/newsfirstlive-kannada/media/post_attachments/wp-content/uploads/2025/04/KL-RAHUL-5.jpg)
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪರ್ ಕೆ.ಎಲ್.ರಾಹುಲ್ ಅವರು, 53 ಬಾಲ್ನಲ್ಲಿ 93 ರನ್ ಚಚ್ಚಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿಕೊಟ್ಟರು. ಸಿಕ್ಸರ್ ಬಾರಿಸಿ ಫಿನಿಶಿಂಗ್ ಮಾಡಿ ಸಂಭ್ರಮಿಸಿದರು. ಕೆ.ಎಲ್.ರಾಹುಲ್ ಅವರ ಸಂಭ್ರಮ ತವರಿನ ಮೈದಾನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ತುಸು ಜೋರಾಗಿಯೇ ಇತ್ತು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ಸಂಭ್ರಮಿಸಿದ ರೀತಿ ಭಾರೀ ವೈರಲ್ ಆಗಿದೆ. ಪಂದ್ಯ ಫಿನಿಶ್ ಮಾಡ್ತಿದ್ದಂತೆ ರಾಹುಲ್, ಸಂಭ್ರಮಿಸಿದರು. ಮೈದಾನದಲ್ಲಿ ತಮ್ಮ ಬ್ಯಾಟ್ನಿಂದ ಒಂದು ರೌಂಡು ಗೆರೆ ಹಾಕಿ, ಅದರ ಮಧ್ಯೆ ತಮ್ಮ ಬ್ಯಾಟ್ ಅನ್ನ ಬಲವಾಗಿ ಕುಟ್ಟಿ ಸಂಭ್ರಮಿಸಿದರು. ನಂತರ ತಮ್ಮ ಎದೆ ಮುಟ್ಟಿ ನೀವು ನನ್ನ ಹೃದಯದಲ್ಲಿದ್ದೀರಿ. ಇದು ನನ್ನ ಮೈದಾನ, ಇದು ನನ್ನ ತವರು ಎಂಬ ಸೂಚನೆ ನೀಡಿದರು. ಇದನ್ನು ನೋಡಿದ ಕೆ.ಎಲ್.ರಾಹುಲ್, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಸತತ ಎರಡನೇ ಸೋಲು.. ಕ್ಯಾಪ್ಟನ್ ಪಾಟೀದಾರ್ ಹೊಣೆ ಮಾಡಿದ್ದು ಯಾರನ್ನ..?
ಅಲ್ಲದೇ ವಿರಾಟ್ ಕೊಹ್ಲಿಗೆ ಟಾಂಟ್ ನೀಡಿದ್ದಾರೆ ಅಂತಾ ಅರ್ಥೈಸುತ್ತಿದ್ದಾರೆ. ನಿನ್ನೆಯ ಪಂದ್ಯವನ್ನು ದತ್ತು ಪುತ್ರ ವರ್ಸಸ್ ಮನೆ ಮಗ ಎಂದೇ ಬಿಂಬಿತಗೊಂಡಿತ್ತು. ಇದೇ ಕಾರಣಕ್ಕೆ ರಾಹುಲ್ ಆಕ್ರೋಶ ಭರಿತವಾಗಿ ಸಂಭ್ರಮಿಸಿ, ಕೊಹ್ಲಿಗೆ ಟಾಂಗ್ ನೀಡಿದ್ದಾರೆ ಅಂತಾ ಅಭಿಮಾನಿಗಳು ಹೇಳ್ತಿದ್ದಾರೆ. ಇನ್ನು, ಕೆಲವರು ಕೊಹ್ಲಿಗೆ ಅಲ್ಲ. ಆರ್ಸಿಬಿ ಫ್ರಾಂಚೈಸಿಗೆ. 2025ರಲ್ಲಿ ಆರ್ಸಿಬಿ ರಾಹುಲ್ರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತೆ ಅನ್ಕೊಂಡಿದ್ದರು. ಆದರೆ, ಫ್ರಾಂಚೈಸಿ ರಾಹುಲ್ರನ್ನ ಖರೀದಿ ಮಾಡದೇ ಅವಮಾನ ಮಾಡಿತು. ಇದೇ ಕಾರಣಕ್ಕೆ ರಾಹುಲ್ ಆರ್ಸಿಬಿ ಫ್ರಾಂಚೈಸಿಗೆ ಟಾಂಟ್ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ.
ಇದನ್ನೂ ಓದಿ: 3.5ನೇ ಓವರ್ನಲ್ಲಿ ನಡೆದ ಆ ಒಂದು ಘಟನೆ RCB ಸೋಲಿಗೆ ಕಾರಣ..!
ಇನ್ನು ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕೆ.ಎಲ್.ರಾಹುಲ್, ವಿಕೆಟ್ ಸ್ವಲ್ಪ ಟ್ರಿಕಿ ಆಗಿತ್ತು. 20 ಓವರ್‌ಗಳ ಕಾಲ ಸ್ಟಂಪ್‌ಗಳ ಹಿಂದೆ ನಾನಿದ್ದೆ. ಪಿಚ್ ಹೇಗೆ ವರ್ತಿಸುತ್ತಿದೆ ಅಂತಾ ತಿಳಿದುಕೊಂಡಿದ್ದೆ. ಇದು ನನಗೆ ಸಹಾಯ ಆಯಿತು. ಅದರ ಆಧಾರದ ಮೇಲೆಯೇ ಆಟ ಹೇಗಿರಬೇಕು ಅಂತಾ ನಿರ್ಧರಿಸಿದೇವು. ತಂಡಕ್ಕಾಗಿ ಉತ್ತಮ ಆರಂಭ ಪಡೆಯಲು, ಆರಂಭದಲ್ಲೇ ಆಕ್ರಮಣಕಾರಿಯಾಗಿ ಆಡಲು ನಿರ್ಧರಿಸಿದ್ದೆ. ಬಿಗ್ ಶಾಟ್ಗಳನ್ನು ಮೈದಾನದ ಯಾವ ಭಾಗದಲ್ಲಿ ಟಾರ್ಗೆಟ್ ಮಾಡಬೇಕು ಎಂದು ತಿಳಿಯಿತು. ವಿಕೆಟ್ ಕೀಪಿಂಗ್ ಮಾಡಿದ್ದರಿಂದ ಯಾವ ಬ್ಯಾಟ್ಸಮನ್ ಎಲ್ಲಿ ಆಡಿದರು ಮತ್ತು ಎಲ್ಲಿ ಔಟ್ ಆಗಿದ್ದಾರೆ ಎಂಬ ಕಲ್ಪನೆ ನನ್ನಲ್ಲಿತ್ತು. ಡ್ರಾಪ್ ಕ್ಯಾಚ್‌ನೊಂದಿಗೆ ನಾನು ಅದೃಷ್ಟಶಾಲಿಯಾದೆ. ಇದು ನನ್ನ ಮೈದಾನ, ಇದು ನನ್ನ ಮನೆ. ಬೇರೆಯವರಿಗಿಂತ ನನಗೆ ಚೆನ್ನಾಗಿ ಗೊತ್ತಿದೆ. ಇಲ್ಲಿ ಆಡುವುದನ್ನು ಆನಂದಿಸುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ಆರ್ಸಿಬಿ ಮಾಡಿದ ಅದೊಂದು ಮಿಸ್ಟೇಕ್.. KL ರಾಹುಲ್ ಆರ್ಭಟಿಸಲು ಕಾರಣವಾಯ್ತು..!
https://twitter.com/DrNimoYadav/status/1910392424628641832
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್