ಸೇಡಿನ ಕಿಚ್ಚು, ಕನ್ನಡಿಗನ ದರ್ಬಾರ್​.. KL ರಾಹುಲ್ ಪಂಚ್​ಗೆ ತವರಿನಲ್ಲಿ ಲಕ್ನೋ ಗಢ ಗಢ!

author-image
Bheemappa
Updated On
ಸೇಡಿನ ಕಿಚ್ಚು, ಕನ್ನಡಿಗನ ದರ್ಬಾರ್​.. KL ರಾಹುಲ್ ಪಂಚ್​ಗೆ ತವರಿನಲ್ಲಿ ಲಕ್ನೋ ಗಢ ಗಢ!
Advertisment
  • ಬ್ಯಾಟಿಂಗ್​ನಲ್ಲಿ ಸತತ ಮುಖಭಂಗ ಅನುಭವಿಸುತ್ತಿರುವ ರಿಷಭ್​
  • ಮಾರ್ಕ್ರಾಮ್ ಅರ್ಧಶತಕ ವ್ಯರ್ಥ, ಸೂಪರ್​ ಜೈಂಟ್ಸ್​ಗೆ ಸೋಲು
  • ಅಭಿಷೇಕ್ ಪೊರೆಲ್ 5 ಬೌಂಡರಿ, 1 ಸಿಕ್ಸರ್​ನಿಂದ ಹಾಫ್​​ಸೆಂಚುರಿ

ತವರಿನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಿಷಭ್​ ಪಂತ್​ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋಲು ಕಂಡಿದೆ. ಅಭಿಷೇಕ್​ ಪೊರೆಲ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಅರ್ಧಶತಕದಿಂದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್​ಗಳಿಂದ ಅಮೋಘವಾದ ವಿಜಯ ದಾಖಲಿಸಿದೆ.

ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ಅಕ್ಷರ್ ಪಟೇಲ್, ಟಾಸ್ ಗೆದ್ದು ಲಕ್ನೋ ತಂಡವನ್ನು ಮೊದಲ ಬ್ಯಾಟಿಂಗ್​​ಗೆ ಆಹ್ವಾನ ಮಾಡಿದರು. ಲಕ್ನೋ ಪರವಾಗಿ ಆರಂಭಿಕ ಬ್ಯಾಟ್ಸ್​ಮನ್​ಗಳಾಗಿ ಕಣಕ್ಕೆ ಇಳಿದ ಐಡೆನ್ ಮಾರ್ಕ್ರಾಮ್ ಹಾಗೂ ಮಿಚೆಲ್ ಮಾರ್ಷ್ ಡೆಲ್ಲಿ​ ಬೌಲರ್​ಗಳನ್ನ ಕಾಡಿದರು. ಹೀಗಾಗಿ ಮಾರ್ಕ್ರಾಮ್ ಅರ್ಧಶತಕ ಸಿಡಿಸಿದ್ರೆ, ಮಾರ್ಷ್​​ 45 ರನ್​ಗಳಿಗೆ ವಿಕೆಟೆ ಒಪ್ಪಿಸಿದರು.

ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡ್ತಿದ್ದ ಪೂರನ್ ಈ ಪಂದ್ಯದಲ್ಲಿ 9 ರನ್​ಗೆ ಸುಮ್ಮನಾದರು. ಅಬ್ದುಲ್ ಸಮಾದ್ 2, ಡೇವಿಡ್ ಮಿಲ್ಲರ್ 14, ಆಯುಷ್ ಬದೋನಿ 36 ಹಾಗೂ ಲಕ್ನೋ ನಾಯಕ ರಿಷಭ್ ಪಂತ್ ಈ ಪಂದ್ಯದಲ್ಲೂ ಪ್ರದರ್ಶನ ನೀಡಲಿಲ್ಲ. ಈ ಟೂರ್ನಿಯಲ್ಲಿ ಪಂತ್​ ಅವರ ಅತ್ಯಂತ ಕೆಟ್ಟ ಬ್ಯಾಟಿಂಗ್ ಎಂದು ಹೇಳಬಹುದು. 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ ಲಕ್ನೋ 160 ರನ್​ಗಳ ಗುರಿಯನ್ನು ಡೆಲ್ಲಿಗೆ ನೀಡಿತ್ತು.

ಇದನ್ನೂ ಓದಿ:RR vs LSG ಐಪಿಎಲ್ ಮ್ಯಾಚ್ ಫಿಕ್ಸ್ ಆಗಿತ್ತಾ..? ಸಿಎಂ, ಕ್ರೀಡಾ ಸಚಿವರಿಗೆ ಫ್ರಾಂಚೈಸಿ ದೂರು

publive-image

ಈ ರನ್​ಗಳ ಹಿಂದೆ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟರ್​ಗಳು ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಓಪನರ್​ ಅಭಿಷೇಕ್ ಪೊರೆಲ್ ಭರ್ಜರಿ ಬ್ಯಾಟಿಂಗ್ ಮಾಡಿ​ ಕೇವಲ 33 ಎಸೆತದಲ್ಲಿ 5 ಬೌಂಡರಿ, ಒಂದು ಸಿಕ್ಸರ್​ನಿಂದ 50 ರನ್​ ಗಳಿಸಿ ಡೇವಿಡ್​ ಮಿಲ್ಲರ್​ಗೆ ಕ್ಯಾಚ್ ಕೊಟ್ಟರು. ತಮ್ಮ ಮೊದಲ ಪಂದ್ಯದಲ್ಲಿ ಅಬ್ಬರಿಸಿದ್ದ ಕನ್ನಡಿಗ ಕರುಣ್ ನಾಯರ್ ಈ ಮ್ಯಾಚ್​ನಲ್ಲಿ 15 ರನ್​ಗೆ ವಾಪಸ್ ಆದರು. ಡಿಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಕೆ.ಎಲ್ ರಾಹುಲ್​ಗೆ ಉತ್ತಮ ಸಾಥ್ ಕೊಟ್ಟರು. ಹೀಗಾಗಿ ಅಜೇಯರಾಗಿ ಉಳಿದ ಅಕ್ಷರ್​, ಕೇವಲ 20 ಎಸೆತದಲ್ಲಿ 1 ಬೌಂಡರಿ 4 ಆಕಾಶದೆತ್ತರ ಸಿಕ್ಸರ್​ಗಳಿಂದ 34 ರನ್​ ಗಳಿಸಿದರು.

ಅದರಂತೆ ಕನ್ನಡಿಗ ಕೆ.ಎಲ್ ರಾಹುಲ್ ಅವರು ಒಳ್ಳೆಯ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಬಾರಿಸಿದರು. ಲಕ್ನೋ ವಿರುದ್ಧ ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್​ ನೀಡಿದ ಕನ್ನಡಿಗ ಪಂದ್ಯದಲ್ಲಿ ಔಟ್ ಆಗದೇ ಒಟ್ಟು 42 ಎಸೆತಗಳನ್ನು ಎದುರಿಸಿ 3 ಸಿಕ್ಸರ್​, 3 ಬೌಂಡರಿಯಿಂದ 57 ರನ್​ ಚಚ್ಚಿದರು. ಇದರಿಂದ ಡೆಲ್ಲಿ ಕ್ಯಾಪಿಟಲ್ಸ್ 17.5 ಓವರ್​ಗಳಲ್ಲಿ ಕೇವಲ 2 ವಿಕೆಟ್​ ನಷ್ಟಕ್ಕೆ 161 ರನ್​ ಗಳಿಸಿ ವಿಜಯಮಾಲೆ ಧರಿಸಿತು.

2025ರ ಟೂರ್ನಿಯಲ್ಲಿ 8 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಈಗಾಗಲೇ 6 ರಲ್ಲಿ ಗೆಲವು ದಾಖಲಿಸಿ 12 ಅಂಕಗಳನ್ನು ಪಡೆದುಕೊಂಡಿದೆ. ಇನ್ನುಳಿದ ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆಲುವು ಸಾಧಿಸಿದ್ರೆ ಪ್ಲೇಆಫ್​ಗೆ ಹೋಗಲಿದೆ. ಇನ್ನು ಲಕ್ನೋ ಟೀಮ್ 9 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಜಯ ಪಡೆದಿದ್ದು ಪ್ಲೇ ಆಫ್​ಗಾಗಿ ಮೂರು ಪಂದ್ಯಗಳಲ್ಲಿ ಗೆಲುವು ಪಡೆಯಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment