ಶ್ರೀಲಂಕಾ ಪ್ರವಾಸ; ಟೀಮ್​ ಇಂಡಿಯಾ ಸ್ಟಾರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​ಗೆ ಜಾಕ್​ ಪಾಟ್..!​​

author-image
Ganesh Nachikethu
Updated On
KL ರಾಹುಲ್- ಹಾರ್ದಿಕ್ ಪಾಂಡ್ಯ ನಡುವೆ ಬಿಗ್ ಫೈಟ್​.. ರೋಹಿತ್ ಶರ್ಮಾ ನಂತರ ಭಾರತದ ಕ್ಯಾಪ್ಟನ್ ಯಾರು?
Advertisment
  • ಇಂದು ಜಿಂಬಾಬ್ವೆ ವಿರುದ್ಧ ಟೀಮ್​ ಇಂಡಿಯಾಗೆ ಕೊನೆ ಟಿ20 ಪಂದ್ಯ
  • ಈ ಬೆನ್ನಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರೋ ಟೀಮ್​ ಇಂಡಿಯಾ
  • ಟೀಮ್​ ಇಂಡಿಯಾ ಮುಂದಿನ ಕ್ಯಾಪ್ಟನ್​ ಯಾರು ಅನ್ನೋ ಚರ್ಚೆ..!

ಇಂದು ಜಿಂಬಾಬ್ವೆ ವಿರುದ್ಧ ಟೀಮ್​ ಇಂಡಿಯಾಗೆ ಕೊನೆ ಟಿ20 ಪಂದ್ಯ. ಇದಾದ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಈಗಾಗಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಗೌತಮ್​ ಗಂಭೀರ್​​​ ಮತ್ತು ಸೆಲೆಕ್ಷನ್​ ಕಮಿಟಿ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಸ್ಟಾರ್​ ಆಟಗಾರರನ್ನು ಆಯ್ಕೆ ಮಾಡಲು ಭರ್ಜರಿ ಸರ್ಕಸ್​ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಎರಡು ಸರಣಿಗೂ ಭಾರತ ತಂಡಕ್ಕೆ ಹೊಸ ನಾಯಕನ ಅಗತ್ಯ ಇದೆ.

ಇನ್ನು, ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗಲು ಕೆ.ಎಲ್​ ರಾಹುಲ್​ ಮತ್ತು ಹಾರ್ದಿಕ್​ ಪಾಂಡ್ಯ ರೇಸ್​ನಲ್ಲಿ ಇದ್ದಾರೆ. ಇದರ ಮಧ್ಯೆ ವಿರಾಟ್​​ ಕೊಹ್ಲಿ, ರೋಹಿತ್​​ ಶರ್ಮಾ ಮತ್ತು ಬುಮ್ರಾ ಹಾಗೆಯೇ ಹಾರ್ದಿಕ್​ ಪಾಂಡ್ಯ ಕೂಡ ಶ್ರೀಲಂಕಾ ಸೀರೀಸ್​ನಿಂದ ರೆಸ್ಟ್​ ಪಡೆಯೋ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಒಂದು ವೇಳೆ ಹಾರ್ದಿಕ್​​​ ಪಾಂಡ್ಯ ರೆಸ್ಟ್​ ತೆಗೆದುಕೊಂಡರೆ ಕೆ.ಎಲ್​ ರಾಹುಲ್​ಗೆ ಜಾಕ್​ಪಾಟ್​ ಹೊಡೆಯಲಿದೆ.

ಜುಲೈ 27ನೇ ತಾರೀಕಿನಿಂದ ಶ್ರೀಲಂಕಾ ವಿರುದ್ಧ ಟಿ20 ಶರಣಿ ಶುರುವಾಗಲಿದೆ. ಟಿ20 ಸರಣಿ ಬಳಿಕ ಏಕದಿನ ಸೀರೀಸ್​ ಇರಲಿದೆ. ಈಗ ಹಾರ್ದಿಕ್​ ಪಾಂಡ್ಯ ರೆಸ್ಟ್​​ ತೆಗೆದುಕೊಂಡ್ರೆ ಟೀಮ್​ ಇಂಡಿಯಾಗೆ ಇರೋ ಒಂದೇ ಒಂದು ಆಯ್ಕೆ ಕೆ.ಎಲ್​​ ರಾಹುಲ್​​. ಹಾಗಾಗಿ ಕೆ.ಎಲ್​​ ರಾಹುಲ್​​ ಟೀಮ್​ ಇಂಡಿಯಾವನ್ನು ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲಿ ಲೀಡ್​ ಮಾಡೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 180 ಕ್ಯಾರೆಟ್ ಡೈಮಂಡ್.. ನೀತಾ ಅಂಬಾನಿ ನೆಕ್ಲೆಸ್‌ ರೆಡಿ ಮಾಡಲು ಎಷ್ಟು ದಿನ? ಎಷ್ಟು ಸಾವಿರ ಗಂಟೆ ಬೇಕಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment