/newsfirstlive-kannada/media/post_attachments/wp-content/uploads/2025/03/KL-RAHUL-3.jpg)
ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಐಪಿಎಲ್ 2025ರ ಆರಂಭಿಕ ಪಂದ್ಯಗಳಿಂದ ಮಿಸ್ ಆಗುವ ಸಾಧ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್ ಇನ್ನೂ ತನ್ನ ನಾಯಕನ ಹೆಸರು ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ, ಕೆಎಲ್ ರಾಹುಲ್ ಕ್ಯಾಪ್ಟನ್ಸಿ ಆಫರ್ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
ಯಾಕೆ ರಾಹುಲ್ ಆಡಲ್ಲ..?
ಕೆ.ಎಲ್.ರಾಹುಲ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಆದರೂ ಆರಂಭಿಕ ಪಂದ್ಯಗಳನ್ನು ಆಡೋದು ಡೌಟ್. ಕಾರಣ ಇಷ್ಟೇ, ಕೆಎಲ್ ರಾಹುಲ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ರಾಹುಲ್ ಪತ್ನಿ ಅತಿಯಾ ಶೆಟ್ಟಿ, ಶೀಘ್ರದಲ್ಲೇ ತಾಯಿ ಆಗಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ರಾಹುಲ್ ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಈ ಕಾರಣದಿಂದ ಐಪಿಎಲ್ನ ಮೂರು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಬಹುದು ಎಂದು ವರದಿಯಾಗಿದೆ.
ಇದನ್ನೂ ಓದಿ: 1 ವರ್ಷ, 5 ಟೂರ್ನಿ, 5 ಟ್ರೋಫಿ; ಶ್ರೇಯಸ್ ಅಯ್ಯರ್ ಮುಟ್ಟಿದ್ದೆಲ್ಲಾ ಚಿನ್ನ.. ತಂಡದಲ್ಲಿದ್ರೆ ಕಪ್ ಪಕ್ಕನಾ?
ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್.ರಾಹುಲ್ ಅವರನ್ನು 14 ಕೋಟಿ ರೂ.ಗೆ ಖರೀದಿಸಿದೆ. ಮಾರ್ಚ್ 22 ರಿಂದ ಐಪಿಎಲ್ ಪ್ರಾರಂಭವಾಗಲಿದೆ. 18ನೇ ಸೀಸನ್‌ನ ಮೊದಲ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮಾರ್ಚ್ 24 ರಂದು ಮೊದಲ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: ಮುಂಬೈ ಲೀಲಾವತಿ ಆಸ್ಪತ್ರೆಯಲ್ಲಿ ಚಿತಾ ಭಸ್ಮ, ಮಾನವನ ಬುರುಡೆಗಳು.. ಮಾಟ ಮಂತ್ರ, ಬಲಿದಾನದ ಭಯ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್