/newsfirstlive-kannada/media/post_attachments/wp-content/uploads/2024/07/KL_RAHUL.jpg)
2025ರ ಇಂಡಿಯನ್​ ಪ್ರೀಮಿಯರ್​ ಲೀಗ್ ಆಕ್ಷನ್​ಗೆ ದಿನಗಣನೆ ಶುರುವಾಗಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೇಗಾದ್ರೂ ಮಾಡಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಹಾಗಾಗಿ ವರ್ಷದ ಕೊನೆ ಡಿಸೆಂಬರ್​ನಲ್ಲಿ ನಡೆಯಲಿರೋ 2025ರ ಐಪಿಎಲ್​​​​ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು​​ ಎಂದು ಪ್ಲಾನ್​ ಮಾಡಿಕೊಂದಿದೆ.
ಲಕ್ನೋ ಸೂಪರ್​ ಜೈಂಟ್ಸ್​ ತಂಡ ತೊರೆದು ಕೆ.ಎಲ್​ ರಾಹುಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ ಪಕ್ಕಾ ಆಗಿದೆ. ಈ ಬಗ್ಗೆ ಆರ್​​ಸಿಬಿ ತಂಡದ ಮೂಲಗಳೇ ಸ್ಪಷ್ಟನೆ ನೀಡಿವೆ. ಹಾಗಾಗಿ ಫಾಫ್​​ ಡುಪ್ಲೆಸಿಸ್​ಗೆ ಕೊಕ್​ ನೀಡಿ ರಾಹುಲ್​ಗೆ ಕ್ಯಾಪ್ಟನ್ಸಿ ನೀಡಬೇಕು ಅನ್ನೋದು ಆರ್​​ಸಿಬಿ ಪ್ಲಾನ್​​​.
ಈ ಸಲ ಕಪ್​ ನಮ್ದೇ ಎಂದ ಕೆ.ಎಲ್​ ರಾಹುಲ್​
ಇನ್ನು, ಕನ್ನಡಿಗ ಕೆ.ಎಲ್​ ರಾಹುಲ್​ ಈ ಸಲ ಕಪ್​ ನಮ್ದೇ ಎಂದಿದ್ದಾರೆ. ಈ ವಿಡಿಯೋ ಅಭಿಮಾನಿಯ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಭಿಮಾನಿ ಜತೆಗೆ ರಾಹುಲ್​ ಕೂಡ ಈ ಸಲ ಕಪ್​ ನಮ್ದೇ ಎಂದಿದ್ದಾರೆ. ಈ ಮೂಲಕ ಆರ್​​ಸಿಬಿ ಸೇರುವುದಾಗಿ ಫ್ಯಾನ್ಸ್​ಗೆ ಸಂದೇಶ ಸಾರಿದ್ದಾರೆ.
ಆರ್​​ಸಿಬಿ ತಂಡ ಸೇರುವ ಬಗ್ಗೆ ಮಾತಾಡಿದ್ದ ಕೆ.ಎಲ್​ ರಾಹುಲ್​!
ಈ ಹಿಂದೆ ಆರ್​ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಕೆ.ಎಲ್ ರಾಹುಲ್​ ಮತ್ತೆ ತವರು ತಂಡದ ಪರ ಕಣಕ್ಕಿಳಿಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಮೊದಲು ಕರ್ನಾಟಕದ. ಅದರಲ್ಲೂ ಬೆಂಗಳೂರಿನವ. ಇದನ್ನೂ ಎಂದಿಗೂ ಬದಲಿಸಲು ಸಾಧ್ಯವಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನನಗೆ ತವರು. ಪ್ರತಿಯೊಬ್ಬ ಆಟಗಾರ ಕೂಡ ತನ್ನ ತವರು ತಂಡದ ಪರ ಆಡಲು ಬಯಸುತ್ತಾರೆ. ಹೀಗಾಗಿ ನಾನು ಸಹ ಬೆಂಗಳೂರು ಪರ ಆಡುವುದು ಸೂಕ್ತ. ನನ್ನ ನಗರದ ಪರ ಆಡುವುದು ನನ್ನ ಕನಸಾಗಿತ್ತು. ಈ ಹಿಂದೆ ನಾನು ಆರ್​ಸಿಬಿ ಪರ ಆಡಿದ್ದೇನೆ. ಈಗ ಮತ್ತೆ ಅದೇ ತಂಡದಲ್ಲಿ ಆಡಲು ಸಾಧ್ಯವಾದರೆ ಆಡುತ್ತೇನೆ ಎಂದಿದ್ದರು ರಾಹುಲ್​​.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್