newsfirstkannada.com

ಕೆ.ಎಲ್​​ ರಾಹುಲ್​​ ಆರ್​​​ಸಿಬಿ ಮುಂದಿನ ಕ್ಯಾಪ್ಟನ್​​.. ಕನ್ನಡಿಗರು ಓದಲೇಬೇಕಾದ ಸ್ಟೋರಿ ಇದು!

Share :

Published May 11, 2024 at 7:08pm

    2024ರ ಐಪಿಎಲ್​​ ಮುಗಿದ ಬೆನ್ನಲ್ಲೇ ಆರ್​​​ಸಿಬಿ ಕ್ಯಾಪ್ಟನ್​ ಬದಲಾವಣೆ

    ಮುಂದಿನ ಸೀಸನ್​ ವೇಳೆಗೆ 40 ವರ್ಷಕ್ಕೆ ಕಾಲಿಡಲಿರೋ ಫಾಫ್​ ಡುಪ್ಲೆಸಿಸ್​​

    ಫಾಫ್​ ಡುಪ್ಲೆಸಿಸ್​​ ಬಳಿಕ ಆರ್​​ಸಿಬಿ ಮುಂದಿನ ಕ್ಯಾಪ್ಟನ್​ ಯಾರು ಗೊತ್ತಾ?

ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್ ಲೀಗ್​​ ಮುಗಿದ ಬೆನ್ನಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ. 39 ವರ್ಷದ ಫಾಫ್​ ಡುಪ್ಲೆಸಿಸ್​​​ ಮುಂದಿನ ಸೀಸನ್​​​ ವೇಳೆಗೆ 40 ವರ್ಷಕ್ಕೆ ಕಾಲಿಡಲಿದ್ದು, ಹಾಗಾಗಿ ಐಪಿಎಲ್​ಗೆ ಗುಡ್​​ ಬೈ ಹೇಳೋ ಸಾಧ್ಯತೆ ಇದೆ.

ಇನ್ನು, ಫಾಫ್​ ಡುಪ್ಲೆಸಿಸ್​ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಹೊಸ ಕ್ಯಾಪ್ಟನ್​ ಅಗತ್ಯ ಇದೆ. ಹಾಗಾಗಿ ನಮ್ಮ ಕರ್ನಾಟಕದ ಹುಡುಗ ಕೆ.ಎಲ್​ ರಾಹುಲ್​ ಅವರನ್ನು ಆರ್​​ಸಿಬಿಗೆ ಕರೆ ತರೋ ಪ್ರಯತ್ನಗಳು ನಡೆಯುತ್ತಿವೆ. ಆರ್​​ಸಿಬಿ ಮುಂದಿನ ಕ್ಯಾಪ್ಟನ್​​ ರಾಹುಲ್​ ಆಗಲಿದ್ದಾರೆ ಎನ್ನುತ್ತಿವೆ ಮೂಲಗಳು.

ಇತ್ತೀಚೆಗೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​​​ ವಿರುದ್ಧ ಲಕ್ನೋ ಸೂಪರ್​ ಜೈಂಟ್ಸ್​​​ ಹೀನಾಯವಾಗಿ ಸೋಲನ್ನಪ್ಪಿತ್ತು.

ಟಾಸ್​ ಗೆದ್ದು ಫಸ್ಟ್​ ಬ್ಯಾಟಿಂಗ್​ ಮಾಡಿದ ಲಕ್ನೋ ಸೂಪರ್​ ಜೈಂಟ್ಸ್​​ ನಿಗದಿತ 20 ಓವರ್​​ನಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಸನ್​ರೈಸರ್ಸ್​​ ಹೈದರಾಬಾದ್​ ತಂಡ ಅದ್ಭುತ ಪ್ರದರ್ಶನ ತೋರಿ ಕೇವಲ 9.4 ಓವರ್​​ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಜಯಭೇರಿ ಬಾರಿಸಿತ್ತು.

ಹೈದರಾಬಾದ್​​ ಪರ ಅಗ್ರೆಸ್ಸಿವ್​ ಬ್ಯಾಟಿಂಗ್​ ಮಾಡಿದ ಟ್ರಾವಿಸ್ ಹೆಡ್ ಕೇವಲ 30 ಎಸೆತಗಳಲ್ಲಿ 8 ಸಿಕ್ಸರ್​​, 8 ಫೋರ್​ ಸಮೇತ 89 ರನ್​ ಸಿಡಿಸಿದ್ರು. ಇನ್ನೊಂದೆಡೆ ಇವರಿಗೆ ಸಾಥ್​ ನೀಡಿದ ಅಭಿಷೇಕ್ ಶರ್ಮಾ ಕೇವಲ 28 ಬಾಲ್​ನಲ್ಲಿ 8 ಬೌಂಡರಿ, 6 ಸಿಕ್ಸರ್ ಸಮೇತ 75 ರನ್ ಚಚ್ಚಿದ್ರು.

ಪಂದ್ಯ ಸೋತ ಬಳಿಕ ಡ್ರೆಸ್ಸಿಂಗ್​ ರೂಮ್​ ಬಳಿ LSG ಮಾಲೀಕ ಸಂಜೀವ್ ಗೋಯೆಂಕಾ ಕ್ಯಾಪ್ಟನ್​​ ಕೆ.ಎಲ್​​ ರಾಹುಲ್​ ಮೇಲೆ ಕೂಗಾಡಿದ್ದರು. ರಾಹುಲ್ ತಾಳ್ಮೆಯಿಂದ ಉತ್ತರಿಸಲು ಯತ್ನಿಸಿದ್ರೂ ಗೋಯೆಂಕಾ ಅಸಭ್ಯ ವರ್ತನೆ ತೋರಿದ್ರು. ಈ‌ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಆರ್​​ಸಿಬಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.​

ಇದನ್ನೂ ಓದಿ: ‘ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್​​ ರಾಹುಲ್​​​ ಆರ್​​ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕೆ.ಎಲ್​​ ರಾಹುಲ್​​ ಆರ್​​​ಸಿಬಿ ಮುಂದಿನ ಕ್ಯಾಪ್ಟನ್​​.. ಕನ್ನಡಿಗರು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2024/05/KL-Rahul-next-captain.jpg

Load More