KL ರಾಹುಲ್​ಗೆ ಏನಾಯಿತು.. ಇಂದಿನ ಮಹತ್ವದ ಪಂದ್ಯದಲ್ಲಿ ಆಡ್ತಾರಾ?

author-image
Bheemappa
Updated On
ಸೂಪರ್ ಓವರ್​ನಲ್ಲಿ ಪಂದ್ಯ ಗೆಲ್ಲಿಸಿಕೊಟ್ಟ ಕನ್ನಡಿಗ ಕೆಎಲ್ ರಾಹುಲ್..!
Advertisment
  • ಡೆಲ್ಲಿ ಕ್ಯಾಪಿಟಲ್ಸ್​ಗೆ ಇಂದಿನ ಪಂದ್ಯ ಮಾಡು ಇಲ್ಲವೇ ಮಡಿ ಆಗಿದೆ
  • ಅಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಹೋಗಿರುವ ಕೆ.ಎಲ್ ರಾಹುಲ್
  • ಕನ್ನಡಿಗ ಕೆ.ಎಲ್ ರಾಹುಲ್ ಇಂದು ಆಡುವುದು ಅನುಮಾನ

ಪಂಜಾಬ್ ಕಿಂಗ್ಸ್​ ಎದುರಿನ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್ ಅವರು ಸೆಂಚುರಿ ಸಿಡಿಸಿದರೂ ಡೆಲ್ಲಿ ಕ್ಯಾಪಿಟಲ್ಸ್​ ಗೆಲುವು ಪಡೆಯಲಿಲ್ಲ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಡೆಲ್ಲಿ ಕ್ಯಾಪಿಟಲ್ಸ್​ ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಇದು ಡೆಲ್ಲಿಯ ಪ್ಲೇ ಆಫ್​ಗೆ ಹೋಗುವ ಕನಸು ಜೀವಂತ ಇರಿಸುತ್ತದೆ. ಇಂತಹ​ ಮ್ಯಾಚ್​​ನಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಅವರು ಇಂದು ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್​ನ ನೆಟ್​ ಸೆಷನ್​ನಲ್ಲಿ ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ನೆಟ್​ನಲ್ಲಿ ಮುಖೇಶ್​ ಕುಮಾರ್ ಅವರ ಬೌಲಿಂಗ್​ನಲ್ಲಿ ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ ಮಾಡುವಾಗ ಇಂಜುರಿಗೆ ಒಳಗಾಗಿದ್ದಾರೆ. ರಾಹುಲ್ ಅವರ ಬಲ ಮೊಣಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ಇದರಿಂದ ನೆಟ್​ ಸೆಷನ್​ ಅನ್ನು ಅರ್ಧಕ್ಕೆ ಬಿಟ್ಟು ಕೆ.ಎಲ್ ರಾಹುಲ್ ಅವರು ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಅಂತಿಮ ಪಂದ್ಯ, ಮತ್ತೆ ಎಲ್ಲರ ಹೃದಯ ಗೆದ್ದ ವೈಭವ್ ಸೂರ್ಯವಂಶಿ.. ಏನ್ ಮಾಡಿದರು?

publive-image

ಆದರೆ ಕೆ.ಎಲ್ ರಾಹುಲ್ ಅವರು ಇಂಜುರಿಗೆ ತುತ್ತಾಗಿರುವ ಹಾಗೂ ಮಹತ್ವದ ಪಂದ್ಯದಲ್ಲಿ ರಾಹುಲ್​ ಆಡುತ್ತಾರೋ,ಇಲ್ವೋ ಎನ್ನುವ ಕುರಿತು ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ. ಒಂದು ವೇಳೆ ಕೆ.ಎಲ್ ರಾಹುಲ್ ಅವರು ಗಂಭೀರವಾದ ಗಾಯಕ್ಕೆ ಒಳಗಾಗಿದ್ದರೇ ಡೆಲ್ಲಿ ಕ್ಯಾಪಿಟಲ್ಸ್​ ತಂಡ ದೊಡ್ಡ ಸಂಕಷ್ಟ ಎದುರಿಸುವುದಂತೂ ಪಕ್ಕಾ. ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ತಂಡ ಇಂದು ಸಂಜೆ 7:30ಕ್ಕೆ ಪಂದ್ಯವನ್ನು ಆಡಲಿದೆ.

ಇಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ​ಗೆ ಮಾಡು ಇಲ್ಲವೇ ಮಡಿ ಆಗಿದೆ. ಏಕೆಂದರೆ ಈ ಮ್ಯಾಚ್​ನಲ್ಲಿ ಗೆದ್ದವರು ಪ್ಲೇ ಆಫ್​ಗೆ ಸನಿಹವಾಗಲಿದ್ದಾರೆ. ಮುಂಬೈ ಇಂಡಿಯನ್ಸ್ ಇಂದಿನ ಪಂದ್ಯವನ್ನು ಗೆದ್ದರೆ, ಪ್ಲೇ ಆಫ್‌ನಲ್ಲಿ 4ನೇ ಸ್ಥಾನ ಕಾಯ್ದಿರಿಸುತ್ತದೆ. ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಗೆದ್ದು ನಂತರ ತಮ್ಮ ಕೊನೆಯ ಪಂದ್ಯವನ್ನು ಗೆಲ್ಲಬೇಕು. ಸತತ 2 ಪಂದ್ಯ ಗೆದ್ದರೇ ಅಂತಿಮ ನಾಲ್ಕರಲ್ಲಿ ರನ್​ ರೇಟ್​ ಆಧಾರದ ಮೇಲೆ ಸ್ಥಾನ ಪಡೆಯುವ ಸಾಧ್ಯತೆ ಇದೆ.


">May 20, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment