4, 4, 6, 6, 6; ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್.. ಚೆನ್ನೈ ವಿರುದ್ಧ ಹಾಫ್​ಸೆಂಚುರಿ ಸಿಡಿಸಿದ ಕನ್ನಡಿಗ​

author-image
Bheemappa
Updated On
4, 4, 6, 6, 6; ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್.. ಚೆನ್ನೈ ವಿರುದ್ಧ ಹಾಫ್​ಸೆಂಚುರಿ ಸಿಡಿಸಿದ ಕನ್ನಡಿಗ​
Advertisment
  • ಸಿಎಸ್​ಕೆ ಬೌಲರ್​ಗಳನ್ನ ಬೆಂಡೆತ್ತಿದ ಡೆಲ್ಲಿ ಸ್ಟಾರ್ ಬ್ಯಾಟರ್
  • ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಮ್ಯಾಚ್
  • ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿರುವ ಕನ್ನಡಿಗ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡದ ಸ್ಟಾರ್ ಬ್ಯಾಟರ್ ಕನ್ನಡಿಗ ಕೆ.ಎಲ್ ರಾಹುಲ್ ಅದ್ಭುತ ಅರ್ಧಶತಕ ಸಿಡಿಸಿದ್ದಾರೆ.

ಚೆನ್ನೈ ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಆರಂಭದ ವೇಳೆ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ ಪಾಟೀಲ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಕೆ.ಎಲ್ ರಾಹುಲ್ ಎಂದಿನಂತೆ ತಮ್ಮ ಅಬ್ಬರದ ಬ್ಯಾಟಿಂಗ್ ಮುಂದುವರೆಸಿದರು. ಚೆನ್ನೈ ಬೌಲರ್​ಗಳನ್ನ ಕಾಡಿದ ಕನ್ನಡಿಗ ಅರ್ಧಶತಕ ಬಾರಿಸಿಯೇ ಬಿಟ್ಟರು.

ಇದನ್ನೂ ಓದಿ:IPL ಇತಿಹಾಸದಲ್ಲೇ ಹಾರ್ದಿಕ್ ಪಾಂಡ್ಯ ಬಿಗ್ ರೆಕಾರ್ಡ್.. ವಿಶೇಷ ದಾಖಲೆ ಬರೆದ ಕ್ಯಾಪ್ಟನ್

publive-image

ಚಾಂಪಿಯನ್ ಟ್ರೋಫಿ ಟೂರ್ನಿಯಿಂದಲೂ ಉತ್ತಮವಾದ ಪಾರ್ಫ್​ನಲ್ಲಿರುವ ಕೆ.ಎಲ್ ರಾಹುಲ್​ ಸದ್ಯ ಚೆನ್ನೈ ವಿರುದ್ಧ ಹಾಫ್​ಸೆಂಚುರಿ ಸಿಡಿಸಿದ್ದಾರೆ. ಕೇವಲ 33 ಎಸೆತಗಳನ್ನು ಎದುರಿಸಿದ ರಾಹುಲ್, 2 ಬೌಂಡರಿ ಹಾಗೂ 3 ಅಮೋಘವಾದ ಸಿಕ್ಸರ್​ಗಳಿಂದ 50 ರನ್​ ಬಾರಿಸಿ, ಬ್ಯಾಟಿಂಗ್ ಮುಂದುವರೆಸಿದ್ದಾರೆ. ಈ ವೇಳೆ ಕೆ.ಎಲ್ ರಾಹುಲ್ ಸ್ಟ್ರೈಕ್ ರೇಟ್ 151.52 ಇತ್ತು.

ಈ ಟೂರ್ನಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಆಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಎರಡು ಪಂದ್ಯಗಳನ್ನು ಗೆದ್ದು ಅಂಕ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರು ಬ್ಯಾಟ್ ಬೀಸಿರಲಿಲ್ಲ. 2ನೇ ಪಂದ್ಯದಲ್ಲಿ ಹೈದ್ರಾಬಾದ್ ವಿರುದ್ಧ ಅಬ್ಬರಿಸಿದ್ದ ಕನ್ನಡಿಗ ಕೇವಲ 5 ಬಾಲ್​ಗಳಲ್ಲಿ 15 ರನ್​ಗಳನ್ನು ಗಳಿಸಿದ್ದರು. ಇದು ತಂಡದ ಗೆಲವಿಗೆ ಕಾರಣವಾಗಿತ್ತು. ಸದ್ಯ ಡೆಲ್ಲಿ ಕ್ಯಾಪಿಟಲ್ 16 ಓವರ್​ಗಳಲ್ಲಿ 3 ವಿಕೆಟ್​ಗೆ 146 ರನ್​ ಗಳಿಸಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment