ಮತ್ತೆ RCB ಸೇರ್ತಾರಾ ಕೆ.ಎಲ್​​ ರಾಹುಲ್​​..? ಕನ್ನಡಿಗನ ಈ ಹೇಳಿಕೆ ಹಿಂದಿನ ಮರ್ಮವೇನು?

author-image
Bheemappa
Updated On
’ಎಷ್ಟು ಕೋಟಿಯಾದ್ರೂ ಆಗಲಿ ಕೆ.ಎಲ್​​ ರಾಹುಲ್​​​ ಆರ್​​ಸಿಬಿಗೆ ಬರಲೇಬೇಕು’- ಏನಿದು ಹೊಸ ಸ್ಟೋರಿ?
Advertisment
  • RCB ಬಗೆಗಿನ ಅಭಿಮಾನ ಮರೆಯದ ಕನ್ನಡಿಗ ಕೆಎಲ್ ರಾಹುಲ್
  • ಎಂ.ಚಿನ್ನಸ್ವಾಮಿ ಸ್ಟೇಡಿಯಂ ಫಸ್ಟ್ ನನ್ನ ಹೋಮ್ ಗ್ರೌಂಡ್ ಆಗಿದೆ
  • ಸದ್ಯ ಐಪಿಎಲ್​ನಲ್ಲಿ ಲಕ್ನೋ ಟೀಮ್​ನ ಕ್ಯಾಪ್ಟನ್​ ಆಗಿರುವ ಕನ್ನಡಿಗ

ಐಪಿಎಲ್​ ಮಹಾ ಸಂಗ್ರಾಮ ಜೋರಾಗಿ ನಡೆಯುತ್ತಿದ್ದು ಕ್ರಿಕೆಟಿಗರ ಪಾಲಿನ ಅದೃಷ್ಟ ಪರೀಕ್ಷೆಯ ಕಣವಾಗಿದೆ. ಅಭಿಮಾನಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಮ್ಮ ನೆಚ್ಚಿನ ಪ್ಲೇಯರ್ಸ್​ಗೆ ಸಪೋರ್ಟ್ ಮಾಡುತ್ತಿದ್ದಾರೆ. ಸದ್ಯ ಆರ್​ಸಿಬಿ ತಂಡದಲ್ಲಿ ಕನ್ನಡಿಗರು ಹುಡುಕಾಡಿ ಹೆಸರು ಹೇಳುವ ಸಂಭವವಿದೆ. ಇದು ಏನೇ ಇರಲಿ ಇಂದು ಕನ್ನಡಿಗ ಕೆ.ಎಲ್​ ರಾಹುಲ್ ಅವರು ಬರ್ತ್​ಡೇ ಸಲೆಬ್ರೇಷನ್ ಮೂಡ್​ನಲ್ಲಿದ್ದಾರೆ. ಇದರ ನಡುವೆ RCB ಬಗೆಗಿನ ಅಭಿಮಾನ, ಬೆಂಗಳೂರು ಹಾಗೂ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಟ್ಟಿ ಸ್ಟೋರೀಸ್ ವಿತ್ ಅಶ್ವಿನ್​ ಎನ್ನುವ ಯು ಟ್ಯೂಬ್​ ಚಾನೆಲ್​ನ ಸಂದರ್ಶನದಲ್ಲಿ ಕೆ.ಎಲ್ ರಾಹುಲ್ ಮಾತನಾಡಿದ್ದಾರೆ. ಆರ್.ಅಶ್ವಿನ್ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಿದ್ದು RCB ಬಗೆಗಿನ ಅಭಿಮಾನ ಮತ್ತು ತಂಡದಲ್ಲಿ ಆಡಲು ಇಷ್ಟ ಇರುವ ಬಗ್ಗೆ ಹೇಳಿಕೊಂಡಿದ್ದಾರೆ.

ನಾನು ಮೊದಲು ಬೆಂಗಳೂರಿನ ಹುಡ್ಗಾ, ಕರ್ನಾಟಕದ ಆಟಗಾರ ಎನ್ನುವುದನ್ನ ಯಾವಗಲೂ ಬದಲಾವಣೆ ಮಾಡೋಕೆ ಆಗಲ್ಲ. ಎಂ.ಚಿನ್ನಸ್ವಾಮಿ ಸ್ಟೇಡಿಯಂ ಫಸ್ಟ್ ನನ್ನ ಹೋಮ್ ಗ್ರೌಂಡ್ ಆಗಿದೆ. ಆರ್​ಸಿಬಿಯಲ್ಲಿ ಆಡುವುದು ನನಗೆ ಹೆಚ್ಚು ಇಷ್ಟವಿತ್ತು. ತಂಡದ ಭಾಗವಾಗಿರುವುದಕ್ಕೆ ಖುಷಿ ಇತ್ತು. ಡ್ರೆಸಿಂಗ್ ರೂಮ್​ನಲ್ಲಿ ವಿರಾಟ್, ಜಾಕ್, ಡಿವಿಲಿಯರ್ಸ್ ಎಲ್ಲರ ಜೊತೆ ಚೆನ್ನಾಗಿ ಫನ್ ಮಾಡುತ್ತಿದ್ದೆ. ಆ ಎರಡು ತಿಂಗಳಲ್ಲಿ ಆರ್​ಸಿಬಿ ಆಟಗಾರರ ಜೊತೆ ಸಾಕಷ್ಟು ಕಲಿತುಕೊಂಡಿದ್ದೆ. ಈಗಲೂ ಎಲ್ಲಿ ಹೋದರೂ ಬೆಂಗಳೂರಿನ ಆಟಗಾರ ಎಂತಲೇ ಗುರುತಿಸುತ್ತಾರೆ. ಆರ್​ಸಿಬಿ ತಂಡದಲ್ಲಿ ಆಡುವುದು ಇಷ್ಟವಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ ಮಕ್ಕಳು ಸೇರಿ 19 ಸಾವು.. ಧಾರಾಕಾರ ಮಳೆಗೆ ಜನ, ಜಾನುವಾರಗಳು ಸುಸ್ತೋ, ಸುಸ್ತು!

publive-image

ಇದನ್ನೂ ಓದಿ:4 ದಿನಗಳಿಂದ ಸುರಿಯುತ್ತಿರೋ ಭೀಕರ ಮಳೆಗೆ 63 ಸಾವು.. 100ಕ್ಕೂ ಹೆಚ್ಚು ಮಂದಿ ನಾಪತ್ತೆ

ಐಪಿಎಲ್​ನಲ್ಲಿ ಸಾಕಷ್ಟು ಅವಕಾಶಗಳು ಇರುವುದರಿಂದ SRH, ಪಂಜಾಬ್ ಸೇರಿ ಬೇರೆ ಬೇರೆ ತಂಡದಲ್ಲಿ ಆಡಬೇಕಾಯಿತು. ಅದರಂತೆ ಈಗ ಲಕ್ನೋ ಒಳ್ಳೆಯ ಅವಕಾಶವನ್ನು ನನಗೆ ನೀಡಿದೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಐಪಿಎಲ್​​ ಆರಂಭದ ನಂತರ ಬೇರೆ ಬೇರೆ ತಂಡದಲ್ಲಿ ಹೋಗಿ ಆಡುವುದು ಕಾಮನ್ ಆಗಿದೆ. ಬೇರೆ ತಂಡದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲು ಬಂದಾಗ ನನ್ನದೇ ಗ್ರೌಂಡ್ ಎಂದು ಇದ್ದೆ ಇರುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಧಾರಾಕಾರ ಮಳೆಗೆ ನದಿಯಂತಾದ ಏರ್​ಪೋರ್ಟ್​.. ಶಾಪಿಂಗ್ ಮಾಲ್,​ ಮೆಟ್ರೋ ನಿಲ್ದಾಣದಲ್ಲೆಲ್ಲ ನೀರೋ ನೀರು!

ಐಪಿಎಲ್ ಇರುವ ಕಾರಣ ಆಟಗಾರರಲ್ಲಿ ಹೆಚ್ಚು ಬದಲಾವಣೆಗಳು ಆಗುತ್ತಿರುತ್ತಾವೆ. ಐಪಿಎಲ್​​ ಸೆಟ್ ಮಾಡಿದಂತೆ ನಾವು ಬೇರೆ ಬೇರೆ ತಂಡದ ಪರವಾಗಿ ಆಡಬೇಕಾಗುತ್ತದೆ. ಎಲ್ಲ ಆಟಗಾರರು ಒಂದು ತಂಡದಿಂದ ಇನ್ನೊಂದು ತಂಡಕ್ಕೆ ಚೇಂಜ್ ಆಗುವುದು ಇದ್ದೆ ಇದೆ. ಫಸ್ಟ್ ಸೀಸನ್​ ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ದೆಹಲಿಯವರು ಆದರೂ ಆರ್​ಸಿಬಿಯಲ್ಲಿ ಮುಂದುವರೆದಿದ್ದಾರೆ. ಅದರಂತೆ ಧೋನಿ ರಾಂಚಿಯ ಹುಡ್ಗಾನಾದರೂ ಚೆನ್ನೈ ತಂಡದಲ್ಲಿ ಆಡುತ್ತಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment