/newsfirstlive-kannada/media/post_attachments/wp-content/uploads/2025/04/KL_RAHUL.jpg)
ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಪಡೆದಿದೆ. ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಆರ್ಭಟದಿಂದ ತವರಿನಲ್ಲಿ ಆರ್ಸಿಬಿ ಮತ್ತೆ ಕಹಿ ಅನುಭವ ಪಡೆಯಿತು. ಡೆಲ್ಲಿ ತಂಡ ಗೆಲ್ಲಿಸುತ್ತಿದ್ದಂತೆ ಕೆ.ಎಲ್ ರಾಹುಲ್ ಸ್ಪೆಷಲ್ ಸಿಗ್ನೇಚರ್ ಸ್ಟೈಲ್ ಮಾಡಿದರು. ಇದು ಎಲ್ಲೆಡೆ ಚರ್ಚೆ ಆಗ್ತಿದ್ದು ಅದರ ಬಗ್ಗೆ ಸ್ವತಹ ರಾಹುಲ್ ಅವರೇ ಮಾತನಾಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿತ್ತು. ಮೊದಲ ಬ್ಯಾಟಿಂಗ್ ಮಾಡಿದ್ದ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 164 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ಆರಂಭದಲ್ಲೇ ವಿಕೆಟ್ಗಳನ್ನ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಯಾವಾಗ ರಾಹುಲ್ ಪಿಚ್ಗೆ ಬಂದರೋ ಅವಾಗ ಡೆಲ್ಲಿ ತಂಡದ ಅದೃಷ್ಟನೇ ಬದಲಾಯಿತು.
ಇದನ್ನೂ ಓದಿ:ಐಪಿಎಲ್ ಪಂದ್ಯದ ವೇಳೆ ದುಡ್ಡು ಮಾಡಲು ಕಿಲಾಡಿ ಕೆಲಸ.. ಕಂಬಿ ಹಿಂದೆ ಸೇರಿದ 8 ಮಂದಿ..!
ಆರ್ಸಿಬಿ ಜೊತೆಗಿನ ಪಂದ್ಯದಲ್ಲಿ ಸೋಲಿನ ದಡದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಕೆ.ಎಲ್ ರಾಹುಲ್ ತಮ್ಮ ಬ್ಯಾಟಿಂಗ್ ಬಲದಿಂದ ಮೇಲೆತ್ತಿದರು. ತಮ್ಮ ತಾಳ್ಮೆಯ ಜೊತೆಗೆ ಬ್ಯಾಟಿಂಗ್ ಆರ್ಭಟದ ಜೊತೆ ಸೇರಿಸಿ ಡೆಲ್ಲಿಯನ್ನ ಗೆಲ್ಲಿಸಿಯೇ ಬಿಟ್ಟರು. ಕೆ.ಎಲ್ ರಾಹುಲ್ 53 ಎಸೆತಗಳಲ್ಲಿ 7 ಬೌಂಡರಿ, 6 ಭರ್ಜರಿ ಸಿಕ್ಸರ್ಗಳಿಂದ 93 ರನ್ ಗಳಿಸಿ ಅಜೇಯರಾಗಿ ಉಳಿದರು. ಪಂದ್ಯದ ನಂತರ ಕಾಂತಾರ ಸಿನಿಮಾದಲ್ಲಿ ಇರುವಂತೆ ಬ್ಯಾಟ್ನಿಂದ ಸುತ್ತು ಗೆರೆ ಎಳೆದು, ಬ್ಯಾಟ್ ಅನ್ನು ಗೆರೆ ನಡುವೆ ಗುದ್ದಿ ತಮ್ಮ ಗೆಲುವಿನ ಸಂತಸ ಸಂಭ್ರಮಿಸಿದರು.
ಸದ್ಯ ಈ ಕುರಿತು ಮಾತನಾಡಿದ ಕೆ.ಎಲ್ ರಾಹುಲ್ ಅವರು, ಈ ಸ್ಟೇಡಿಯಂ, ಈ ಮೈದಾನ ನನಗೆ ತುಂಬಾ ವಿಶೇಷವಾಗಿದೆ. ಪಂದ್ಯ ಗೆದ್ದ ಬಳಿಕ ಬ್ಯಾಟ್ನಿಂದ ಒಂದು ಸುತ್ತು ಗೆರೆ ಎಳೆದು ಬ್ಯಾಟ್ ಭೂಮಿಗೆ ಗುದ್ದಿ ಸೆಲೆಬ್ರೆಷನ್ ಮಾಡಿದೆ. ಇದು ನನ್ನ ಫೇವರಿಟ್ ಸಿನಿಮಾ ಕನ್ನಡದ ಕಾಂತಾರ ಮೂವಿಯಲ್ಲಿ ಇರುವಂತೆ ಮೈದಾನದಲ್ಲಿ ನಾನು ಮಾಡಿದ್ದೇನೆ. ಈ ಗ್ರೌಂಡ್ ನನ್ನ ಬೆಳವಣಿಗೆಯನ್ನು ನೋಡಿದೆ. ನನಗೆ ಖುಷಿ ಇದೆ ಎಂದು ರಾಹುಲ್ ಅವರು ಹೇಳಿದ್ದಾರೆ.
The way he says 'This is mine' 🥹 pic.twitter.com/DKnWv2HcmN
— Delhi Capitals (@DelhiCapitals)
The way he says 'This is mine' 🥹 pic.twitter.com/DKnWv2HcmN
— Delhi Capitals (@DelhiCapitals) April 11, 2025
">April 11, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ