/newsfirstlive-kannada/media/post_attachments/wp-content/uploads/2024/12/KL_RAHUL_NEW.jpg)
ಇತ್ತೀಚೆಗೆ ನಡೆದ ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ಗೆದ್ದು ಬೀಗುವ ಮೂಲಕ ಕರ್ನಾಟಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬೆನ್ನಲ್ಲೇ ನಡೆಯುತ್ತಿರೋ ರಣಜಿ ಟ್ರೋಫಿಯಲ್ಲೂ ಸ್ಥಿರ ಪ್ರದರ್ಶನ ನೀಡುತ್ತಿದೆ. ಇಷ್ಟೇ ಅಲ್ಲ ಈಗಾಗಲೇ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸೋ ಮೂಲಕ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಇನ್ನು, ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಕರ್ನಾಟಕ ತಂಡ ಆಡಲು ಸಜ್ಜಾಗಿದೆ. ಈ ಹೊತ್ತಲ್ಲೇ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಕರ್ನಾಟಕ ತಂಡಕ್ಕೆ ಕೆ.ಎಲ್​ ರಾಹುಲ್​ ಎಂಟ್ರಿ ಆಗಿದೆ. ಹೀಗಾಗಿ ಕರ್ನಾಟಕ ತಂಡಕ್ಕೆ ಆನೆ ಬಲ ಬಂದಂತಾಗಿದೆ.
18 ಸದಸ್ಯರ ಕರ್ನಾಟಕ ತಂಡ ಪ್ರಕಟ
ರಣಜಿ ಟ್ರೋಫಿಗಾಗಿ ಈಗಾಗಲೇ ಕರ್ನಾಟಕ ತಂಡ ಪ್ರಕಟವಾಗಿದೆ. ಈ ಬಾರಿಯೂ ಕರ್ನಾಟಕವನ್ನು ಮಯಾಂಕ್​ ಅಗರ್ವಾಲ್​ ಅವರೇ ಲೀಡ್​ ಮಾಡಲಿದ್ದಾರೆ. ಇವರಿಗೆ ಶ್ರೇಯಸ್​ ಗೋಪಾಲ್​​ ವೈಸ್​ ಕ್ಯಾಪ್ಟನ್​ ಆಗಿ ಸಾಥ್​ ನೀಡಲಿದ್ದಾರೆ.
4 ವರ್ಷಗಳ ಬಳಿಕ ರಣಜಿಗೆ ರಾಹುಲ್​​ ಎಂಟ್ರಿ
ಬರೋಬ್ಬರಿ 4 ವರ್ಷಗಳ ನಂತರ ಕೆಎಲ್ ರಾಹುಲ್ ಮೊದಲ ಬಾರಿಗೆ ಕರ್ನಾಟಕ ಪರ ರಣಜಿ ಟ್ರೋಫಿ ಆಡಲಿದ್ದಾರೆ. ಇವರು ಕಳೆದ ಸೆಪ್ಟಂಬರ್‌ನಲ್ಲಿ ದುಲೀಪ್ ಟ್ರೋಫಿ ಆಡಿದ್ದರು. ಗಾಯದ ಸಮಸ್ಯೆಯಿಂದ ರಾಹುಲ್ ಪಂಜಾಬ್ ವಿರುದ್ಧ ಲೀಗ್ ಹಂತದ ಪಂದ್ಯ ಮಿಸ್ ಮಾಡಿಕೊಂಡಿದ್ದರು. ಈಗ ಇವರು ತಂಡ ಸೇರಿಕೊಂಡಿದ್ದು, ನಾಳೆಯಿಂದಲೇ ಅಭ್ಯಾಸ ಶುರು ಮಾಡಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಕೆ.ಎಲ್​ ರಾಹುಲ್​ ಅದ್ಭುತ ಪ್ರದರ್ಶನ ನೀಡಿದ್ದರು. ಈ ಬೆನ್ನಲ್ಲೇ ಬಿಸಿಸಿಐ ಸೂಚನೆಯಂತೆ ದೇಶೀಯ ಕ್ರಿಕೆಟ್​ನಲ್ಲಿ ಕೆ.ಎಲ್​ ರಾಹುಲ್​ ಭಾಗಿಯಾಗಲಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us