/newsfirstlive-kannada/media/post_attachments/wp-content/uploads/2024/08/KL_RAHUL-1-1.jpg)
ಕೆ.ಎಲ್.ರಾಹುಲ್​ಗೆ ಲಕ್ನೋ ಸೂಪರ್ ಜೈಂಟ್ಸ್ ಗೇಟ್​ಪಾಸ್ ನೀಡಿದೆ. ಹೀಗಾಗಿ ರಾಹುಲ್ ಐಪಿಎಲ್-2025 ಆಡಲು ನೇರವಾಗಿ ಮೆಗಾ ಹರಾಜು ಅಖಾಡಕ್ಕೆ ಇಳಿದಿದ್ದಾರೆ. ಎಲ್​​ಎಸ್​ಜಿ ತಂಡವು ರಾಹುಲ್​​ರನ್ನು ಬಿಡುಗಡೆ ಮಾಡಿರುವ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದವು. ಇದೀಗ ಸ್ವತಃ ರಾಹುಲ್​ರೇ ಮೌನ ಮುರಿದಿದ್ದಾರೆ.
ನಾನು ಹೊಸ ಆರಂಭ ಬಯಸಿದ್ದೆ. ಸಂಪೂರ್ಣ ಸ್ವಾತಂತ್ರ್ಯದಿಂದ ಆಡುವ ಸ್ಥಳಕ್ಕೆ ಹೋಗಲು ಬಯಸುತ್ತೇನೆ. ತಂಡದ ವಾತಾವರಣವು ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಅಂತಹ ಬದಲಾವಣೆಯ ಅಗತ್ಯವಿರುತ್ತದೆ. ಅದು ನನಗೆ ಒಳ್ಳೆಯದು ಎಂದಿದ್ದಾರೆ. ಅಂದಹಾಗೆ ರಾಹುಲ್ ಬಹಳ ಸಮಯದಿಂದ ಟಿ20 ತಂಡದಿಂದ ಹೊರಗುಳಿದಿದ್ದಾರೆ.
ಕೆಎಲ್ ರಾಹುಲ್ ಭವಿಷ್ಯದ ಪ್ಲಾನ್..!
ಕೆ.ಎಲ್.ರಾಹುಲ್ ಕಳೆದ ಎರಡು ವರ್ಷಗಳಲ್ಲಿ ಭಾರತ ತಂಡದ ಪರವಾಗಿ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ. 2022ರ ನವೆಂಬರ್‌ನಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ ಟಿ20 ಪಂದ್ಯ ಆಡಿದ್ದರು. 24 ತಿಂಗಳ ನಂತರ ಭಾರತ ತಂಡಕ್ಕೆ ಮರಳುವ ಭರವಸೆ ವ್ಯಕ್ತಪಡಿಸಿದ ಅವರು, ನಾನು ಆಟಗಾರನಾಗಿ ಎಲ್ಲಿದ್ದೇನೆ ಮತ್ತು ಪುನರಾಗಮನ ಮಾಡಲು ಏನು ಮಾಡಬೇಕೆಂದು ತಿಳಿದಿದೆ. ಅದಕ್ಕಾಗಿ ಐಪಿಎಲ್ ಸೀಸನ್ ಎದುರು ನೋಡುತ್ತಿದ್ದೇನೆ. T20 ತಂಡದಲ್ಲಿ ಪುನರಾಗಮನ ಮಾಡುವುದು ನನ್ನ ಗುರಿಯಾಗಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us