/newsfirstlive-kannada/media/post_attachments/wp-content/uploads/2025/06/KL_RAHUL_100.jpg)
ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 2ನೇ ಇನ್ನಿಂಗ್ಸ್ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಭರ್ಜರಿಯಾದ ಸೆಂಚುರಿ ಬಾರಿಸಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಕೇಲವ 42 ರನ್ ಬಾರಿಸಿದ್ದ ಕೆ.ಎಲ್ ರಾಹುಲ್ ಅವರು ಇದೀಗ ಶತಕ ಬಾರಿಸಿ ಬ್ಯಾಟ್ ಎತ್ತಿ ಸಂಭ್ರಮಿಸಿದ್ದಾರೆ.
ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಕೆ.ಎಲ್ ರಾಹುಲ್ ಅವರು ಇಂಗ್ಲೆಂಡ್ ಬೌಲರ್ಗಳನ್ನ ಚಚ್ಚಿದರು. ಮೈದಾನದ ಮೂಲೆ ಮೂಲೆಗೂ ಬಾಲ್ಗಳನ್ನು ಹೊಡೆದರು. 3ನೇ ದಿನದಾಟದ ವೇಳೆ ಯಶಸ್ವಿ ಜೈಸ್ವಾಲ್ ಜೊತೆ ಓಪನಿಂಗ್ ಬ್ಯಾಟರ್ ಆಗಿ ಕ್ರೀಸ್ಗೆ ಕೆ.ಎಲ್ ರಾಹುಲ್ ಅವರು ಟೆಸ್ಟ್ನ 4 ದಿನದಾಟದಲ್ಲಿ ಶತಕ ಬಾರಿಸಿದ್ದಾರೆ. 202 ಬಾಲ್ಗಳನ್ನ ಆಡಿದ ಕೆ.ಎಲ್ ರಾಹುಲ್ ಅವರು ಸಿಕ್ಸರ್ ಇಲ್ಲದೇ 13 ಅಂದವಾದ ಬೌಂಡರಿಗಳಿಂದ ಹಂಡ್ರೆಡ್ ಬಾರಿಸಿ ಸಂಭ್ರಮಿಸಿದರು.
ಟಾಸ್ ಸೋತು ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್, ನಾಯಕ ಗಿಲ್ ಹಾಗೂ ಪಂತ್ ಅವರ ಶತಕದದಿಂದ 471 ರನ್ಗಳನ್ನು ಕಲೆ ಹಾಕಿ ಆಲೌಟ್ ಆಗಿತ್ತು. ಇದರ ನಂತರ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಟೀಮ್ ಆಲೌಟ್ ಆಗಿ 465 ರನ್ಗಳನ್ನು ಬಾರಿಸಿತ್ತು. ಇದರಿಂದ ಭಾರತ ಕೇವಲ 6 ರನ್ಗಳ ಲೀಡ್ ಪಡೆದುಕೊಂಡಿತ್ತು.
ಇದೀಗ ಕನ್ನಡಿನ ಕೆ.ಎಲ್ ರಾಹುಲ್ ಅವರ ಮನಮೋಹಕವಾದ ಶತಕದಿಂದ ಟೀಮ್ ಇಂಡಿಯಾ 250 ರನ್ಗಳ ಲೀಡ್ ಪಡೆದುಕೊಂಡು ಬ್ಯಾಟಿಂಗ್ ಮಾಡುತ್ತಿದೆ. ಇನ್ನು ಕೆ.ಎಲ್ ರಾಹುಲ್ಗೆ ಉತ್ತಮ ಸಾಥ್ ಕೊಟ್ಟಿರುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರು 82 ರನ್ ಗಳಿಸಿದ್ದು ಮತ್ತೆ ಸೆಂಚುರಿ ಸಿಡಿಸುವ ಭರವಸೆಯಲ್ಲಿದ್ದಾರೆ. ಸದ್ಯ ಟೀಮ್ ಇಂಡಿಯಾ 3 ವಿಕೆಟ್ಗೆ 234 ರನ್ಗಳನ್ನು ಗಳಿಸಿ ಬ್ಯಾಟಿಂಗ್ ಮಾಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ