ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ
ಸ್ಟಾರ್ ಆಟಗಾರನನ್ನು ಕೈ ಬಿಡಲು ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರ್ಧಾರ
ರಿಷಭ್ ಪಂತ್ ಬದಲಿಗೆ ಕನ್ನಡಿಗ ಕೆ.ಎಲ್ ರಾಹುಲ್ ಕ್ಯಾಪ್ಟನ್ಸಿ ಪಟ್ಟ
ಕನ್ನಡಿಗ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್. ಡೆಲ್ಲಿ ಕ್ಯಾಪಿಟಲ್ಸ್ ರೆಡಿ ಮಾಡಿಕೊಂಡ ಸ್ಟಾರ್ ನಾಯಕನ ಪಟ್ಟಿಯಲ್ಲಿ ಕೆ.ಎಲ್ ರಾಹುಲ್ ಹೆಸರು ಇದೆ. ಕೆ.ಎಲ್ ರಾಹುಲ್ ಅವರು ಬ್ಯಾಟಿಂಗ್ಗೆ ಬಲ ತುಂಬ ಬಲ್ಲ ಆಟಗಾರ. ಇವರಲ್ಲೂ ನಾಯಕತ್ವದ ಗುಣಗಳು ಸಾಕಷ್ಟಿವೆ.
ಕಳೆದ ಸೀಸನ್ನಲ್ಲಿ ಕೆ.ಎಲ್ ರಾಹುಲ್ ಮುಂದಾಳತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಒಂದು ಬಾರಿ ಪ್ಲೇ ಆಫ್ಗೆ ಕ್ವಾಲಿಫೈ ಆಗಿತ್ತು. ಆದರೆ ತಂಡ ನೀರಸ ಪ್ರದರ್ಶನ ನೀಡಿದ್ದರಿಂದ ಎಲ್ಎಸ್ಜಿ ಇವರಿಗೂ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ. ಹಾಗಾಗಿ ಇವರನ್ನು ಡೆಲ್ಲಿ ಕ್ಯಾಪಿಟಲ್ಸ್ ಮೆಗಾ ಆಕ್ಷನ್ನಲ್ಲಿ ಖರೀದಿ ಮಾಡೋ ಸಾಧ್ಯತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಆಕ್ಷನ್ಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು? ಯಾರನ್ನು ಬಿಡಬೇಕು ಎಂಬುದರ ಬಗ್ಗೆ ಐಪಿಎಲ್ ತಂಡಗಳು ತೀರ್ಮಾನಿಸುತ್ತಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ತನ್ನ ರೀಟೈನ್ ಲಿಸ್ಟ್ ಫೈನಲ್ ಮಾಡಿದೆ. ಇತ್ತೀಚಿನ ವರದಿಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಪಂತ್ಗೆ ಕೊಕ್ ಯಾಕೆ?
ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ಆಗಿದ್ದ ರಿಕ್ಕಿ ಪಾಂಟಿಂಗ್ ಈ ವರ್ಷದ ಆರಂಭದಲ್ಲೇ ತಂಡ ತೊರೆದಿದ್ದರು. ಇದರ ಬೆನ್ನಲ್ಲೇ ರಿಷಭ್ ಪಂತ್ ಕೂಡ ಐಪಿಎಲ್ನಲ್ಲಿ ಡೆಲ್ಲಿ ತಂಡವನ್ನು ತೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ರಿಷಭ್ ಪಂತ್ 2024ರ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಹಾಗಾಗಿ ಪಂತ್ ಅವರನ್ನು ತಂಡದಿಂದ ಬಿಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕ್ಯಾಪ್ಟನ್ಸಿ ರೇಸ್ನಲ್ಲಿ ಕೆ.ಎಲ್ ರಾಹುಲ್ ಹೆಸರು..!
ಈ ಬಾರಿ ಐಪಿಎಲ್ ಮೆಗಾ ಹರಾಜು ರೋಚಕವಾಗಿ ಇರಲಿದೆ. ಬಹುತೇಕ ತಂಡಗಳು ಹೊಸ ನಾಯಕನಿಗಾಗಿ ಹುಡುಕಾಟದಲ್ಲಿ ತೊಡಗಿವೆ. ಡೆಲ್ಲಿ ಕ್ಯಾಪಿಟಲ್ಸ್ ಕೂಡ ಈ ಪಟ್ಟಿಯಲ್ಲಿ ಸೇರಿದೆ. ಸದ್ಯಕ್ಕೆ ಲಭ್ಯವಿರೋ ಮಾಹಿತಿ ಪ್ರಕಾರ ಪಂತ್ ಜಾಗಕ್ಕೆ ಇಬ್ಬರು ಅನುಭವಿಗಳ ಹೆಸರು ಕೇಳಿ ಬಂದಿದೆ. ಕನ್ನಡಿಗ ಕೆ.ಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಬಹುದು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ