/newsfirstlive-kannada/media/post_attachments/wp-content/uploads/2025/03/KL_RAHUL-6.jpg)
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿಯಾಗಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಖತ್ ಎಂಜಾಯ್ ಮಾಡುತ್ತಿದೆ. ಮೊದಲ ಮಗುವಿಗೆ ಅಪ್ಪನಾದ ಕಾರಣ ಕನ್ನಡಿಗ ಕೆ.ಎಲ್ ರಾಹುಲ್ ಅವರು ಡೆಲ್ಲಿ ತಂಡದಿಂದ ಹೊರಗಿದ್ದರು. ಆದರೆ ತಂಡದ ಗೆಲುವಿನ ಸಂಭ್ರಮಕ್ಕೆ ಆಗಮಿಸಿರುವ ರಾಹುಲ್ ಅವರು ಲೆಜೆಂಡರಿ ಬ್ಯಾಟರ್ ಸ್ಟೈಲ್ ಅನ್ನು ವೇದಿಕೆ ಮೇಲೆ ಇಮಿಟೇಟ್ ಮಾಡಿ ಎಲ್ಲರನ್ನು ನಗಿಸಿದ್ದಾರೆ.
ಕೆ.ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ದಂಪತಿ ತಮ್ಮ ಮೊದಲ ಮಗುವಿಗೆ ವೆಲ್ಕಮ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕೆ.ಎಲ್ ರಾಹುಲ್ ಅವರ ಮಗಳಿಗಾಗಿ ತೊಟ್ಟಿಲು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಇದರಲ್ಲಿ ಭಾಗಿಯಾಗಿದ್ದ ಕೆ.ಎಲ್ ರಾಹುಲ್ ಸಖತ್ ಆಗಿಯೇ ಎಂಜಾಯ್ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕೆ.ಎಲ್ ರಾಹುಲ್ ಸೇರಿದಂತೆ ಎಲ್ಲ ಆಟಗಾರರು ಮೋಜು ಮಸ್ತಿಯಲ್ಲಿ ತೊಡಗಿದ್ರು. ಎಲ್ಲ ಪ್ಲೇಯರ್ಸ್ ಒಬ್ಬೊಬ್ಬ ಆಟಗಾರನನ್ನ ಇಮಿಟೇಟ್ ಮಾಡಿದ್ದಾರೆ. ಈ ವೇಳೆ ಕೆ.ಎಲ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಕೆವಿನ್ ಪೀಟರ್ಸನ್ ಅವರನ್ನು ಇಮಿಟೇಟ್ ಮಾಡಿದ್ದಾರೆ. ಕೆವಿನ್ ಪೀಟರ್ಸನ್ ಬ್ಯಾಟಿಂಗ್ ಮಾಡುವಾಗ ಯಾವ ರೀತಿ ವರ್ತಿಸುವರೋ ಅದೇ ರೀತಿ ರಾಹುಲ್ ಮಾಡಿದ್ದರಿಂದ ಎಲ್ಲ ಪ್ಲೇಯರ್ ನಕ್ಕು ನಕ್ಕು ಸುಸ್ತಾಗಿದ್ದಾರೆ.
ಇದನ್ನೂ ಓದಿ: MGNREGA; ನರೇಗಾ ಅಡಿ ಕೆಲಸ ಮಾಡ್ತಾರಾ ಮೊಹಮ್ಮದ್ ಶಮಿ ಸಹೋದರಿ, ಮಾವ?
ಇನ್ನು ಕೆ.ಎಲ್ ರಾಹುಲ್ ಅವರು ಮುಂದಿನ ಡೆಲ್ಲಿ ಕ್ಯಾಪಿಟಲ್ಸ್ ಟೀಮ್ನಲ್ಲಿ ಅಖಾಡಕ್ಕೆ ಇಳಿಯಲಿದ್ದಾರೆ. ಮಾರ್ಚ್ 30 ರಂದು ಹೈದ್ರಾಬಾದ್ ವಿರುದ್ಧ ನಡೆಯುವ ಪಂದ್ಯದಲ್ಲಿ ಕೆ.ಎಲ್ ರಾಹುಲ್ ಅವರ ಬ್ಯಾಟಿಂಗ್ ಅನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು ಎನ್ನುವ ಮಾಹಿತಿ ಈಗಾಗಲೇ ಬಹಿರಂಗಗೊಂಡಿದೆ.
ಸದ್ಯ ಕೆ.ಎಲ್ ರಾಹುಲ್ ಅವರು ಮಾಡಿರುವ ಬ್ಯಾಟಿಂಗ್ ಇಮಿಟೇಟ್ ವಿಡಿಯೋವನ್ನು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದೆ. ಇದನ್ನು ನೋಡಿದ ಫ್ಯಾನ್ಸ್ ವಿಧವಿಧವಾದ ಕಮೆಂಟ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ