KL ರಾಹುಲ್ ಐಪಿಎಲ್ ಸ್ಯಾಲರಿ ಎಷ್ಟು..? ಪ್ರತಿ ವರ್ಷ ಕನ್ನಡಿಗ ಪಡೆದ ಸಂಭಾವನೆ ಕೋಟಿ ಕೋಟಿ!

author-image
Bheemappa
Updated On
KL ರಾಹುಲ್ ಐಪಿಎಲ್ ಸ್ಯಾಲರಿ ಎಷ್ಟು..? ಪ್ರತಿ ವರ್ಷ ಕನ್ನಡಿಗ ಪಡೆದ ಸಂಭಾವನೆ ಕೋಟಿ ಕೋಟಿ!
Advertisment
  • ಮೊಟ್ಟ ಮೊದಲು ಕೆ.ಎಲ್ ರಾಹುಲ್ ಪಡೆದ IPL ಸಂಬಳವೆಷ್ಟು?
  • ಆರ್​ಸಿಬಿಯಲ್ಲಿ 2 ಬಾರಿ ಬ್ಯಾಟ್ ಬೀಸಿರುವ ಕೆ.ಎಲ್ ರಾಹುಲ್
  • ಐಪಿಎಲ್​ ಟೂರ್ನಿಗಳಲ್ಲಿ ಕೆ.ಎಲ್ ರಾಹುಲ್ ಸಾಧನೆ ಏನೇನು?

ಟೀಮ್ ಇಂಡಿಯಾದಲ್ಲೇ ಆಗ್ಲಿ, ಐಪಿಎಲ್​ನಲ್ಲೇ ಆಗ್ಲಿ ಸ್ಟೈಲೀಶ್ ಬ್ಯಾಟರ್, ಕನ್ನಡಿಗ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಎಲ್ಲರನ್ನು ಸೆಳೆಯುತ್ತದೆ. ಮೈದಾನದಲ್ಲಿ ಸೈಲೆಂಟ್ ಆಗಿ ಕೆ.ಎಲ್ ರಾಹುಲ್ ಕಾಣಿಸಿದರೂ ಬ್ಯಾಟಿಂಗ್​ನಲ್ಲಿ ಮಾತ್ರ ಚಾಣಕ್ಷ. ಹೀಗಾಗಿಯೇ ಈ ವರೆಗೂ ಐಪಿಎಲ್​ ಟೂರ್ನಿಗಳಲ್ಲಿ ದೊಡ್ಡ ಮೊತ್ತದಲ್ಲೇ ಕಮಾಯಿ ಮಾಡಿದ್ದಾರೆ. ಕೆ.ಎಲ್ ರಾಹುಲ್ ಅವರು ಐಪಿಎಲ್ ತಂಡ ಬದಲಾವಣೆ ಆದಾಗಲೆಲ್ಲಾ ಅವರ ಸ್ಯಾಲರಿ ಹೇಗಿದೆ ಎಂದರೆ..?

2013ರಲ್ಲಿ ಐಪಿಎಲ್​​ಗೆ ಪಾದಾರ್ಪಣೆ ಮಾಡಿದ ಕೆ.ಎಲ್ ರಾಹುಲ್ ಅವರು ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಮ್​ನಲ್ಲಿ ಆಡಿದ್ದರು. ಒಂದೇ ವರ್ಷ ಅಷ್ಟೇ ಆರ್​ಸಿಬಿಯಲ್ಲಿ ಆಡಿದ್ದ ರಾಹುಲ್ 2014ರಲ್ಲಿ ಹೈದ್ರಾಬಾದ್​ ತಂಡದಲ್ಲಿ ಸ್ಥಾನ ಪಡೆದರು. ಇಲ್ಲಿ ಎರಡು ವರ್ಷ ಆಡಿದ ರಾಹುಲ್ 2016ರಲ್ಲಿ ಮತ್ತೆ ಆರ್​​ಸಿಬಿಗೆ ಮರಳಿದರು. 2017ರ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದರಿಂದ ಐಪಿಎಲ್​ ಟೂರ್ನಿಯಲ್ಲಿ ಆಡಲಿಲ್ಲ. ಮರುವರ್ಷ 2018ರಲ್ಲಿ ಪಂಜಾಬ್ ಸೇರಿಕೊಂಡರು. ಸೇರಿದ ವರ್ಷ ಭರ್ಜರಿ ಬ್ಯಾಟಿಂಗ್ ಮಾಡಿ 659 ರನ್​ಗಳನ್ನ ಬಾರಿಸಿದ್ದರು. ಈ ವರ್ಷ ಮಾತ್ರವಲ್ಲ, ಪಂಜಾಬ್​ನಲ್ಲಿದ್ದ 4 ವರ್ಷವೂ 600 ರನ್ ಗಡಿ ದಾಟಿಸಿದ್ದರು. ಆದರೆ 2022ರಲ್ಲಿ ಲಕ್ನೋ ಟೀಮ್​ಗೆ ಕ್ಯಾಪ್ಟನ್ ಆಗಿ ಸೇರ್ಪಡೆಗೊಂಡ ರಾಹುಲ್ ಅವರು 2024ರ ಟೂರ್ನಿಯಲ್ಲಿ 520 ರನ್​ಗಳನ್ನ ಕಲೆ ಹಾಕಿದ್ದರು. 2024ರಲ್ಲಿ ಲಕ್ನೋ ಟೀಮ್​ನಿಂದ ಹೊರ ಬಂದು ಸದ್ಯ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಜೊತೆ ಬ್ಯಾಟ್ ಬೀಸುತ್ತಿದ್ದಾರೆ.

publive-image

ಐಪಿಎಲ್​ನಲ್ಲಿ ರಾಹುಲ್ ಸಾಧನೆ

ಐಪಿಎಲ್​ನಲ್ಲಿ 132 ಪಂದ್ಯಗಳನ್ನ ಕೆ.ಎಲ್ ರಾಹುಲ್ ಅವರು ಆಡಿದ್ದು ಒಟ್ಟು 4,683 ರನ್​ಗಳನ್ನ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಸೆಂಚುರಿಗಳು ಸೇರಿದ್ದು ಪಂಜಾಬ್​​ ತಂಡದಲ್ಲಿದ್ದಾಗ 132 ರನ್​ಗಳು ಹೊಡೆದಿರುವುದು ವೈಯಕ್ತಿಕವಾದ ಗರಿಷ್ಠ ರನ್ ಆಗಿದೆ. 37 ಅರ್ಧ ಶತಕಗಳನ್ನ ಬಾರಿಸಿದ್ದಾರೆ. 400 ಬೌಂಡರಿ ಬಾರಿಸಿರುವ ರಾಹುಲ್​ ಒಟ್ಟು 187 ಸಿಕ್ಸರ್​ಗಳನ್ನ ಸಿಡಿಸಿದ್ದಾರೆ.

2020-21ರಲ್ಲಿ ಪಂಜಾಬ್ ತಂಡದಲ್ಲಿ ಆಡುವಾಗ ಕೆ.ಎಲ್ ರಾಹುಲ್ ಅವರು 670 ರನ್​ಗಳನ್ನು ಗಳಿಸಿದ್ದರು. ಇದೇ ಐಪಿಎಲ್​ ಟೂರ್ನಿಗಳಲ್ಲಿ ಗಳಿಸಿರುವ ಗರಿಷ್ಠ ರನ್ ಆಗಿದೆ. ಇನ್ನು ಇದೇ ಟೀಮ್​ನಲ್ಲಿ ಆಡುವಾಗ ಎರಡು ಬಾರಿ ಸೆಂಚುರಿಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ಒಮ್ಮೆ 95 ರನ್​ ಮತ್ತೊಮ್ಮೆ 98 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ದಾರೆ. ಇನ್ನುಳಿದಂತೆ ವಿಕೆಟ್ ಕೀಪಿಂಗ್ ಮಾಡುವ ರಾಹುಲ್ ಅವರು ಒಟ್ಟು 78 ಕ್ಯಾಚ್​ ಹಿಡಿದಿದ್ದಾರೆ.

ಕೆ.ಎಲ್ ರಾಹುಲ್ ಅವರ ಐಪಿಎಲ್ ಸ್ಯಾಲರಿ ಹೇಗಿದೆ?

2018 ಪಂಜಾಬ್ ಕಿಂಗ್ಸ್​ 11 ಕೋಟಿ ರೂಪಾಯಿ
2019 ಪಂಜಾಬ್ ಕಿಂಗ್ಸ್​ 11 ಕೋಟಿ ರೂಪಾಯಿ
2020 ಪಂಜಾಬ್ ಕಿಂಗ್ಸ್​ 11 ಕೋಟಿ ರೂಪಾಯಿ
2021 ಪಂಜಾಬ್ ಕಿಂಗ್ಸ್​ 11 ಕೋಟಿ ರೂಪಾಯಿ
2022 ಲಕ್ನೋ ಸೂಪರ್ ಜೈಂಟ್ಸ್​ 17 ಕೋಟಿ ರೂಪಾಯಿ
2023 ಲಕ್ನೋ ಸೂಪರ್ ಜೈಂಟ್ಸ್​ 17 ಕೋಟಿ ರೂಪಾಯಿ
2024 ಲಕ್ನೋ ಸೂಪರ್ ಜೈಂಟ್ಸ್​ 17 ಕೋಟಿ ರೂಪಾಯಿ
2025 ಡೆಲ್ಲಿ ಕ್ಯಾಪಿಟಲ್ಸ್​ 14 ಕೋಟಿ ರೂಪಾಯಿಗಳು

ಇದನ್ನೂ ಓದಿ:ಪಂದ್ಯದ ವೇಳೆ ಅಭಿಮಾನಿಗಳನ್ನ ಥಳಿಸಲು ಯತ್ನಿಸಿದ ಸ್ಟಾರ್ ಕ್ರಿಕೆಟರ್.. ಅಸಲಿಗೆ ಆಗಿದ್ದೇನು?

publive-image

ಲಕ್ನೋ ಟೀಮ್​ನಲ್ಲಿ ಕನ್ನಡಿಗನ ಸಾಧನೆ

ಲಕ್ನೋ ಟೀಮ್​ನಲ್ಲೂ ಕನ್ನಡಿಗ ಒಳ್ಳೆಯ ಪರ್ಫಾಮೆನ್ಸ್ ನೀಡಿದ್ದಾರೆ. 2022ರಲ್ಲಿ ತಂಡಕ್ಕೆ ಸೇರಿದ ವರ್ಷವೇ 1 ಸೆಂಚುರಿ ಸಮೇತ 616 ರನ್​ಗಳನ್ನು ಗಳಿಸಿದ್ದರು. 2023ರಲ್ಲಿ ಇಂಜುರಿಗೆ ತುತ್ತಾಗಿದ್ದ ಅವರು 9 ಪಂದ್ಯಗಳಲ್ಲಿ 274 ರನ್​ಗಳ ಗಳಿಸಿದ್ದರು. 2024ರಲ್ಲೂ ಉತ್ತಮ ಪರ್ಫಾಮೆನ್ಸ್ ನೀಡಿದ್ದ ಕನ್ನಡಿಗ 520 ರನ್​ಗಳನ್ನ ಗಳಿಸಿ ಜೊತೆಗೆ ಕ್ಯಾಪ್ಟನ್ಸಿಯನ್ನು ಉತ್ತಮವಾಗಿಯೇ ನಿಭಾಯಿಸಿದ್ದರು. ಸದ್ಯ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಇರುವ ಕನ್ನಡಿಗ ಅತ್ಯುತ್ತಮವಾದ ಪರ್ಫಾಮೆನ್ಸ್ ನೀಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment