KL ರಾಹುಲ್​ಗೆ ಭಾರೀ ನಿರಾಸೆ.. ಶತಕದ ಹೊಸ್ತಿಲಲ್ಲಿ ಎಡವಿದ ಕನ್ನಡಿಗ, ಔಟ್​ ಆಗಿದ್ದು ಹೇಗೆ? -Video

author-image
Bheemappa
Updated On
KL ರಾಹುಲ್​ಗೆ ಭಾರೀ ನಿರಾಸೆ.. ಶತಕದ ಹೊಸ್ತಿಲಲ್ಲಿ ಎಡವಿದ ಕನ್ನಡಿಗ, ಔಟ್​ ಆಗಿದ್ದು ಹೇಗೆ? -Video
Advertisment
  • ಇನ್ನೇನು ಶತಕ ಸಿಡಿಸಬೇಕು ಎನ್ನುವಾಗ ಕನ್ನಡಿಗ ಔಟ್
  • ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯ
  • ನಿರಾಸೆಯಿಂದ ಪೆವಿಲಿಯನ್​ಗೆ ನಡೆದ ಕೆ.ಎಲ್ ರಾಹುಲ್

ನಾಲ್ಕನೇ ಟೆಸ್ಟ್​ ಪಂದ್ಯದ ಕೊನೆ ದಿನದಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಕೇವಲ 10 ರನ್​ಗಳಿಂದ ಸೆಂಚುರಿ ಮಿಸ್ ಮಾಡಿಕೊಂಡಿದ್ದಾರೆ. ಇದರಿಂದ ಭಾರೀ ನಿರಾಸೆಯಿಂದಲೇ ಪೆವಿಲಿಯನ್​ ಅತ್ತ ಕೆ.ಎಲ್ ರಾಹುಲ್ ಅವರು ಹೆಜ್ಜೆ ಹಾಕಿದ್ದಾರೆ.

ಕೆ.ಎಲ್ ರಾಹುಲ್ ಹಾಗೂ ಕ್ಯಾಪ್ಟನ್ ಶುಭ್ಮನ್ ಗಿಲ್ ಇಬ್ಬರೂ ಉತ್ತಮವಾದ ಇನ್ನಿಂಗ್ಸ್​ ಕಟ್ಟಿದ್ದರು. ವಿಕೆಟ್​ಗಳನ್ನ ಕಾಪಾಡಿಕೊಂಡು ರನ್​ಗಳ ಗಳಿಕೆಯು ಮಾಡುತ್ತಿದ್ದರು. ಕೆ.ಎಲ್ ರಾಹುಲ್​ ಬ್ಯಾಟಿಂಗ್ ಅತ್ಯುತ್ತಮವಾಗಿ ಮೂಡಿ ಬರುತ್ತಿತ್ತು. ಪಂದ್ಯದಲ್ಲಿ ಒಟ್ಟು 230 ಬಾಲ್​​​ಗಳನ್ನ ಎದುರಿಸಿದ್ದ ಅವರು 8 ಬೌಂಡರಿಗಳಿಂದ 90 ರನ್​ ಗಳಿಸಿ ಆಡುತ್ತಿದ್ದರು. ಸೆಂಚುರಿ ಗಳಿಸುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.

ಆದರೆ ಶತಕಕ್ಕೆ ಇನ್ನು ಕೇವಲ 10 ರನ್​ ಇರುವಾಗಲೇ ಕೆ.ಎಲ್ ರಾಹುಲ್ ಅವರು ವಿಕೆಟ್​ ಒಪ್ಪಿಸಿದ್ದಾರೆ. ಇದು ಅವರ ಅಭಿಮಾನಿಗಳಿಗೆ ನಿರಾಸೆ ಮಾಡಿದೆ ಎನ್ನಬಹುದು. ಇನ್ನು ಇನ್ನಿಂಗ್ಸ್​ನಲ್ಲಿ 90 ರನ್​ ಗಳಿಸಿ ಆಡುವಾಗ ಕೆ.ಎಲ್ ರಾಹುಲ್ ಅವರು ಎಲ್​​ಬಿಡಬ್ಲುಗೆ ಬಲಿಯಾಗಿದ್ದಾರೆ. ಇಂಗ್ಲೆಂಡ್​ ತಂಡದ ನಾಯಕ ಬೆನ್​ ಸ್ಟೋಕ್ಸ್​ ಎಸೆದ ಬೌಲಿಂಗ್​ನಲ್ಲಿ ಕೆ.ಎಲ್ ರಾಹುಲ್​ ಎಲ್​ಬಿಗೆ ಔಟ್​ ಆಗಿ ಹೊರ ನಡೆದಿದ್ದಾರೆ.

ಇದನ್ನೂ ಓದಿ:ಒಂದು ಹೈಡ್ರೋಜನ್ ರೈಲಿನ ಬೆಲೆ ಎಷ್ಟು.. ಹೊಸ ಇತಿಹಾಸ ಬರೆಯಲು ಸಜ್ಜಾದ ಭಾರತ..!

publive-image

ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್​ ಪಂದ್ಯದಲ್ಲಿ ಟಾಸ್​ ಗೆದ್ದುಕೊಂಡಿದ್ದ ಇಂಗ್ಲೆಂಡ್​ ತಂಡದ ಕ್ಯಾಪ್ಟನ್​ ಬೆನ್​ ಸ್ಟೋಕ್ಸ್ ಅವರು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದರು. ಇದರಿಂದ ಮೊದಲ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ ಕೇವಲ 358 ರನ್​ಗಳಿಗೆ ಆಲೌಟ್​ ಆಗಿತ್ತು. ಇದಾದ ಮೇಲೆ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 669 ರನ್​ಗಳ ಕೂಡಿ ಹಾಕಿ, 311 ರನ್​ಗಳ ಲೀಡ್​ ಕಾಯ್ದುಕೊಂಡಿದ್ದಾರೆ.

ಸದ್ಯ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ ಎನ್ನಬಹುದು. ಏಕೆಂದರೆ ಇಂದು ಕೊನೆ ದಿನವಾಗಿದ್ದರಿಂದ ವಿಕೆಟ್​ಗಳನ್ನು ಕಾಪಾಡಿಕೊಂಡು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಬೇಕಿದೆ. ಒಂದು ವೇಳೆ ಎಲ್ಲರೂ ಬೇಗನೆ ಔಟ್ ಆದರೆ ಇಂಗ್ಲೆಂಡ್​ ಗೆಲುವಿನ ನಗೆ ಬೀರಲಿದೆ. ಆದರೆ ಇದರ ನಡುವೆಯೇ ಕನ್ನಡಿಗ ಕೆ.ಎಲ್ ರಾಹುಲ್ ಅವರು ಔಟ್ ಆಗಿರುವುದು ತಂಡಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ. ಸದ್ಯ ಭಾರತ ತಂಡ 3 ವಿಕೆಟ್​ಗೆ 191 ರನ್​ ಗಳಿಸಿದೆ. ನಾಯಕ ಗಿಲ್ ಸೆಂಚುರಿ ಹೊಸ್ತಿನಲ್ಲಿದ್ದಾರೆ.


">July 27, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment