ಚಾಂಪಿಯನ್ಸ್​ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ; ಭಾರತ ತಂಡದಲ್ಲಿ KL​ ರಾಹುಲ್​ಗೆ ಹೊಸ ಜವಾಬ್ದಾರಿ

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ; ಭಾರತ ತಂಡದಲ್ಲಿ KL​ ರಾಹುಲ್​ಗೆ ಹೊಸ ಜವಾಬ್ದಾರಿ
Advertisment
  • ಇತ್ತೀಚೆಗೆ ನಡೆದ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯ
  • ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ​ ಗೆದ್ದು ಬೀಗಿದ ಭಾರತ ತಂಡ!
  • ಟೀಮ್​ ಇಂಡಿಯಾದಲ್ಲಿ ಕೆ.ಎಲ್​ ರಾಹುಲ್​ಗೆ ಹೊಸ ಜವಾಬ್ದಾರಿ

ಇತ್ತೀಚೆಗೆ ನಡೆದ ಐಸಿಸಿ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್​​ ವಿರುದ್ಧ ಭರ್ಜರಿ ಗೆಲುವು ಸಾಧಿಸೋ ಮೂಲಕ ಭಾರತ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ. ಭಾರತ ತಂಡದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​ ಪ್ರಮುಖ ಪಾತ್ರವಹಿಸಿದರು.

ಚಾಂಪಿಯನ್ಸ್‌ ಟ್ರೋಫಿಗಾಗಿ ಅನೌನ್ಸ್​ ಆದ ಭಾರತ ತಂಡದಲ್ಲಿ ಮೊದಲ ವಿಕೆಟ್​ ಕೀಪರ್​ ಬ್ಯಾಟರ್​ ಆಗಿ ಕೆ.ಎಲ್​ ರಾಹುಲ್​ ಆಯ್ಕೆಯಾಗಿದ್ದರು. ಪಂತ್​ ಕೂಡ ಸೆಲೆಕ್ಟ್​ ಆಗಿದ್ದ ಕಾರಣ ಕೆ.ಎಲ್​ ರಾಹುಲ್​​​ ಅವರಿಗೆ ಚಾನ್ಸ್​ ಸಿಗುತ್ತಾ? ಅನ್ನೋ ಪ್ರಶ್ನೆ ಕೇಳಿ ಬಂದಿತ್ತು. ಈ ಸವಾಲುಗಳನ್ನು ಮೆಟ್ಟಿನಿಂತು ಸಿಕ್ಕ ಅವಕಾಶವನ್ನು ರಾಹುಲ್​ ಸಮರ್ಥವಾಗಿ ಉಪಯೋಗಿಸಿಕೊಂಡರು. ಇವರು ಬ್ಯಾಟಿಂಗ್​​ ಮತ್ತು ಕೀಪಿಂಗ್​ನಲ್ಲೂ ಅಮೋಘ ಪ್ರದರ್ಶನ ನೀಡಿ ಭಾರತ ಗೆಲುವಿನಲ್ಲಿ ಕೀ ರೋಲ್​ ಪ್ಲೇ ಮಾಡಿದರು.

ಭಾರತಕ್ಕೆ ಹೊಸ ಫಿನಿಶರ್​​

ಮಧ್ಯಮ ಕ್ರಮಾಂಕದಲ್ಲೂ ಕೆ.ಎಲ್​ ರಾಹುಲ್​ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಲ್ಲ ಪ್ರಶ್ನೆಗಳಿಗೆ ತಮ್ಮ ಬ್ಯಾಟ್​ನಿಂದಲೇ ಉತ್ತರ ಕೊಟ್ಟಿದ್ದಾರೆ. ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಎಲ್ಲರ ಮನ ಗೆದ್ದಿದ್ದಾರೆ. ಹೀಗಾಗಿ ಕೆಎಲ್ ರಾಹುಲ್‌ ಟೀಮ್ ಇಂಡಿಯಾದ ಹೊಸ ಫಿನಿಷರ್‌ ಆಗಬಹುದು ಅನ್ನೋ ಮಾತುಗಳು ಕೇಳಿ ಬಂದಿವೆ.

ಕೆಎಲ್ ರಾಹುಲ್‌ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ 5 ಪಂದ್ಯಗಳ 4 ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಬೀಸಿದ್ದರು. ಕೇವಲ ಒಮ್ಮೆ ಮಾತ್ರ ಔಟ್ ಆಗಿದ್ದರು. ಇವರು 4 ಇನಿಂಗ್ಸ್‌ನಲ್ಲಿ 140 ರನ್‌ ಸಿಡಿಸಿದ್ದಾರೆ. ಸಣ್ಣ ಇನ್ನಿಂಗ್ಸ್​ ಆಡಿದ್ರೂ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು ಎನ್ನಬಹುದು.

ಇದನ್ನೂ ಓದಿ:2027ರ ಏಕದಿನ ವಿಶ್ವಕಪ್​​; ಟೀಮ್​ ಇಂಡಿಯಾದಿಂದ ಈ ಮೂವರಿಗೆ ಗೇಟ್​ಪಾಸ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment