/newsfirstlive-kannada/media/post_attachments/wp-content/uploads/2025/06/KL-Rahul-2.jpg)
ನಿನ್ನೆಯಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಪಂದ್ಯ ಶುರುವಾಗಿದೆ. ಲೀಡ್ಸ್ನಲ್ಲಿ ನಡೀತಿರೋ ಮೊದಲ ಟೆಸ್ಟ್ ಮೊದಲ ದಿನ ಟೀಮ್ ಇಂಡಿಯಾದ ಆರ್ಭಟ ಜೋರಾಗಿ ನಡೆದಿದೆ. ಸದ್ಯ ಭಾರತ ತಂಡ ಮೂರು ವಿಕೆಟ್ ಕಳೆದುಕೊಂಡು 359 ರನ್ಗಳಿಸಿದೆ. ನಾಯಕ ಶುಬ್ಮನ್ ಗೊಲ್, ಉಪನಾಯಕ ರಿಷಬ್ ಪಂತ್ ಇಂದಿಗೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಪಂತ್ ಬೊಂಬಾಟ್ ಆಟ
ಹೊಡಿಬಡಿ ದಾಂಡಿಗ, ಬಾಲ್ ಇರೋದೇ ದಂಡಿಸೋಕೆ ಅಂದುಕೊಂಡಿರುವ ರಿಷಬ್ ಪಂತ್, ಡೇರ್ಡೆವಿಲ್ ಆಟಕ್ಕೆ ಹೆಸರುವಾರಿ. ಆದರೆ ನಿನ್ನೆ ರಿಷಬ್ ಪಂತ್ ತಾಳ್ಮೆಯ ಆಟವನ್ನು ಆಡಿ, ಇಂಗ್ಲೆಂಡ್ ಬೌಲರ್ಸ್ಗೆ ನೀರು ಕುಡಿಸಿದರು. ಶತಕ ಬಾರಿಸಿದ ಗಿಲ್, ಯಶಸ್ವಿ ಜೈಸ್ವಾಲ್ ಆಟಕ್ಕಿಂತ ಪಂತ್ ಅವರ ಆಟವೇ ಹೆಚ್ಚು ಚರ್ಚೆಯಲ್ಲಿದೆ. ಅದಕ್ಕೆ ಕಾರಣ ಅವರು ನಿನ್ನೆ ಕಟ್ಟಿರುವ ಸೊಗಸಾದ ಇನ್ನಿಂಗ್ಸ್.
ಇದನ್ನೂ ಓದಿ: ಕಪ್ ಗೆದ್ದ ಬೆನ್ನಲ್ಲೇ ಆರ್ಸಿಬಿ ಭರ್ಜರಿ ಕಮಾಯಿ.. ಬಿಸಿಸಿಐ ಕೊಟ್ಟಿದ್ದು ನೂರು, ಐನ್ನೂರು ಕೋಟಿ ಅಲ್ಲ..!
KL Rahul is bowing down with both hands to Rishabh Pant 😂😝
- Underrated Bond ❤️ pic.twitter.com/aml7wsL4Ji— RP17 Gang™ (@RP17Gang) June 20, 2025
ಅಂದ್ಹಾಗೆ ನಿನ್ನೆಯ ಆಟ ದಿನ 85 ಓವರ್ಗೆ ಅಂತ್ಯಗೊಂಡಿದೆ. ಈ ಅವಧಿಯಲ್ಲಿ ಪಂತ್ 102 ಬಾಲ್ ಎದುರಿಸಿ 2 ಸಿಕ್ಸರ್, ಆರು ಬೌಂಡರಿಯೊಂದಿಗೆ 65 ರನ್ಗಳಿಸಿ ನಾಟೌಟ್ ಆಗಿ ಪೆವಿಲಿಯನ್ಗೆ ಬಂದರು. ಈ ವೇಳೆ ಕನ್ನಡಿಗ ಕೆ.ಎಲ್.ರಾಹುಲ್ ಅವರು, ಪಂತ್ರನ್ನು ಶ್ಲಾಘಿಸಿದರು. ಪಂತ್ ಎದುರು ಎರಡೂ ಕೈಜೋಡಿಸಿ ನಮಸ್ಕರಿಸಿ ಬೆನ್ನುತ್ತಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ.
ಇದನ್ನೂ ಓದಿ: ದೇಶಕ್ಕೆ ಮತ್ತೊಂದು ಟ್ರೋಫಿ ಗೆದ್ದ ನೀರಜ್ ಚೋಪ್ರಾ.. ಪ್ರತಿಷ್ಠಿತ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಎಸೆದ ದೂರ ಎಷ್ಟು..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ