/newsfirstlive-kannada/media/post_attachments/wp-content/uploads/2025/03/KL_RAHUL_PANT.jpg)
ಐಪಿಎಲ್​ ಟೂರ್ನಿಯಲ್ಲಿ ಇಂದು ನಡೀತಿರುವುದು ಡೆಲ್ಲಿ ವರ್ಸಸ್ ಲಕ್ನೋ ಬ್ಯಾಟಲ್ ಆಗಿದ್ರೂ, ಎಲ್ಲರ ಗಮನ ಇರೋದು ರಿಷಭ್​​ ಪಂತ್​ ಹಾಗೂ ಕೆ.ಎಲ್​ ರಾಹುಲ್ ಮೇಲೆ​. ಡೆಲ್ಲಿ ಕ್ಯಾಪಿಟಲ್ಸ್ VS ರಿಷಭ್ ಪಂತ್..! ಕೆ.ಎಲ್.ರಾಹುಲ್ VS ಲಕ್ನೋ ಸೂಪರ್ ಜೈಂಟ್ಸ್..! ಬ್ಯಾಟಲ್​ಗಾಗಿ ಫ್ಯಾನ್ಸ್​ ಕಾಯ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವರ್ಸಸ್ ಲಕ್ನೋ ಸೂಪರ್ ಜೈಂಟ್ಸ್​ ಹಣಾಹಣಿಗೆ ಕೌಂಟ್​ಡೌನ್ ಶುರುವಾಗಿದೆ. ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಲು ಉಭಯ ತಂಡಗಳು ಎದುರು ನೋಡ್ತಿವೆ. ಟಿ20 ಸ್ಪೆಷಲಿಸ್ಟ್​ ಆಟಗಾರರ ದಂಡೇ ಇರೋ ಬ್ಯಾಟಲ್​ನಲ್ಲಿ ಯಾರಿಗೆ ಯಾರು ಡಿಚ್ಚಿ ನೀಡ್ತಾರೆ ಅನ್ನೋ ಕ್ಯೂರಿಯಾಸಿಟಿ ಎಲ್ಲರಲ್ಲೂ ಮನೆ ಮಾಡಿದೆ. ಅಂದ್ಹಾಗೆ ಈ ಪಂದ್ಯ 2 ತಂಡಗಳ ನಡುವಿನ ಬ್ಯಾಟಲ್ ಮಾತ್ರವಾಗಿಲ್ಲ, ಎರಡು ತಂಡಗಳು.. ಇಬ್ಬರು ಆಟಗಾರರ ನಡುವಿನ ಪ್ರತಿಷ್ಠೆಯ ಸಮರವಾಗಿದೆ.
/newsfirstlive-kannada/media/post_attachments/wp-content/uploads/2025/03/KL-RAHUL-3.jpg)
ಇವತ್ತಿನ ಸೆಂಟರ್ ಆಫ್ ಅಟ್ರಾಕ್ಷನ್ ಕೆ.ಎಲ್.ರಾಹುಲ್​​​​​​​​​​​​​..!
ಕೆ.ಎಲ್.ರಾಹುಲ್.. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ಕ್ಯಾಪ್ಟನ್​. ತಾನೇ ಕಟ್ಟಿದ್ದ ತಂಡದಿಂದ ತಾನೇ ಹೊರ ಬಂದು ಇದೀಗ ಡೆಲ್ಲಿ ಕ್ಯಾಪಿಟಲ್ಸ್​ ಸೇರಿದ್ದಾರೆ. ಕಳೆದ ಸೀಸನ್​ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್​​ ಎದುರಿನ ಸೋಲಿನ ಬಳಿಕ ಲಕ್ನೋ ಕ್ಯಾಪ್ಟನ್​​ ರಾಹುಲ್​ಗೆ ಅವಮಾನ ಎದುರಾಯಿತು. ನಾಯಕನ ಬೆನ್ನಿಗೆ ನಿಲ್ಲಬೇಕಿದ್ದ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಗ್ರೌಂಡ್​ನಲ್ಲೇ ಅಪಮಾನ ಮಾಡಿದರು.
ಅಂದು ಸಾರ್ವಜನಿಕವಾಗಿಯೇ ಸ್ಟೇಡಿಯಂನಲ್ಲಿ ನಿಂದಿಸಿದ್ದ ಸಂಜೀವ್ ಗೋಯೆಂಕಾ, ಆ ಬಳಿಕವೂ ಕೆ.ಎಲ್.ರಾಹುಲ್​ ಬ್ಯಾಟಿಂಗ್ ವೈಖರಿ ಬಗ್ಗೆ ಹಲವು ಬಾರಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಅಷ್ಟೇ ಅಲ್ಲ, ಹರಾಜಿಗೂ ಮುನ್ನ ತಂಡದಿಂದ ಕೈಬಿಟ್ಟ ಬಳಿಕವೂ ಕನ್ನಡಿಗನ ಆಟದ ಬಗ್ಗೆ ವ್ಯಂಗ್ಯವಾಡಿದ್ದಿದೆ. ಸೆಲ್ಫೀಶ್ ಪ್ಲೇಯರ್ ಎಂದು ಪರೋಕ್ಷ ನಿಂದಿಸಿದ್ದಿದೆ.
ಇಷ್ಟೆಲ್ಲಾ ಅಪಮಾನ ಎದುರಿಸಿದ ರಾಹುಲ್​ ಈಗ ಡೆಲ್ಲಿ ತಂಡ ಸೇರಿದ್ದಾರೆ. ಇದೀಗ ಲಕ್ನೋ ಎದುರು ಇವತ್ತು ತೊಡೆತಟ್ಟಲು ಸಜ್ಜಾಗಿದ್ದಾರೆ. ಅಂದಾದ ಅಪಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಇದೇ ಕಾರಣಕ್ಕೆ ಕೆ.ಎಲ್.ರಾಹುಲ್​, ಇವತ್ತಿನ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್​​​​​​​​​​ ಆಗಿದ್ದಾರೆ.
ಕೆ.ಎಲ್.ರಾಹುಲ್ ಪಾಲಿಗೆ ಇದು ಪ್ರತಿಷ್ಠೆಯ ಕದನ..!
ತಮ್ಮ ಆಟವನ್ನ ಟೀಕಿಸಿ, ನಿಂದಿಸಿದ್ದ ಸಂಜೀವ್ ಗೋಯೆಂಕಾ ಮಾಲೀಕತ್ವದ ಲಕ್ನೋ ಎದುರೇ ಇಂದು ರಾಹುಲ್ ಕಣಕ್ಕಿಳಿಯುತ್ತಿದ್ದಾರೆ. ಈ ಪಂದ್ಯದೊಂದಿಗೆ ಹೊಸ ಆಧ್ಯಾಯ ಆರಂಭಿಸ್ತಿರುವ ಕೆ.ಎಲ್.ರಾಹುಲ್, ಅಂದಿನ ಟೀಕೆ, ನಿಂದನೆಗೆ ಸಿಕ್ಸರ್​, ಬೌಂಡರಿಗಳ ವಿಶ್ವರೂಪ ತೋರಿಸಲು ಸಜ್ಜಾಗಿದ್ದಾರೆ. ಎಲ್ಲಾ ಮಾತುಗಳಿಗೆ ಬ್ಯಾಟ್​ನಿಂದ ಉತ್ತರಿಸೋ ಲೆಕ್ಕಾಚಾರದಲ್ಲಿದ್ದಾರೆ.
ವೈಮನಸ್ಸು.. 27 ಕೋಟಿ.. ನ್ಯಾಯ ಒದಗಿಸ್ತಾರಾ ಪಂತ್..?
2016ರ ಅಂಡರ್​ 19 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚಿದ ರಿಷಭ್​ ಪಂತ್, ಅದೇ ವರ್ಷ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ​​ ಎಂಟ್ರಿ ಕೊಟ್ಟಿದ್ದರು. ಅಂದಿನಿಂದ 2024ರವರೆಗೆ ಸುದೀರ್ಘ 8 ವರ್ಷಗಳ ಕಾಲ ಡೆಲ್ಲಿ ಕ್ಯಾಪಿಟಲ್ಸ್​ನ ಭಾಗವಾಗಿದ್ದ ಪಂತ್​, ಈಗ ಲಕ್ನೋ ಸೇರಿದ್ದಾರೆ. ತಂಡದ ನಾಯಕನೂ ಆಗಿದ್ದಾರೆ. ಲಕ್ನೋ ಸೇರಿದ ಬಳಿಕ ಮೊದಲ ಪಂದ್ಯದಲ್ಲೇ ಪಂತ್​ಗೆ ಡೆಲ್ಲಿ ಸವಾಲೇ ಎದುರಾಗಿದೆ.
ಡೆಲ್ಲಿ ಮ್ಯಾನೇಜ್​​​ಮೆಂಟ್​ ಜೊತೆಗಿನ ವೈಮನಸ್ಸಿನ ಕಾರಣಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತೊರೆದ ಪಂತ್, ಬಿಗ್ ಅಮೌಂಟ್​ಗೆ ಲಕ್ನೋ ಸೇರಿದ್ದಾರೆ. ಅಸಲಿಗೆ ಡೆಲ್ಲಿಗೆ ಮ್ಯಾನೇಜ್​​ಮೆಂಟ್​​ ಜೊತೆಗಿನ ವೈಮನಸ್ಸು ಶುರುವಾಗಿದ್ದು ಹಣದ ಕಾರಣಕ್ಕೆ. ಇದೀಗ ಲಕ್ನೋ ತಂಡದಿಂದ ಬರೋಬ್ಬರಿ 27 ಕೋಟಿ ಹಣವನ್ನ ಪಡೆದುಕೊಂಡಿರೋ ಪಂತ್​, ಆ ಹಣಕ್ಕೆ ನ್ಯಾಯ ಒದಗಿಸಬೇಕಿದೆ.
/newsfirstlive-kannada/media/post_attachments/wp-content/uploads/2025/03/RISHABH_PANT-3.jpg)
ಟೂರ್ನಿಯೂದ್ದಕ್ಕೂ ಪಂತ್​ಗೆ ಕಾದಿದೆ ಅಗ್ನಿಪರೀಕ್ಷೆ.!
ರಿಷಭ್ ಪಂತ್​ ಪಾಲಿಗೆ ಡೆಲ್ಲಿ ಎದುರಿನ ಇವತ್ತಿನ ಪಂದ್ಯ ಮಾತ್ರವಲ್ಲ. ಈ ಇಡೀ ಸೀಸನ್​ನ ಅಗ್ನಿಪರೀಕ್ಷೆಯ ಕಣ. ಈಗಾಗಲೇ ಟೀಮ್ ಇಂಡಿಯಾದಿಂದ ನಿಧಾನಕ್ಕೆ ಪಂತ್​ ಸೈಡ್​​​ಲೈನ್​ ಆಗ್ತಿದ್ದಾರೆ. ಏಕದಿನ ತಂಡದಲ್ಲಿ ಬೆಂಚ್​ಗೆ ಸೀಮಿತವಾಗಿರುವ ಪಂತ್​, ಟಿ20ಯಲ್ಲಿ ಹೇಳಿಕೊಳ್ಳುವಂತ ಆಟವಾಡಿಲ್ಲ. ಪಂತ್​ ಸ್ಥಾನ ತುಂಬಲು ಹಲವು ಆಟಗಾರರು ರೆಡಿಯಿದ್ದಾರೆ. ಹೀಗಾಗಿ ಪಂತ್, IPLನಲ್ಲಿ ಅಬ್ಬರಿಸಲೇಬೇಕಿದೆ. ಅಬ್ಬರದ ಆಟವಾಡಿ ಸಾಮರ್ಥ್ಯ ನಿರೂಪಿಸಿಕೊಳ್ಳಬೇಕಿದೆ. ಇಲ್ಲ​ ವೈಟ್​ ಬಾಲ್​ ಕರಿಯರ್​​ ಸಂಕಷ್ಟಕ್ಕೆ ಸಿಲುಕಲಿದೆ.
ಇವತ್ತಿನ ಡೆಲ್ಲಿ vs ಲಕ್ನೋ ಪಂದ್ಯದಲ್ಲಿ ಎಲ್ಲರ ಕಣ್ಣಿರೋದು ರಿಷಭ್​ ಪಂತ್​ ಹಾಗೂ ಕೆ.ಎಲ್​ ರಾಹುಲ್​ ಮೇಲೆ. ಸೆಂಟರ್​ ಆಫ್​ ಅಟ್ರಾಕ್ಷನ್​ ಅನಿಸಿಕೊಂಡಿರೋ ಇಬ್ಬರು ಸ್ಟಾರ್ಸ್​​ ಅಖಾಡದಲ್ಲಿ ಮೋಡಿ ಮಾಡ್ತಾರಾ.?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us