ಕನ್ನಡಿಗ KL ರಾಹುಲ್ ಬೊಂಬಾಟ್ ಶತಕ.. ಜನ ಮೆಚ್ಚಿದ ಕನ್ನಡಿಗನ ಸೊಗಸಾದ ಆಟ..!

author-image
Ganesh
Updated On
ಕನ್ನಡಿಗ KL ರಾಹುಲ್ ಬೊಂಬಾಟ್ ಶತಕ.. ಜನ ಮೆಚ್ಚಿದ ಕನ್ನಡಿಗನ ಸೊಗಸಾದ ಆಟ..!
Advertisment
  • ಭಾರತದ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ 2ನೇ ಟೆಸ್ಟ್
  • ರೋಹಿತ್ ಶರ್ಮಾ ಜಾಗಕ್ಕೆ ಯಾರೆಂದು ಉತ್ತರ ಸಿಕ್ಕಿದೆ
  • ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ

ಭಾರತದ-A ತಂಡ ಮತ್ತು ಇಂಗ್ಲೆಂಡ್ ಲಯನ್ಸ್ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಕನ್ನಡಿಗ ಕೆ.ಎಲ್.ರಾಹುಲ್ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದಿದ್ದು, ಶತಕ ಬಾರಿಸಿ ಮಿಂಚಿದ್ದಾರೆ. ಈ ಶತಕ ಬಾರಿಸಲು ರಾಹುಲ್ 151 ಎಸೆತಗಳನ್ನು ಎದುರಿಸಿದ್ದಾರೆ. ರಾಹುಲ್ ನಾಟೌಟ್ ಆಗಿ ಉಳಿದಿದ್ದು, ಧ್ರುವ್ ಜುರೆಲ್ ಜೊತೆ ಇನ್ನಿಂಗ್ಸ್ ಮುನ್ನಡೆಸ್ತಿದ್ದಾರೆ.

ರೋಹಿತ್ ಶರ್ಮಾ ಬದಲಿ ಆಟಗಾರ

ಮೇ 7 ರಂದು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಬೆನ್ನಲ್ಲೇ ಜೈಸ್ವಾಲ್ ಜೊತೆ ಇನ್ನಿಂಗ್ಸ್ ಆರಂಭಿಸೋದು ಯಾರು ಎಂಬ ಪ್ರಶ್ನೆ ಉದ್ಭವ ಆಗಿತ್ತು. ಇದೀಗ ರೋಹಿತ್ ಜಾಗಕ್ಕೆ ರಾಹುಲ್ ಸೂಕ್ತ ಅನ್ನೋದು ಸಾಬೀತಾಗಿದೆ. ಜನರ ಪ್ರಶ್ನೆಗೆ ರಾಹುಲ್​ರ ಶತಕ ಉತ್ತರ ನೀಡಿದೆ.

ಭಾರತ ತಂಡದ ಸ್ಕೋರ್

ಭಾರತದ ಎ ತಂಡದ ಪರ ಜೈಸ್ವಾಲ್ ಮತ್ತು ಕೆ.ಎಲ್.ರಾಹುಲ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕೆ ಇಳಿದರು. ಜೈಸ್ವಾಲ್ 26 ಎಸೆತಗಳಲ್ಲಿ 17 ರನ್ ಗಳಿಸಿ ಔಟಾದರು. ನಂತರ ನಾಯಕ ಅಭಿಮನ್ಯು ಈಶ್ವರನ್ ಬ್ಯಾಟಿಂಗ್​ಗೆ ಬಂದರು. ಅವರು 13 ಎಸೆತಗಳಲ್ಲಿ 11 ರನ್ ಗಳಿಸಿ ಔಟಾದರು. ಕಳೆದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದ ಕರುಣ್ ನಾಯರ್ 71 ಎಸೆತಗಳಲ್ಲಿ 40 ರನ್ ಗಳಿಸಿ ವಿಕೆಟ್ ಕಳೆದುಕೊಂಡರು.

ಭಾರತ ತಂಡದ ಸ್ಕೋರ್ 57 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 237 ರನ್‌. ಧ್ರುವ್ ಜುರೆಲ್ ಕೂಡ ಅದ್ಭುತ ಬ್ಯಾಟಿಂಗ್ ಮಾಡುತ್ತಾ ಅರ್ಧಶತಕ ಗಳಿಸಿದ್ದಾರೆ. ಜುರೇಲ್ 81 ಎಸೆತಗಳಲ್ಲಿ 51 ರನ್‌ಗಳೊಂದಿಗೆ ಬ್ಯಾಟಿಂಗ್ ಮಾಡ್ತಿದ್ದಾರೆ. ಕೆ.ಎಲ್.ರಾಹುಲ್ 153 ಎಸೆತಗಳಲ್ಲಿ 102 ರನ್‌ಗಳೊಂದಿಗೆ ಆಡುತ್ತಿದ್ದಾರೆ. ಭಾರತ ಎ ಮತ್ತು ಇಂಗ್ಲೆಂಡ್ ಲಯನ್ಸ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.

ಇದನ್ನೂ ಓದಿ: ಅಭಿಮಾನಿಗಳಿಗೆ RCB ಅಂದ್ರೆ ಜೀವ.. ಫ್ರಾಂಚೈಸಿ ಮಾಲೀಕರಿಗೆ ಫ್ಯಾನ್ಸ್ ಅಂದ್ರೆ ಜಸ್ಟ್ ಬ್ಯುಸಿನೆಸ್..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment