ಕನ್ನಡಿಗ ಕೆ.ಎಲ್.ರಾಹುಲ್ಗೆ ವಿಶ್ರಾಂತಿನಾ, ಡ್ರಾಪಾ?
ಒಂದೇ ಒಂದು ಬ್ಯಾಡ್ಗೇಮ್ಗೆ ಇಂದೆಂಥಾ ಶಿಕ್ಷೆ?
ರಾಹುಲ್ಗಿಂತ ಕಳಪೆಯಾಗಿತ್ತು ಶ್ರೇಯಸ್-ದುಬೆ ಆಟ
ಕೆ.ಎಲ್.ರಾಹುಲ್ ನಿನ್ನೆ 200ನೇ ಅಂಥಅರಾಷ್ಟ್ರೀಯ ಪಂದ್ಯವನ್ನಾಡುವ ಕನಸು ಕಂಡಿದ್ದರು. ಆ ಕನಸು ಕನಸಾಗಿಯೇ ಉಳಿಯಿತು. 2ನೇ ಪಂದ್ಯದಲ್ಲಿ ಮಾಡಿದ ಒಂದು ತಪ್ಪಿಗೆ ತಂಡದಿಂದಲೇ ಕಿಕ್ ಔಟ್ ಮಾಡಲಾಯ್ತು. ನಿಜಕ್ಕೂ ರಾಹುಲ್, ಈ ಶಿಕ್ಷೆಗೆ ಅರ್ಹರಾಗಿದ್ದರಾ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಟೀಮ್ ಇಂಡಿಯಾದ ಫಲಿತಾಂಶಕ್ಕಿಂತ ನಿನ್ನೆ ಹೆಚ್ಚು ಚರ್ಚೆಯಾಗಿದ್ದು, ಕೆ.ಎಲ್.ರಾಹುಲ್ ಹೆಸರು.. ಕರ್ನಾಟಕದ ಬ್ಯಾಟ್ಸ್ಮನ್ 200ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡ್ತಾರೆ ಅಂತಾನೇ ಫ್ಯಾನ್ಸ್ ಭಾವಿಸಿದ್ದರು. ಟಾಸ್ ಸೋಲಿನ ಬಳಿಕ ರೋಹಿತ್ ಹೇಳಿದ ಒಂದು ಮಾತಿನಿಂದ ಫ್ಯಾನ್ಸ್ಗೆ ಶಾಕ್ ನೀಡಿತ್ತು. ಅದು ಕೆಎಲ್ ರಾಹುಲ್ ಅವರನ್ನು ಪ್ಲೇಯಿಂಗ್-11ನಿಂದ ಡ್ರಾಪ್ ಮಾಡಿರೋ ವಿಚಾರ.
ಇದನ್ನೂ ಓದಿ:ಚಿನ್ನ ಗೆಲ್ಲುವ ಬಗ್ಗೆ ನೀರಜ್ ಚೋಪ್ರಾ ಹೇಳಿದ್ದೇನು..? ಇಂದು ದೊಡ್ಡ ನಿರೀಕ್ಷೆಯಲ್ಲಿ ಭಾರತ..
ಟೀಮ್ ಮ್ಯಾನೇಜ್ಮೆಂಟ್ನ ಈ ನಿರ್ಣಯಕ್ಕೆ ಹರಿಕೆ ಕುರಿಯಾಗಿದ್ದು ಕನ್ನಡಿಗ ಕೆ.ಎಲ್.ರಾಹುಲ್. ಯಾಕಂದ್ರೆ, ಏಕದಿನ ತಂಡದ ಮಿಡಲ್ ಆರ್ಡರ್ನ ಬಲವಾಗಿದ್ದ ರಾಹುಲ್, ವಿಕೆಟ್ ಕೀಪರ್ ಆಗಿ ಅಲ್ಲದಿದ್ರೂ, ಬ್ಯಾಟ್ಸ್ಮನ್ ಆಗಿಯಾದ್ರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಇರಬೇಕಾಗಿತ್ತು. ಆದ್ರೆ, ರಾಹುಲ್ ಬೆಂಚ್ಗೆ ಸೀಮಿತವಾಗಿ ಬಿಟ್ರು.
ರಾಹುಲ್ಗೆ ವಿಶ್ರಾಂತಿನಾ, ಡ್ರಾಪಾ?
ಸದ್ಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗ್ತಿರುವ ವಿಷ್ಯ. ಕೆ.ಎಲ್.ರಾಹುಲ್ಗೆ ವಿಶ್ರಾಂತಿ ನೀಡಿದ್ರಾ? ಅಥವಾ ಡ್ರಾಪ್ ಮಾಡಿದ್ರಾ? ಅನ್ನೋ ಪ್ರಶ್ನೆ ಎಲ್ಲರನ್ನ ಕಾಡ್ತಿದೆ. 7 ತಿಂಗಳ ಬಳಿಕ ಏಕದಿನ ಸರಣಿಯನ್ನಾಡ್ತಿದ್ದ ಕನ್ನಡಿಗ ರಾಹುಲ್, ಲಂಕಾ ಎದುರಿನ ಮೊದಲ 2 ಪಂದ್ಯಗಳಲ್ಲಿ ಇತರರಿಗಿಂತ ಹೀನಾಯ ಪ್ರದರ್ಶನವನ್ನೇನು ನೀಡಿರಲಿಲ್ಲ. 2ನೇ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದೇ ತಡ ಬೆಂಚ್ಗೆ ಫಿಕ್ಸಾಗಿಬಿಟ್ಟಿದ್ದಾರೆ.
ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ ಬೆನ್ನಲ್ಲೇ ಮತ್ತೊಂದು ಪೋಸ್ಟ್ ಮಾಡಿದ ಕಂಗನಾ ರಣಾವತ್
ಇದು ಟೀಮ್ ಇಂಡಿಯಾಗೆ ಈ ವರ್ಷದ ಕೊನೆ ಏಕದಿನ ಪಂದ್ಯವಾಗಿದೆ. ಇದಾದ ಬಳಿಕ ಈ ವರ್ಷ ಯಾವುದೇ ಒನ್ ಡೇ ಗೇಮ್ ಆಡಲ್ಲ. ಹೀಗಾಗಿ ಕೆ.ಎಲ್.ರಾಹುಲ್ರನ್ನ ಕೇವಲ ವಿಶ್ರಾಂತಿಯನ್ನ ನೀಡಲಾಗಿದ್ಯಾ? ಅಥವಾ ತಂಡದಿಂದಲೇ ಡ್ರಾಪ್ ಮಾಡಲಿಗಿದ್ಯಾ ಎಂಬ ಚರ್ಚೆ ನಡೆದಿದೆ.
ರಾಹುಲ್ಗಿಂತ ಕಳಪೆಯಾಗಿತ್ತು ಶ್ರೇಯಸ್-ದುಬೆ ಆಟ
ಲಂಕಾ ಎದುರಿನ 2 ಪಂದ್ಯಗಳನ್ನ ನೋಡಿದ್ರೆ ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ಆಟವೂ ಅಷ್ಟಕ್ಕೆ ಅಷ್ಟೇ. ಇವ್ರೇ ಯಾಕೆ..? ವಿರಾಟ್ ಕೊಹ್ಲಿ ಆಟವೂ ಹೇಳಿಕೊಳ್ಳುವಂತಿರಲಿಲ್ಲ. ಕೆಲ ವರ್ಷಗಳಿಂದ ಕೆ.ಎಲ್.ರಾಹುಲ್, ವಿಶ್ವ ಕ್ರಿಕೆಟ್ನಲ್ಲೇ ಬೆಸ್ಟ್ ಮಿಡಲ್ ಆರ್ಡರ್ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕಳೆದ 5 ವರ್ಷಗಳ ಟ್ರ್ಯಾಕ್ ರೆಕಾರ್ಡ್ ನೋಡಿದ್ರೆ ಗರಿಷ್ಠ ಮಿಡಲ್ ಆರ್ಡರ್ ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಹೀಗಿದ್ರೂ ರಾಹುಲ್ರನ್ನ 4 ಹಾಗೂ 5ನೇ ಕ್ರಮಾಂಕದ ಬದಲಿಗೆ 6 ಹಾಗೂ 7ನೇ ಕ್ರಮಾಂಕದಲ್ಲಿ ಪ್ರಯೋಗ ಮಾಡಿತ್ತು. ಈ ಪ್ರಯೋಗದಲ್ಲಿ ವೈಫಲ್ಯ ಕಂಡ ರಾಹುಲ್ನ ಬೆಂಚ್ಗೆ ಫಿಕ್ಸ್ ಮಾಡಲಾಗಿದೆ.
ಗೆಲುವಿನ ಅವಶ್ಯಕತೆಗಾಗಿ ರಾಹುಲ್ನ ಕೈಬಿಟ್ರಾ?
ಮೊದಲ ಪಂದ್ಯವನ್ನ ಗೆಲುವಿನ ಅಂಚಿನಲ್ಲಿ ಎಡವಿದ್ದ ಟೀಮ್ ಇಂಡಿಯಾ, 2ನೇ ಪಂದ್ಯವನ್ನ ಸ್ವಯಃಕೃತ ಅಪರಾಧದಿಂದ ಕೈಚೆಲ್ಲಿತ್ತು. ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ಹೆಚ್ಚುವರಿ ಸ್ಪಿನ್ನರ್ನ ಕಡೆಗಣಿಸಿದ್ದು ಕೂಡ ಕಾರಣವಾಗಿತ್ತು. ಸರಣಿ ಟೈ ಮಾಡಿಕೊಳ್ಳಬೇಕು, ಹೀಗಾಗಿಯೇ ಕೊನೆ ಪಂದ್ಯವನ್ನ ಗೆಲ್ಲಬೇಕೆಂಬ ಉದ್ದೇಶದಿಂದಲೇ ಕನ್ನಡಿಗ ರಾಹುಲ್ನ ಕೈ ಬಿಟ್ಟು, ಪಂತ್ಗೆ ಚಾನ್ಸ್ ನೀಡಲಾಯ್ತು ಎನ್ನಲಾಗ್ತಿದೆ. ಚಾನ್ಸ್ ಗಿಟ್ಟಿಸಿಕೊಂಡ ಪಂತ್ ಕಡಿದು ಗುಡ್ಡೇ ಹಾಕಿದ್ದು ಏನೂ ಇಲ್ಲ.. ಜಸ್ಟ್ 6 ರನ್ಗಳಿಸಿ ಔಟಾದ್ರು.
ಇದನ್ನೂ ಓದಿ:Big Updates: ಸುನಿತಾ ವಿಲಿಯಮ್ಸ್ಗೆ ಮತ್ತೊಂದು ಸಂಕಷ್ಟ.. ಮತ್ತೆ ಏನಾಯ್ತು..?
ಸ್ಪಿನ್ ಟ್ರ್ಯಾಕ್ಗಳಲ್ಲಿ ಪಂತ್ ಕೌಂಟರ್ ಅಟ್ಯಾಕ್ ಮಾಡ್ತಾರೆ. ಪಂದ್ಯವನ್ನು ಟರ್ನ್ ಮಾಡ್ತಾರೆ ನಿಜ. ಸ್ಪಿನ್ ಫ್ರೆಂಡ್ಲಿಯಲ್ಲಿ ಬಿಗ್ ಇನ್ನಿಂಗ್ಸ್ ಕಟ್ಟುವ ತಾಕತ್ತು ರಾಹುಲ್ಗೂ ಇದೆ. ಮಿಡಲ್ ಆರ್ಡರ್ನಲ್ಲಿ ರಾಹುಲ್, 62ರ ಅವರೇಜ್ನಲ್ಲಿ ಬ್ಯಾಟಿಂಗ್ ನಡೆಸಿದ್ರೆ, ರಿಷಭ್ ಪಂತ್ ಅವರೇಜ್ 36 ಮಾತ್ರವೇ ಆಗಿದೆ. ರಾಹುಲ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿರೋದನ್ನ ವಿಶ್ವಕಪ್ನಂಥಹ ಬಿಗ್ ಸ್ಟೇಜ್ಗಳಲ್ಲೂ ನೋಡಿದ್ದೇವೆ. ಈ ಹೊರತಾಗಿಯೂ ರಾಹುಲ್ನ ಬೆಂಚ್ಗೆ ಸಿಮೀತವಾಗಿಸಿರೋದು ನಿಜಕ್ಕೂ ಆಟಗಾರನ ಅಭದ್ರತೆ ಸೃಷ್ಟಿಸುವ ಸಂದೇಶದಂತೆ ಕಾಣ್ತಿದೆ.
ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ; ಬ್ರಿಜ್ ಭೂಷಣ್ರ ಇಬ್ಬರು ಮಕ್ಕಳಿಂದ ಅಚ್ಚರಿಯ ಪ್ರತಿಕ್ರಿಯೆ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್