂಗಳು ಅಂದರೆ ಮಾರ್ಚ್​ 24 ರಂದು ಕ್ಯೂಟ್​ ಆಗಿರೋ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅಂದಿನಿಂದ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ ಎನ್ನಬಹುದು. ಕೆ.ಎಲ್ ರಾಹುಲ್, ಅಥಿಯಾ ತಂದೆ, ತಾಯಿ ಜವಾಬ್ದಾರಿ ತೆಗೆದುಕೊಂಡರೇ, ಅಥಿಯಾ ಅವರ ತಂದೆ ನಟ ಸುನಿಲ್ ಶೆಟ್ಟಿಯವರು ಅಜ್ಜನಾಗಿ ತಮ್ಮ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ RCB vs CSK ಹೈವೋಲ್ಟೇಜ್​ ಪಂದ್ಯ ಯಾವಾಗ? ಟಿಕೆಟ್‌ಗಳು ಸೋಲ್ಡ್ ಔಟ್?
/newsfirstlive-kannada/media/post_attachments/wp-content/uploads/2025/04/KL_RAHUL_FAMILY_1.jpg)
ಕಳೆದ ತಿಂಗಳು ಜನಿಸಿದ್ದ ತಮ್ಮ ಮುದ್ದಾದ ಕಂದಮ್ಮಗೆ ಇವಾರಾ ಎಂದು ಕೆ.ಎಲ್ ರಾಹುಲ್ ಅವರ ಪತ್ನಿ ಅಥಿಯಾ ಶೆಟ್ಟಿ ಅವರು ನಾಮಕರಣ ಮಾಡಿದ್ದಾರೆ. ಫೋಟೋದಲ್ಲಿ ಮಗಳನ್ನು ಎತ್ತಿಕೊಂಡಿರುವ ರಾಹುಲ್ ಜೊತೆಯಲ್ಲಿ ಅಥಿಯಾ ಕೂಡ ಇದ್ದಾರೆ. ಮಗಳು ದೇವರ ಕೊಡುಗೆ ಎಂದು ಟ್ಯಾಗ್​​ಲೈನ್​ ಬರೆದುಕೊಂಡಿದ್ದಾರೆ. ಮಗಳ ಹೆಸರು ಇವಾರಾ ಆಗಿದ್ದು ಇದರ ಅರ್ಥ ದೇವರ ಕೊಡುಗೆ ಎಂದು ದಂಪತಿ ತಿಳಿಸಿದ್ದಾರೆ. ಸದ್ಯ ಈ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಸೆಲೆಬ್ರಿಟಿಸ್ ಸೇರಿದಂತೆ ಸಾಕಷ್ಟು ಜನರು ಕಮೆಂಟ್ಸ್ ಮಾಡುತ್ತಿದ್ದಾರೆ.
ಐಪಿಎಲ್​ ಸೀಸನ್​ 18ರಲ್ಲಿ ಅಮೋಘವಾದ ಪ್ರದರ್ಶನ ನೀಡುತ್ತಿರುವ ಕೆ.ಎಲ್ ರಾಹುಲ್​ ಅವರು ಮ್ಯಾಚ್​ ವಿನ್ನಿಂಗ್​ ಪರ್ಫಾಮೆನ್ಸ್​ ನೀಡುತ್ತಿದ್ದಾರೆ. ಚಿನ್ನಸ್ವಾಮಿ ಪಿಚ್​ನಲ್ಲೂ ಏಕಾಂಗಿಯಾಗಿ ಹೋರಾಡಿ ಆರ್​ಸಿಬಿ ವಿರುದ್ಧದ ಪಂದ್ಯವನ್ನು ಗೆಲ್ಲಿಸಿದ್ದರು. ಇದಾದ ಮೇಲೆ ರಾಜಸ್ಥಾನ್​ ಜೊತೆ ನಡೆದ ಸೂಪರ್​ ಓವರ್​ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಜಯ ತಂದಿದ್ದರು. ಈ ಎರಡು ಪಂದ್ಯದಲ್ಲೂ ಕೆ.ಎಲ್ ರಾಹುಲ್​ ಪ್ರಮುಖವಾದ ಪಾತ್ರ ವಹಿಸಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us