newsfirstkannada.com

ಚಿಕ್ಕ ಮಗುವಿಗೆ ನಿಂದಿಸಿದಂತೆ ರಾಹುಲ್​ರನ್ನ ಅವಮಾನಿಸಿದ ಮಾಲೀಕ.. ಭಾರೀ ಆಕ್ರೋಶ..!

Share :

Published May 9, 2024 at 11:27am

    ಕೆ.ಎಲ್.ರಾಹುಲ್ ಅಭಿಮಾನಿಗಳಿಂದ ಖಂಡನೆ

    ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಆಕ್ರೋಶ

    ಪಂದ್ಯ ಸೋತಿದ್ದಕ್ಕೆ ಹೀಗೆಲ್ಲ ಅಪಮಾನ ಮಾಡ್ತಾರಾ?

ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕ ಕೆ.ಎಲ್.ರಾಹುಲ್ ಅವರನ್ನು ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕರ ಮುಂದೆ ಹೀನಾಯವಾಗಿ ನಿಂದಿಸಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆಯ ಪಂದ್ಯ ಸೋತ ಬೆನ್ನಲ್ಲೇ ವೈರಲ್ ಆಗಿರುವ ವಿಡಿಯೋಗೆ ಜನರು ಖಂಡನೆ ವ್ಯಕ್ತಪಡಿಸ್ತಿದ್ದಾರೆ. ಅದರಲ್ಲೂ ಕೆ.ಎಲ್​.ರಾಹುಲ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ.

ಇದನ್ನೂ ಓದಿ:KL ರಾಹುಲ್​​ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್​ಎಸ್​ಜಿ ಮಾಲೀಕ..! ವಿಡಿಯೋ

ನಿನ್ನೆಯ ಪಂದ್ಯದಲ್ಲಿ ರಾಹುಲ್, ತಪ್ಪು ಮಾಡಿರೋದು ನಿಜ. ಆದರೆ ಪ್ರತಿಭಾನ್ವಿತ ಆಟಗಾರನನ್ನು ಕೀಳುಮಟ್ಟದಲ್ಲಿ ನಿಂದಿಸೋದು ತಪ್ಪು. ಅವರೊಬ್ಬ ತಂಡದ ಕ್ಯಾಪ್ಟನ್. ಆಟದಲ್ಲಿ ಸೋಲು, ಗೆಲುವು ಇದ್ದದ್ದೇ. ಒಂದು ಪಂದ್ಯದಲ್ಲಿ ಕೆಟ್ಟ ರೀತಿಯಲ್ಲಿ ಸೋತರು ಅನ್ನೋ ಕಾರಣಕ್ಕೆ ಈ ರೀತಿಯಾಗಿ ಅವಮಾನಿಸಬಾರದು. ಇದು ಕ್ರೀಡಾಸ್ಫೂರ್ತಿ ಅಲ್ಲ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಆಗಿದ್ದೇನು..?
ಐಪಿಎಲ್​-2024ರ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಕಳಪೆ ಪ್ರದರ್ಶನ ನೀಡಿದೆ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್​ಆರ್​ಹೆಚ್​ ವಿರುದ್ಧ 10 ವಿಕೆಟ್‌ಗಳಿಂದ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್‌ಗಳಲ್ಲಿ ಈ ಗುರಿ ಮುಟ್ಟಿತು. ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್‌ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ಕ್ಯಾಮೆರಾ ಮುಂದೆ ಅವಮಾನಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಿಕ್ಕ ಮಗುವಿಗೆ ನಿಂದಿಸಿದಂತೆ ರಾಹುಲ್​ರನ್ನ ಅವಮಾನಿಸಿದ ಮಾಲೀಕ.. ಭಾರೀ ಆಕ್ರೋಶ..!

https://newsfirstlive.com/wp-content/uploads/2024/05/KL-RAHUL-6.jpg

Load More