Advertisment

KL ರಾಹುಲ್​, ಧೃವ್ ಜುರೆಲ್​ಗೆ ಬಿಸಿಸಿಐ ಸೂಚಿಸಿದ್ದೇನು.. ಆಸಿಸ್​ ಸರಣಿ ಗೆಲ್ಲಲು ಸೀಕ್ರೆಟ್ ಪ್ಲಾನ್ ಇದೆಯಾ?​

author-image
Bheemappa
Updated On
KL ರಾಹುಲ್​, ಧೃವ್ ಜುರೆಲ್​ಗೆ ಬಿಸಿಸಿಐ ಸೂಚಿಸಿದ್ದೇನು.. ಆಸಿಸ್​ ಸರಣಿ ಗೆಲ್ಲಲು ಸೀಕ್ರೆಟ್ ಪ್ಲಾನ್ ಇದೆಯಾ?​
Advertisment
  • ಟೀಮ್​ನಲ್ಲಿ ಯಾರೇ ಫ್ಲಾಪ್​ ಆದ್ರು, ಮುಲಾಜಿಲ್ಲದೇ ಗೇಟ್​​​ಪಾಸ್
  • ಕನ್ನಡಿಗ ರಾಹುಲ್ ಅವರಿಗೆ ಬಿಸಿಸಿಐ ಕೊಟ್ಟಿರುವ ಜವಾಬ್ದಾರಿ ಏನು?
  • ಬಿಸಿಸಿಐ ಈ ಸ್ಪೆಷಲ್​ ಪ್ಲಾನ್​ ಏನು, ತಂಡದಲ್ಲಿ ಬದಲಾವಣೆ ಆಗುತ್ತಾ?

ನ್ಯೂಜಿಲೆಂಡ್​ ವಿರುದ್ಧದ ಸರಣಿ ಸೋಲಿನ ಮುಖಭಂಗ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ನ ಬಡಿದೆಬ್ಬಿಸಿದಂತಿದೆ. ತವರಿನಲ್ಲಿ ಹೀನಾಯ ಸೋಲು ಕಂಡು, ವೈಟ್​ವಾಶ್​ ಮುಖಭಂಗ ಅನುಭವಿಸಿದ ಬಳಿಕ ಆಸ್ಟ್ರೇಲಿಯಾದಲ್ಲಾದ್ರೂ ಮಾನ ಉಳಿಸಿಕೊಳ್ಳಲು ಮುಂದಾಗಿದೆ. ಆಟಗಾರರ ಫ್ಲಾಪ್​ ಶೋ ನೋಡಿ ನಿರಾಶರಾಗಿರೋ ಬಿಸಿಸಿಐ ಬಾಸ್​ಗಳು ಚಿಂತಾಕ್ರಾಂತರಾಗಿದ್ದಾರೆ. ಹೋಮ್​​ನಲ್ಲೇ ಹೀಗೆ, ಇನ್ನು ಆಸ್ಟ್ರೇಲಿಯಾದಲ್ಲಿ ಏನ್​ ಕಥೆ ಅನ್ನೋ ಪ್ರಶ್ನೆ ಕಾಡಲಾರಂಭಿಸಿದೆ.

Advertisment

ಕಿವೀಸ್​​​ ವಿರುದ್ಧ ತವರಿನಲ್ಲಿ ಸರಣಿಯ 3 ಟೆಸ್ಟ್​ಗಳನ್ನ ಸೋತು ಮುಖಭಂಗ ಅನುಭವಿಸಿರುವ ಟೀಮ್​ ಇಂಡಿಯಾ, ಇದೀಗ ಮುಂದಿನ ಆಸ್ಟ್ರೇಲಿಯಾ ಪ್ರವಾಸಕ್ಕೆ ಸಜ್ಜಾಗಿದೆ. ತವರಿನಲ್ಲೇ ಸೋತು ಸುಣ್ಣವಾದ ಟೀಮ್​ ಇಂಡಿಯಾಗೆ ಆಸ್ಟ್ರೇಲಿಯಾದ ಟಫ್​ ಕಂಡೀಷನ್​​ನಲ್ಲಿ ಗೆಲುವು ಸುಲಭದ ಟಾಸ್ಕ್​ ಆಗಿ ಉಳಿದಿಲ್ಲ. ಹೀಗಾಗಿ ನವೆಂಬರ್​ 22ರಿಂದ ಆರಂಭವಾಗೋ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ, ಗೆಲುವಿನ ಹಳಿಗೆ ಮರಳಲು ಟೀಮ್​ ಇಂಡಿಯಾದ ಕಸರತ್ತು ಶುರುವಾಗಿದೆ.

ಇದನ್ನೂ ಓದಿ: IPLನಲ್ಲಿ ಕನ್ನಡಿಗನ ಸಾಧನೆಗಳೇನು.. KL ರಾಹುಲ್ ಯಾವ ಟೀಮ್​ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದ್ದಾರೆ?

publive-image

ಎಲ್ಲರಿಗೂ ಮುನ್ನ ಆಸ್ಟ್ರೇಲಿಯಾಗೆ ಹಾರುವಂತೆ ಸೂಚನೆ.!

ನ್ಯೂಜಿಲೆಂಡ್​ ಸೋಲಿನ ಬಳಿಕ ಎಚ್ಚೆತ್ತುಕೊಂಡಿರೋ, ಬಿಸಿಸಿಐ ಬಾಸ್​ಗಳು ಪ್ರಿಪರೇಶನ್​ಗೆ ಹೆಚ್ಚು ಆದ್ಯತೆ ನೀಡಲು ತಿರ್ಮಾನಿಸಿದ್ದಾರೆ. ಕಾಂಗರೂಗಳ ಬೇಟೆಗೆ ಪ್ಲಾನ್​ ಬಿ ರೂಪಿಸಿಕೊಂಡಿರುವ ಬಾಸ್​ಗಳು, ಬೆಂಗಳೂರು ಟೆಸ್ಟ್​ ಬಳಿಕ ತಂಡದಿಂದ ಡ್ರಾಪ್​ ಆದ ಕೆ.ಎಲ್​ ರಾಹುಲ್​ ಹಾಗೂ ವಿಕೆಟ್​ ಕೀಪರ್​ ಬ್ಯಾಟರ್ ದೃವ್​ ಜುರೇಲ್​ ಹೊಸ ಜವಾಬ್ದಾರಿ ನೀಡಿದ್ದಾರೆ. 3ನೇ ಟೆಸ್ಟ್​ ಅಂತ್ಯದ ಬೆನ್ನಲ್ಲೇ ದಿಢೀರ್​ ಆಸ್ಟ್ರೇಲಿಯಾಗೆ ಹಾರುವಂತೆ ಸೂಚಿಸಿದ್ದಾರೆ. ಈಗಾಗಲೇ ಕಾಂಗರೂ ನಾಡಲ್ಲಿರೋ ಇಂಡಿಯಾ ಎ ತಂಡಕ್ಕೆ ಇವರಿಬ್ಬರನ್ನ ಸೇರ್ಪಡೆ ಮಾಡಲಾಗಿದೆ.

Advertisment

ಸದ್ಯ ಋತುರಾಜ್​ ಗಾಯಕ್ವಾಡ್​ ನೇತೃತ್ವದ ಇಂಡಿಯಾ ಎ ತಂಡ ಆಸ್ಟ್ರೇಲಿಯಾ ಎ ವಿರುದ್ಧ ಅನ್​ಅಫಿಶಿಯಲ್​ ಟೆಸ್ಟ್​ ಸರಣಿಯನ್ನಾಡ್ತಿದೆ. ಸರಣಿಯ ಮೊದಲ ಪಂದ್ಯ ಅಂತ್ಯ ಕಂಡಿದ್ದು, 2ನೇ ಪಂದ್ಯ ನವೆಂಬರ್​ 7 ರಿಂದ ಮೆಲ್ಬರ್ನ್​ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ರಾಹುಲ್​ ಹಾಗೂ ದೃವ್​ ಜುರೇಲ್​ಗೆ ಆಡುವಂತೆ ಬಾಸ್​ಗಳು ಸೂಚಿಸಿದ್ದಾರೆ. ಆಸಿಸ್​​ ಕಂಡಿಷನ್ಸ್​ಗೆ ಹೊಂದಿಕೊಳ್ಳಲು, ಫಾರ್ಮ್​​ ಕಂಡುಕೊಳ್ಳಲು ನೆರವಾಗೋ ದೃಷ್ಟಿಯಿಂದ ಬಿಸಿಸಿಐ ಈ ಪ್ಲಾನ್​ ರೂಪಿಸಿದೆ.

ಇಂಡಿಯಾ ‘ಎ’ ತಂಡದ ಮೇಲಿದೆ ಸೆಲೆಕ್ಟರ್ ಹದ್ದಿನ​ ಕಣ್ಣು,!

ಸದ್ಯ ಆಸ್ಟ್ರೇಲಿಯಾದಲ್ಲಿ ಅನ್​ ಅಫಿಶಿಯಲ್​ ಟೆಸ್ಟ್​ ಸರಣಿ ಆಡ್ತಿರೋ ಇಂಡಿಯಾ ಎ ತಂಡದ ಮೇಲೆ ಸೆಲೆಕ್ಟರ್ಸ್​ ಹದ್ದಿನ ಕಣ್ಣಿಟ್ಟಿದ್ದಾರೆ. ಇಂಡಿಯಾ ಎ ಪರ ಮೊದಲ ಟೆಸ್ಟ್​ನಲ್ಲಿ ದೇವದತ್​​ ಪಡಿಕ್ಕಲ್​, ಸಾಯಿ ಸುದರ್ಶನ್​ ಸಾಲಿಡ್​ ಪರ್ಫಾಮೆನ್ಸ್​ ನೀಡಿದ್ದಾರೆ. ಆಸಿಸ್​ ಕಂಡಿಷನ್​ನಲ್ಲಿ ಇವರಿಬ್ಬರು ಆಡಿದ ಆಟಕ್ಕೆ ಸೆಲೆಕ್ಟರ್ಸ್​​ ಇಂಪ್ರೆಸ್​ ಆಗಿದ್ದಾರೆ. ಹೀಗಾಗಿಯೇ ಆಸ್ಟ್ರೇಲಿಯಾ ಎ ಎದುರಿನ ಸರಣಿ ಅಂತ್ಯದ ಬಳಿಕ, ಟೀಮ್​ ಇಂಡಿಯಾ ಟೆಸ್ಟ್​ ತಂಡದೊಂದಿಗೆ ಇರುವಂತೆ ಸೂಚಿಸಿದ್ದಾರೆ. ಇವರಿಬ್ಬರೇ ಅಲ್ಲ.. ಉಳಿದ ಆಟಗಾರರ ಮೇಲೂ ಹದ್ದಿನ ಕಣ್ಣಿದೆ.

ಇದನ್ನೂ ಓದಿ: ‘ಈಗ’ ಮೂವಿ ಮಾದರಿಯಲ್ಲೇ ರಹಸ್ಯ ಭೇದಿಸಿದ ನೊಣ.. ಸ್ವಂತ ಚಿಕ್ಕಪ್ಪನನ್ನೇ ಮುಗಿಸಿದ್ದ ಕಿರಾತಕ

Advertisment

publive-image

ಬಿಸಿಸಿಐನ ಸ್ಪೆಷಲ್​ ಪ್ಲಾನ್​ ಹಿಂದಿದೆ ಕಠಿಣ ನಿರ್ಧಾರ​​.!

ಇಂಡಿಯಾ ಎ ತಂಡದ ಆಟಗಾರರ ಪರ್ಫಾಮೆನ್ಸ್​ ಮೇಲೆ ಸೆಲೆಕ್ಟರ್ಸ್​​ ಹದ್ದಿನ ಕಣ್ಣಿಟ್ಟಿರೋದ್ರಿಂದ ಹಿಂದೆ ಬಿಸಿಸಿಐ ಬಾಸ್​ಗಳ ಕಠಿಣ ಸೂಚನೆಯಿದೆ. ಬಾರ್ಡರ್​-ಗವಾಸ್ಕರ್​ ಟೆಸ್ಟ್​ ಸರಣಿಯಲ್ಲಿ ಯಾವುದೇ ಆಟಗಾರ​ ಫ್ಲಾಪ್​ ಆದ್ರೂ, ಅವರನ್ನ ರಿಪ್ಲೇಸ್​ ಮಾಡಿ ಎಂದು ಬಾಸ್​​ಗಳು ಸೂಚನೆ ನೀಡಿದ್ದಾರೆ. ಸೀನಿಯರ್​ ಆಟಗಾರರು ಯಾರೇ ಫ್ಲಾಪ್​ ಆದ್ರೂ, ಮುಲಾಜಿಲ್ಲದೇ ಗೇಟ್​​​ಪಾಸ್​ ನೀಡಿ ಇಂಡಿಯಾ ಎ ಪರ ಮಿಂಚಿದವರಿಗೆ ಸ್ಥಾನ ನೀಡಲು ಬಿಸಿಸಿಐ ವಲಯದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಮಾತಿನಂತೆ, ನ್ಯೂಜಿಲೆಂಡ್​ ವಿರುದ್ಧದ ಸೋಲು ಬಿಸಿಸಿಐ ಬಾಸ್​​ಗಳನ್ನ ಬಡಿದೆಬ್ಬಿಸಿದಂತೆ ಕಾಣ್ತಿದೆ. ಕಾಂಗರೂ ನಾಡಿನ ಸಮರಕ್ಕೂ ಮುನ್ನ ಬಿಸಿಸಿಐ ಬಾಸ್​ಗಳು ಮಾಡಿರೋ ಈ ಸ್ಪೆಷಲ್​ ಪ್ಲಾನ್​ ಎಷ್ಟರಮಟ್ಟಿಗೆ ವರ್ಕ್​​ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment