ಪಂತ್​​ಗೆ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದ ಕೆ.ಎಲ್​ ರಾಹುಲ್​ಗೆ ಭರ್ಜರಿ ಆಫರ್​!

author-image
Ganesh Nachikethu
Updated On
ಪಂತ್​​ಗೆ ಬಿಗ್​ ಶಾಕ್​​; ಟೀಮ್​ ಇಂಡಿಯಾದಿಂದ ಕೆ.ಎಲ್​ ರಾಹುಲ್​ಗೆ ಭರ್ಜರಿ ಆಫರ್​!
Advertisment
  • ಸದ್ಯ ನಡೆಯುತ್ತಿರೋ ದುಲೀಪ್​ ಟ್ರೋಫಿಯಲ್ಲಿ ಕನ್ನಡಿಗ ಮೆಚ್ಚುಗೆ ಆಟ
  • ಸಂಕಷ್ಟಕ್ಕೆ ಸಿಲುಕಿದ್ದ ಭಾರತ ಎ ತಂಡವನ್ನು ಬಚಾವ್​ ಮಾಡಿದ ರಾಹುಲ್​​​
  • ಮಹತ್ವದ ಪಂದ್ಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕೆ.ಎಲ್​ ರಾಹುಲ್​ ರನ್ಸ್​​

ಶ್ರೀಲಂಕಾ ಪ್ರವಾಸ ಮುಗಿದ ಬೆನ್ನಲ್ಲೇ ಟೀಮ್​ ಇಂಡಿಯಾ ಆಟಗಾರರು ರೆಸ್ಟ್​ನಲ್ಲಿದ್ದಾರೆ. ಇದೇ ತಿಂಗಳು 19ನೇ ತಾರೀಕಿನಿಂದ ಬಾಂಗ್ಲಾದೇಶದ ವಿರುದ್ಧ 2 ಪಂದ್ಯಗಳ ಟೆಸ್ಟ್​ ಸರಣಿ ನಡೆಯಲಿದ್ದು, ಎಲ್ಲರೂ ಇದಕ್ಕಾಗಿ ಎದುರು ನೋಡುತ್ತಿದ್ದಾರೆ. ಇದರ ಮಧ್ಯೆ ಟೆಸ್ಟ್​​ ಸರಣಿಯಲ್ಲಿ ಟೀಮ್​ ಇಂಡಿಯಾ ಪ್ಲೇಯಿಂಗ್​​ ಎಲೆವೆನ್​ನಲ್ಲಿ ಯಾರಿಗೆ ಅವಕಾಶ ಸಿಗಲಿದೆ? ಅನ್ನೋ ಚರ್ಚೆ ಜೋರಾಗಿದೆ. ಅದರಲ್ಲೂ ಸೆಲೆಕ್ಟರ್ಸ್​​ ಯಾವ ವಿಕೆಟ್​ ಕೀಪರ್​ಗೆ ಮಣೆ ಹಾಕಬಹುದು ಅನ್ನೋ ಕುತೂಹಲ ಇದೆ.

ಟೀಮ್​ ಇಂಡಿಯಾದಲ್ಲಿ ಮೂವರು ವಿಕೆಟ್​ ಕೀಪರ್ಸ್​ ಇದ್ದು, ಎಲ್ಲರೂ ಫಿಟ್​ ಆಗಿದ್ದಾರೆ. ಆದರೆ, ದುಲೀಪ್​ ಟ್ರೋಫಿಯಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಭರ್ಜರಿ ಕಮ್​ಬ್ಯಾಕ್​ ಮಾಡಿದ್ದು, ಇವರೇ ಬಾಂಗ್ಲಾದೇಶದ ವಿರುದ್ಧ ಟೆಸ್ಟ್​​ಗೆ ಮೊದಲ ವಿಕೆಟ್​ ಕೀಪರ್​ ಆಗಿದ್ದಾರೆ. ವಿಕೆಟ್​ ಕೀಪರ್​ ಸ್ಥಾನದಲ್ಲಿ ಆಯ್ಕೆಯಾಗಬೇಕಿದ್ದ ಪಂತ್​ಗೆ ಇದು ಶಾಕಿಂಗ್ ನ್ಯೂಸ್​ ಆಗಿದೆ ಎನ್ನಲಾಗಿದೆ.

ಕೆ.ಎಲ್​ ರಾಹುಲ್​ ಅದ್ಭುತ ಪ್ರದರ್ಶನ!

ಭಾರತ-ಎ ಪರ ದುಲೀಪ್ ಟ್ರೋಫಿಯಲ್ಲಿ ಆಡುತ್ತಿರೋ ಕೆಎಲ್ ರಾಹುಲ್ ಸಂಕಷ್ಟದಲ್ಲಿ ನೆರವಾದರು. ಕ್ರೀಸ್​ನಲ್ಲೇ ಕಚ್ಚಿ ನಿಂತು ನಿರ್ಣಾಯಕ ರನ್​ಗಳ ಕಲೆ ಹಾಕಿದ್ರು. 2ನೇ ದಿನದಾಟದಲ್ಲಿ ಕೆ.ಎಲ್ ರಾಹುಲ್ ಅಜೇಯ 23 ರನ್‌ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ, 3ನೇ ದಿನದಾಟದಲ್ಲಿ ಬೌಂಡರಿ ಬಾರಿಸಲು ಹೋಗಿ ರಾಹುಲ್​ ಔಟ್​ ಆದರು. ಇವರು 111 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 37 ರನ್‌ ಸಿಡಿಸಿದ್ದು, ಇದೇ ತಂಡದ ಆಟಗಾರರಲ್ಲಿ ಹೈಎಸ್ಟ್​ ಸ್ಕೋರ್​ ಆಗಿದೆ. ರಾಹುಲ್​ ಕ್ರೀಸ್​ನಲ್ಲಿ ಡೆಫೆನ್ಸಿವ್​ ಬ್ಯಾಟಿಂಗ್​ ಮಾಡಿದ್ದು ವಿಶೇಷ. ಹಾಗಾಗಿ ಇವರು ಬಾಂಗ್ಲಾದೇಶದ ವಿರುದ್ಧ ಟೆಸ್ಟ್​​ಗೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ದುಲೀಪ್‌ ಟ್ರೋಫಿಯ ಮೊದಲ ದಿನ ಸ್ಟಾರ್ ಆಟಗಾರರಾದ ಯಶಸ್ವಿ ಜೈಸ್ವಾಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ರುತುರಾಜ್ ಗಾಯಕ್ವಾಡ್ ಮತ್ತು ರಜತ್ ಪಾಟಿದಾರ್ ಅವರೇ ರನ್‌ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರ ಫ್ಲಾಪ್‌ ಶೋ ಮಧ್ಯೆ ರಾಹುಲ್​ ಮೆಚ್ಚುಗೆ ಆಟ ಆಡಿದ್ರು.

ಇದನ್ನೂ ಓದಿ: IPL 2025: ಮೆಗಾ ಆಕ್ಷನ್​​ಗೆ ಮುನ್ನವೇ ಆರ್​​​ಸಿಬಿ ಕನಸಿಗೆ ತಣ್ಣೀರೆರಚಿದ ದ್ರಾವಿಡ್​ ಪುತ್ರ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment