/newsfirstlive-kannada/media/post_attachments/wp-content/uploads/2025/03/KL-RAHUL-3.jpg)
ಈ ಬಾರಿಯ ಐಪಿಎಲ್‌ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ಪರ ಬ್ಯಾಟ್ ಬೀಸಲಿದ್ದಾರೆ. ರಾಹುಲ್ ಬ್ಯಾಟಿಂಗ್ ಕಣ್ತುಂಬಿಕೊಳ್ಳಲು ಕಾಯ್ತಿರುವ ಅಭಿಮಾನಿಗಳಿಗೆ ಪ್ರಶ್ನೆಯೊಂದು ಕಾಡಿದೆ. ಅದು ರಾಹುಲ್ ಅವರ ಬ್ಯಾಟಿಂಗ್ ಆರ್ಡರ್!
ಕೆ.ಎಲ್.ರಾಹುಲ್, ಐಪಿಎಲ್‌ನಲ್ಲಿ ಅಗ್ರ ಕ್ರಮಾಂಕದಲ್ಲೇ ಹೆಚ್ಚು ಬ್ಯಾಟ್ ಮಾಡಿದವರು. ಭಾರತ ತಂಡ ಪ್ರತಿನಿಧಿಸಿದಾಗಲೂ ಬಹುತೇಕ ಸಂದರ್ಭಗಳಲ್ಲಿ ಆರಂಭಿಕ ಆಟಗಾರರಾಗಿಯೇ ಕಣಕ್ಕಿಳಿದವರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಪರ, ಅವರು ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಬೀಸುವುದಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಆರ್ಸಿಬಿಗೆ ಒಂದೇ ಒಂದು ವೀಕ್ನೆಸ್.. ವಿದೇಶಿ ಆಟಗಾರರು ವಿಲನ್ ಆಗಿಬಿಡ್ತಾರಾ..?
ಮಾಹಿತಿಗಳ ಪ್ರಕಾರ, ಫಾಫ್ ಡುಪ್ಲೆಸಿಸ್ ಹಾಗೂ ಜಾಕ್ ಫ್ರೇಸರ್ ಮೆಕ್‌ಗುರ್ಕ್ ಓಪನಿಂಗ್ ಬ್ಯಾಟ್ಸ್‌ಮನ್‌ಗಳು. ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಬ್ಯಾಟಿಂಗ್ ಮಾಡಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಕೇವಲ 6 ಬ್ಯಾಟ್ಸ್‌ಮನ್‌ಗಳು ಆರಂಭಿಕರಾಗಿ 4000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಕೆ.ಎಲ್.ರಾಹುಲ್ ಹೆಸರೂ ಇದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕ ಬದಲಾಯಿಸುವ ಬಗ್ಗೆ ಯೋಚಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: 900 ಗಂಟೆ ಸಂಶೋಧನೆ, 150ಕ್ಕೂ ಹೆಚ್ಚು ಪ್ರಯೋಗ.. 9 ತಿಂಗಳ ಸುನಿತಾ ವಿಲಿಯಮ್ಸ್ ಏನು ಮಾಡಿದರು?
ಯಾಕೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್?
ಇತ್ತೀಚೆಗೆ ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್, ಐಪಿಎಲ್ನಿಂದ ಹಿಂದೆ ಸರಿದಿದ್ದಾರೆ. ಅವರ ಅನುಪಸ್ಥಿತಿಯನ್ನು ರಾಹುಲ್ ಸರಿದೂಗಿಸಬಹುದು ಅನ್ನೋದು ಡಿಸಿ ಲೆಕ್ಕಾಚಾರ. ಮೆಕ್‌ಗುರ್ಕ್ ಫಾಫ್ ಡು ಪ್ಲೆಸಿಸ್ ಟಾಪ್ ಆರ್ಡರ್ನಲ್ಲಿ ಬ್ಯಾಟಿಂಗ್ ಮಾಡಿದರೆ, ಅಭಿಷೇಕ್ ಪೊರೆಲ್ 3 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ. ಕೆಎಲ್ ರಾಹುಲ್, ಐಪಿಎಲ್‌ನಲ್ಲಿ 99 ಇನ್ನಿಂಗ್ಸ್ ಆಡಿದ್ದಾರೆ. 48.64 ಸರಾಸರಿ ಮತ್ತು 136.92 ಸ್ಟ್ರೈಕ್ ರೇಟ್‌ನೊಂದಿಗೆ 4183 ರನ್ ಗಳಿಸಿದ್ದಾರೆ. ಆರಂಭಿಕರಾಗಿ 4 ಶತಕ, 35 ಬಾರಿ ಅರ್ಧ ಶತಕ ಬಾರಿಸಿದ್ದಾರೆ. ಮಾರ್ಚ್ 22 ರಿಂದ ಐಪಿಎಲ್ ಶುರುವಾಗ್ತಿದೆ.
ಇದನ್ನೂ ಓದಿ: ಸಾಗರದಲ್ಲಿ ಬಂದಿಳಿದ ಸಾಹಸಿಗೆ ಡಾಲ್ಫಿನ್ಗಳು ಸ್ವಾಗತಕೋರಿದವು.. ವಿಡಿಯೋ ವೈರಲ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್