ಆಸ್ಟ್ರೇಲಿಯಾದ ವಿರುದ್ಧ ಮಹತ್ವದ ಟೆಸ್ಟ್​; ಭಾರತ ತಂಡದ ಮಾನ ಕಾಪಾಡಿದ ಕೆ.ಎಲ್​ ರಾಹುಲ್

author-image
Ganesh Nachikethu
Updated On
KL ರಾಹುಲ್​​ಗೆ ಜಾಕ್​​ಪಾಟ್​​; ಕರ್ನಾಟಕದ ಮೂವರು ಸ್ಟಾರ್​ ಆಟಗಾರರಿಗೆ ಸ್ಥಾನ
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​
  • ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂದ ಭಾರತ ತಂಡ
  • ಭಾರತ ತಂಡಕ್ಕೆ ಆಸರೆಯಾದ ಸ್ಟಾರ್​ ಕ್ರಿಕೆಟರ್​ ರಾಹುಲ್

ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯದ 3ನೇ ದಿನದ ಆಟ ಅಂತ್ಯವಾಗಿದೆ. ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಟೀಮ್​ ಇಂಡಿಯಾಗೆ 445 ರನ್​ಗಳ ಗುರಿ ನೀಡಿದೆ. ಈ ರನ್​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾಗೆ ಮೊದಲ ಓವರ್​​ನಲ್ಲೇ ಮಿಚೆಲ್ ಸ್ಟಾರ್ಕ್ ಆಘಾತ ನೀಡಿದ್ರು.

2ನೇ ಎಸೆತದಲ್ಲೇ ಜೈಸ್ವಾಲ್​​ ವಿಕೆಟ್​​ ಔಟ್​

ಮೊದಲ ಓವರ್​​​ನ 2ನೇ ಎಸೆತದಲ್ಲೇ ಟೀಮ್​ ಇಂಡಿಯಾದ ಸ್ಟಾರ್​ ಓಪನರ್​ ಯಶಸ್ವಿ ಜೈಸ್ವಾಲ್​​​ ವಿಕೆಟ್​​​ ತೆಗೆದರು ಸ್ಟಾರ್ಕ್​​. ಜೈಸ್ವಾಲ್​​ ಕೇವಲ 4 ರನ್​ಗೆ ಔಟಾದ್ರು. ಇದರ ಬೆನ್ನಲ್ಲೇ ಶುಭ್​ಮನ್ ಗಿಲ್ (1) ಕೂಡ ಸ್ಟಾರ್ಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.

ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ 3 ರನ್​ ಗಳಿಸಿ ಜೋಶ್​ ಹೇಜಲ್​ವುಡ್​ ಬೌಲಿಂಗ್​​ನಲ್ಲಿ ವಿಕೆಟ್​ ಕೀಪರ್​ಗೆ ಕ್ಯಾಚ್​ ನೀಡಿದ್ರು. ಕವರ್​ ಡ್ರೈವ್​ ಬಾರಿಸಲು ಹೋಗಿ ಕ್ಯಾಚ್​ ಕೊಟ್ಟರು. ಬಳಿಕ ಬಂದ ರಿಷಭ್ ಪಂತ್ ಕೂಡ 9 ರನ್ ​​ಗಳಿಸಿ ಪೆವಿಲಿಯನ್​ ಸೇರಿದರು.

ಭಾರತದ ಮಾನ ಕಾಪಾಡಿದ ಕೆ.ಎಲ್​ ರಾಹುಲ್​​

ಟೀಮ್​ ಇಂಡಿಯಾಗೆ ಮಳೆ ಕಾಡಿತ್ತು. ಮಳೆ ಅಡಚಣೆ ಮಧ್ಯೆಯೂ ಟೀಮ್​ ಇಂಡಿಯಾ 17 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 51 ರನ್​ ಕಲೆ ಹಾಕಿದೆ. ಟೀಮ್​ ಇಂಡಿಯಾ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡ್ರೂ ಕೆ.ಎಲ್​ ರಾಹುಲ್​​ ಮಾತ್ರ ಕ್ರೀಸ್​ನಲ್ಲೇ ನಿಂತು ಡಿಫೆಂಡ್​ ಮಾಡಿದ್ರು. ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ರಾಹುಲ್​ ಅವರು, 64 ಬಾಲ್​​ನಲ್ಲಿ 4 ಫೋರ್​ ಸಮೇತ 33 ರನ್​ ಬಾರಿಸಿದ್ರು. ರೋಹಿತ್ ಶರ್ಮಾ (0) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ಆಕಾಶ್ ದೀಪ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಇದನ್ನೂ ಓದಿ:ಕನ್ನಡಿಗನಿಗೆ ಸುವರ್ಣಾವಕಾಶ: RCB ಸೇರಿದ ಬೆನ್ನಲ್ಲೇ ದೇವದತ್​​ ಪಡಿಕ್ಕಲ್​ಗೆ​ ಜಾಕ್​ಪಾಟ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment