/newsfirstlive-kannada/media/post_attachments/wp-content/uploads/2025/04/KL-RAHUL-7.jpg)
ಲಕ್ನೋ ಹೋಮ್ಗ್ರೌಂಡ್ನಲ್ಲಿ ನಿನ್ನೆ ಡೆಲ್ಲಿಯ ಆರ್ಭಟ ಜೋರಾಗಿತ್ತು. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಡೆಲ್ಲಿ ಡಾಮಿನೇಟಿಂಗ್ ಪರ್ಫಾಮನ್ಸ್ ನೀಡ್ತು. ಡೆಲ್ಲಿ ಕ್ಯಾಪಿಟಲ್ಸ್ನ ಅಬ್ಬರದ ಮುಂದೆ ತವರಿನಲ್ಲಿ ಲಕ್ನೋ ಥಂಡಾ ಹೊಡೀತು.
ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿತು. ಬೆನ್ನಲ್ಲೇ ಎರಡು ತಂಡಗಳ ಆಟಗಾರರು ಪರಸ್ಪರ ಮುಖಾಮುಖಿಯಾಗಿ ಕೈಲುಕಿದರು. ಈ ವೇಳೆ ಎಲ್ಎಸ್ಜಿ ಮಾಲೀಕ ಸಂಜೀವ್ ಗೋಯೆಂಕಾ ಕೂಡ ಡೆಲ್ಲಿ ಆಟಗಾರರಿಗೆ ವಿಶ್ ಮಾಡಲು ಮೈದಾನಕ್ಕೆ ಬಂದಿದ್ದರು.
ಈ ವೇಳೆ ಗೊಯೆಂಕಾ ಅವರನ್ನು ಕೆ.ಎಲ್.ರಾಹುಲ್ ನಿರ್ಲಕ್ಷ್ಯ ಮಾಡಿರೋ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಳೆದ ಬಾರಿಯ ಐಪಿಎಲ್ನಲ್ಲಿ ರಾಹುಲ್ ಎಲ್ಎಸ್ಜಿ ತಂಡದ ಕ್ಯಾಪ್ಟನ್ ಆಗಿದ್ದರು. ಸೋತ ಸಂದರ್ಭದಲ್ಲಿ ಕೆಎಲ್ ರಾಹುಲ್ ಮೇಲೆ ಗೋಯೆಂಕಾ ಸಾರ್ವಜನಿಕವಾಗಿ ಹರಿಹಾಯ್ದಿದ್ದರು.
ಇನ್ನು, ನಿನ್ನೆಯ ಪಂದ್ಯದಲ್ಲಿ ರಾಹುಲ್, ಕ್ಲಾಸಿಕ್ ಆಟವಾಡಿದ್ರು. ಎಕಾನ ಮೈದಾನದಲ್ಲಿ ಪರ್ಫೆಕ್ಟ್ ಇನ್ನಿಂಗ್ಸ್ ಕಟ್ಟಿದ ಕೆ.ಎಲ್ ರಾಹುಲ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದ್ರು. ಕ್ಯಾಪ್ಟನ್ ಅಕ್ಷರ್ ಪಟೇಲ್ ಕೂಡ ಅದ್ಭುತ ಬ್ಯಾಟಿಂಗ್ ನಡೆಸಿದ್ರು. 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಅಕ್ಷರ್ ಪಟೇಲ್ 4 ಸಿಕ್ಸರ್, 1 ಬೌಂಡರಿ ಚಚ್ಚಿದ್ರು. 20 ಎಸೆತ ಎದುರಿಸಿ ಅಜೇಯ 34 ರನ್ಗಳಿಸಿದ್ರು.
42 ಎಸೆತಗಳಲ್ಲಿ ಅಜೇಯ 52 ರನ್ ಸಿಡಿಸಿದ ಕೆ.ಎಲ್ ರಾಹುಲ್ 17.5ನೇ ಎಸೆತವನ್ನ ಸಿಕ್ಸರ್ ಸಿಡಿಸಿ ತಂಡವನ್ನ ಗೆಲುವಿನ ದಡ ಸೇರಿಸಿದ್ರು. ಇದೇ ವೇಳೆ ಐಪಿಎಲ್ನಲ್ಲಿ ವೇಗವಾಗಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ರು.
KL Rahul walking away from Goenka 😭😭😭😭
Absolute Cinema ❤️🥵🥵#LSGvsDC#KLRahulhttps://t.co/28QpmZnBJR— Pan India Review (@PanIndiaReview) April 22, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ