newsfirstkannada.com

ನೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?

Share :

Published July 26, 2024 at 1:40pm

    ಕ್ಲಾಸಿಕ್​ ಕೆ.ಎಲ್​ ರಾಹುಲ್​ ಬ್ಯಾಟಿಂಗ್ ಉಗ್ರವತಾರ ಹೇಗಿದೆ ಗೊತ್ತಾ?

    ಸ್ಥಾನ ಬೇಕಂದರೆ ರಾಹುಲ್​ ಭರ್ಜರಿ ಪರ್ಫಾಮೆನ್ಸ್ ನೀಡಬೇಕಿದೆ!

    ಕ್ಯಾಪ್ಟನ್​ ರಾಹುಲ್​ಗೆ ಗೇಟ್​ಪಾಸ್​ ನೀಡುತ್ತಾ ಲಕ್ನೋ ಫ್ರಾಂಚೈಸಿ?

ಸಿಂಹಳೀಯರ ನಾಡಿನ ಸವಾಲಿಗೆ ಕನ್ನಡಿಗನ ಭರ್ಜರಿ ತಯಾರಿ ಆರಂಭವಾಗಿದೆ. ನೆಟ್ಸ್​ನಲ್ಲಿ ಆರ್ಭಟಿಸಿರೋ ಚಿಕ್ಕ ವಿಡಿಯೋ ಹಂಚಿಕೊಂಡಿರೋ ರಾಹುಲ್​, ದೊಡ್ಡ ಸಂದೇಶ ರವಾನಿಸಿದ್ದಾರೆ. ಈ ಹಿಂದೆ ಅನುಭವಿಸಿದ ಟೀಕೆಗಳಿಗೆ ಖಡಕ್​ ಆನ್ಸರ್​ ನೀಡೋ ಪಣ ತೊಟ್ಟಿದ್ದಾರೆ. ಕ್ಲಾಸಿಕ್​ ಕೆ.ಎಲ್​ ರಾಹುಲ್​ ಉಗ್ರವತಾರ ಹೇಗಿದೆ ಗೊತ್ತಾ?.

ಇದನ್ನೂ ಓದಿ: ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?

17 ಮೇ 2024… ಇಂದಿಗೆ ಸರಿಯಾಗಿ 70 ದಿನಗಳ ಹಿಂದೆ ಮೈದಾನಕ್ಕಿಳಿದಿದ್ದು. ಅಂದು ಮುಂಬೈ ಇಂಡಿಯನ್ಸ್​ ಎದುರು ಭರ್ಜರಿ ಅರ್ಧಶತಕ ಸಿಡಿಸಿ ಐಪಿಎಲ್​ ಕ್ಯಾಂಪೇನ್​ ಅಂತ್ಯಗೊಳಿಸಿದ್ದ ಕನ್ನಡಿಗ ಕೆ.ಎಲ್​ ರಾಹುಲ್​ ಇದೀಗ ಕಮ್​ಬ್ಯಾಕ್​ಗೆ ಸಜ್ಜಾಗಿದ್ದಾರೆ. ಕಳೆದ 2 ತಿಂಗಳುಗಳಿಂದ ಕುಟುಂಬಕ್ಕೆ ಸಮಯ ಮೀಸಲಿಟ್ಟಿದ್ದ, ರಾಹುಲ್ ಸುತ್ತಾಟಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಫೀಲ್ಡ್​ಗಿಳಿಯಲು ರೆಡಿಯಾಗಿದ್ದಾರೆ.

ಇದನ್ನೂ ಓದಿ: ಕಾರ್ಗಿಲ್​ ಯುದ್ಧಕ್ಕೆ ಇಂದು ರಜತ ಮಹೋತ್ಸವ.. ‘ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತ್ತಿಲ್ಲ’; PM ಮೋದಿ

ಸಿಂಹಳೀಯರ ಎದುರು ತೊಡೆತಟ್ಟಲು ರಾಹುಲ್​ ರೆಡಿ.!

ಕಳೆದ 2 ತಿಂಗಳಿಂದ ಮೈದಾನದಿಂದ ದೂರ ಉಳಿದಿದ್ದ ಕೆ.ಎಲ್​ ರಾಹುಲ್​, ಮತ್ತೆ ಮೈದಾನಕ್ಕಿಳಿದಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಸಿದ್ಧತೆಯನ್ನ ಆರಂಭಿಸಿದ್ದಾರೆ. ಬೆಂಗಳೂರಿನ ಎನ್​ಸಿಎನಲ್ಲಿ ಬೀಡು ಬಿಟ್ಟಿರುವ ರಾಹುಲ್​ ಬ್ಯಾಟ್​ ಹಿಡಿದು ಘರ್ಜಿಸಿದ್ದಾರೆ. ನೆಟ್ಸ್​ನಲ್ಲಿ ಭರ್ಜರಿ ಸಮರಾಭ್ಯಾಸ ನಡೆಸಿದ್ದಾರೆ.

ಬದಲಾಯ್ತು ಆಟ.., ನೆಟ್ಸ್​ನಿಂದಲೇ ಸಂದೇಶ.!

ನೆಟ್ಸ್​ನಲ್ಲಿ ಅಭ್ಯಾಸ ಮಾಡ್ತಿರೋ ಚಿಕ್ಕ ವಿಡಿಯೋವನ್ನ ರಾಹುಲ್​ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದಿದ್ದ ರಾಹುಲ್​ಗೂ​, ಸಿಂಹಳೀಯರ ನಾಡಲ್ಲಿ ತೊಡೆತಟ್ಟಲು ಸಜ್ಜಾಗ್ತಿರೋ ರಾಹುಲ್​ಗೂ ಅಜಗಜಾಂತರ ವ್ಯತ್ಯಾಸವಿದೆ ಅನ್ನೋ ದೊಡ್ಡ ಸಂದೇಶ ಈ ಚಿಕ್ಕ ವಿಡಿಯೋ ನೀಡ್ತಿದೆ. ಕ್ಲಾಸಿಕ್​ ಆಟದಿಂದಲೇ ಹೆಸರುವಾಸಿಯಾಗಿರೋ ರಾಹುಲ್​, ಇಲ್ಲಿ ಅಗ್ರೆಸ್ಸಿವ್​ ಅವತಾರ ಎತ್ತಿದ್ದಾರೆ. ಪ್ರತಿ ಎಸೆತವನ್ನೂ ಬೌಂಡರಿ, ಸಿಕ್ಸರ್​​ ಗಡಿ ದಾಟಿಸೋ ಯತ್ನ ಮಾಡಿದ್ದಾರೆ.

ನಿಧಾನಗತಿಯ ಬ್ಯಾಟಿಂಗ್​.., ಸಾಧಾರಣ ಸ್ಟ್ರೈಕ್​ರೇಟ್​.!

ಕೆ.ಎಲ್​ ರಾಹುಲ್​ ಬ್ಯಾಟಿಂಗ್​ ಶೈಲಿ ಬದಲಾಗಿರೋದಕ್ಕೆ ಕಾರಣವೂ ಇದೆ. ಐಪಿಎಲ್​ ಸೀಸನ್​ 18ಕ್ಕೆ ಫ್ರಾಂಚೈಸಿಗಳ ವಲಯದಲ್ಲಿ ಸಿದ್ಧತೆ ಆರಂಭವಾಗಿದ್ದು, ರಿಟೈನ್​, ರಿಲೀಸ್​ ಲೆಕ್ಕಾಚಾರ ಜೋರಾಗಿದೆ. ರಾಹುಲ್​ ನಾಯಕನಾಗಿರೋ ಲಕ್ನೋ ಸೂಪರ್​ ಜೈಂಟ್ಸ್​​ ಕೂಡ ಸಿದ್ಧತೆಯನ್ನ ಆರಂಭಿಸಿದೆ. ಆದ್ರೆ, ಕ್ಯಾಪ್ಟನ್​ ರಾಹುಲ್​ಗೆ ಗೇಟ್​ಪಾಸ್​ ನೀಡೋ ಚಿಂತನೆಯಲ್ಲಿದೆ. ಇದಕ್ಕೆ ಕಾರಣ ಏನು ಗೊತ್ತಾ ಸಾಧಾರಣ ಸ್ಟ್ರೈಕ್​ರೇಟ್​.

ಲಕ್ನೋ ಸೂಪರ್​ ಜೈಂಟ್ಸ್​ ಮಾತ್ರವಲ್ಲ.. ಟೀಮ್​ ಇಂಡಿಯಾದ ಟಿ20 ತಂಡದಿಂದಲೂ ಕೆ.ಎಲ್​ ರಾಹುಲ್​ ದೂರಾಗಿದ್ದಾರೆ. ಇದಕ್ಕೂ ನಿಧಾನಗತಿಯ ಬ್ಯಾಟಿಂಗ್​ ಹಾಗೂ ಸಾಧಾರಣ ಸ್ಟ್ರೈಕ್​ರೇಟ್​ ಕಾರಣವಾಗಿದೆ. ಈ ಕಾರಣದಿಂದಲೇ ಕ್ಲಾಸಿಕ್​ ಆಟವಾಡ್ತಿದ್ದ ಕೆ.ಎಲ್​ ರಾಹುಲ್​ ಉಗ್ರಾವತಾರ ಎತ್ತಿದ್ದಾರೆ. ತನ್ನ ತಾಕತ್ತನ್ನ ನಿರೂಪಿಸಲು ಅಭ್ಯಾಸದ ಅಖಾಡದಲ್ಲಿ ಭರ್ಜರಿ ತಯಾರಿ ನಡೆಸೋ ಮೂಲಕ ಕನ್ನಡಿಗ ಸಜ್ಜಾಗ್ತಿದ್ದಾರೆ.

ಇದನ್ನೂ ಓದಿ: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಯಾರಾಗ್ತಾರೆ.. ಡಿ.ಕೆ ಶಿವಕುಮಾರ್ ಬೆಂಬಲ ಯಾರಿಗೆ..?

ಪ್ರತಿಷ್ಠಿತ ಟೂರ್ನಿಗಳಲ್ಲಿ ಆಡೋದೆ ರಾಹುಲ್​ ಟಾರ್ಗೆಟ್.!

ಭಾರತ ತಂಡ ಆಡಿದ ಬಹುತೇಕ ಪ್ರಮುಖ ಟೂರ್ನಿಗಳಲ್ಲಿ ಆಡಿದ್ದ ರಾಹುಲ್​, 2024ರ ಟಿ20 ವಿಶ್ವಕಪ್​ ತಂಡದಿಂದ ಹೊರ ಬಿದ್ದಿದ್ರು. ತಂಡದಲ್ಲಿ ಸ್ಥಾನ ಸಿಗದ ಬೇಸರ ರಾಹುಲ್​ರನ್ನ ಕಾಡಿತ್ತು. ಇದೀಗ ಮುಂದಿನ ವರ್ಷ ಟೀಮ್​ ಇಂಡಿಯಾ ಚಾಂಪಿಯನ್ಸ್​ ಟ್ರೋಫಿ ಆಡಲಿದೆ. ಆ ಬಳಿಕ 2026ರಲ್ಲಿ T20 ವಿಶ್ವಕಪ್​ ಟೂರ್ನಿ, ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​​, 2027ರಲ್ಲಿ ಏಕದಿನ ವಿಶ್ವಕಪ್​ ಟೂರ್ನಿಗಳನ್ನ ಆಡಲಿದೆ. ಈ ಪ್ರತಿಷ್ಠಿತ ಐಸಿಸಿ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಪರ ಆಡೋದು ರಾಹುಲ್​ ಕನಸಾಗಿದೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಸಾವು.. ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಪೋಷಕರು

ಪ್ರತಿಷ್ಠಿತ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಪರ ಆಡಬೇಕಂದ್ರೆ, ಮುಂದಿರೋ ಎಲ್ಲಾ ಪಂದ್ಯಗಳು ಡು ಆರ್​ ಡೈ ಪಂದ್ಯಗಳೇ. ಲಂಕಾ ಸರಣಿಯಂತೂ ಕರಿಯರ್​ನ ಭವಿಷ್ಯವನ್ನೇ ನಿರ್ಧರಿಸಲಿದೆ. ಪೈಪೋಟಿಯ ನಡುವೆ ಸ್ಥಾನ ಉಳಿಸಿಕೊಳ್ಳಬೇಕಂದ್ರೆ, ರಾಹುಲ್​ ಭರ್ಜರಿ ಪರ್ಫಾಮೆನ್ಸ್ ನೀಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನೆಟ್​ನಲ್ಲಿ ಅಬ್ಬರದ ಬ್ಯಾಟಿಂಗ್.. ಸಿಂಹಳೀಯರ ನಾಡಲ್ಲಿ ಘರ್ಜನೆ ಮಾಡ್ತಾರಾ KL ರಾಹುಲ್?

https://newsfirstlive.com/wp-content/uploads/2024/07/KL_RAHUL-5.jpg

Load More