/newsfirstlive-kannada/media/post_attachments/wp-content/uploads/2024/12/KL_RAHUL_OUT1.jpg)
ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ಮಧ್ಯೆ ಬಾರ್ಡರ್​ ಗವಾಸ್ಕರ್ ಟೂರ್ನಿಯ 4ನೇ ಪಂದ್ಯ ನಡೆಯುತ್ತಿದೆ. ಭಾರತ ಮೊದಲ ಇನ್ನಿಂಗ್ಸ್​ನ ಆರಭಿಂಸಿದ್ದು ಬ್ಯಾಟಿಂಗ್​ನಲ್ಲಿ ವಿಫಲ ಪ್ರದರ್ಶನ ತೋರುತ್ತಿದೆ. ರೋಹಿತ್ ಶರ್ಮಾ ಪೆವಿಲಿಯನ್ ನಡೆದ ಬೆನ್ನಲ್ಲೇ ಕೆ.ಎಲ್ ರಾಹುಲ್​ ಕೂಡ ಕ್ರೀಸ್ ಖಾಲಿ ಮಾಡಿದ್ದಾರೆ.
ಮೆಲ್ಬೋರ್ನ್​​ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನ​ ಬ್ಯಾಟಿಂಗ್ ಅನ್ನು ಭಾರತ ಆಟಗಾರರು ಆರಂಭಿಸಿದ್ದಾರೆ. ಓಪರನ್ ಆಗಿ ಮೊದಲು ಯಶಸ್ವಿ ಜೈಸ್ವಾಲ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ರೀಸ್​ಗೆ ಆಗಮಿಸಿದ್ದರು. ಆದರೆ ಈ ವೇಳೆ ಪ್ಯಾಟ್ ಕಮಿನ್ಸ್​ ಓವರ್​​ನಲ್ಲಿ ಬ್ಯಾಟ್ ಬೀಸುತ್ತಿದ್ದ ರೋಹಿತ್ ಶರ್ಮಾ ಕ್ಯಾಚ್ ನೀಡಿ ಪೆವಿಲಿಯನ್​ಗೆ ನಡೆದರು. ರೋಹಿತ್ ಕೇವಲ 3 ರನ್​ಗೆ ಔಟ್ ಆಗಿರುವುದು ಭಾರೀ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ರೋಹಿತ್​ ಶರ್ಮಾ; ಜವಾಬ್ದಾರಿ ಮರೆತ ಕ್ಯಾಪ್ಟನ್
/newsfirstlive-kannada/media/post_attachments/wp-content/uploads/2024/12/KL_RAHUL-12.jpg)
ರೋಹಿತ್ ಬಳಿಕ ಕ್ರೀಸ್​ಗೆ ಆಗಮಿಸಿದ ಕನ್ನಡಿಗ ಕೆ.ಎಲ್ ರಾಹುಲ್​ ಅವರು ಉತ್ತಮವಾಗಿಯೇ ಆಡುತ್ತಿದ್ದರು. ಯಶಸ್ವಿ ಜೈಸ್ವಾಲ್​ಗೆ ಸಾಥ್ ಕೊಟ್ಟು ಬ್ಯಾಟಿಂಗ್ ಮಾಡುತ್ತಿದ್ದ ಕೆ.ಎಲ್ ರಾಹುಲ್, 42 ಎಸೆತಗಳಲ್ಲಿ​ 3 ಬೌಂಡರಿ ಸಮೇತ 24 ರನ್​ಗಳನ್ನು ಗಳಿಸಿದ್ದರು. ಈ ವೇಳೆ ಬ್ಯಾಟಿಂಗ್ ಬೌಲಿಂಗ್ ಮಾಡಲು ಬಂದ ಪ್ಯಾಟ್ ಕಮಿನ್ಸ್​, ರಾಹುಲ್​ರನ್ನು ಕ್ಲೀನ್ ಬೋಲ್ಡ್ ಮಾಡಿ ಸೆಲೆಬ್ರೆಷನ್ ಮಾಡಿದರು. ​
​ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟ್​ ಮಾಡಿದ್ದ ಆಸ್ಟ್ರೇಲಿಯಾ ತಂಡ 474 ರನ್​ಗಳ ಬೃಹತ್​ ಮೊತ್ತದ ರನ್​ಗಳನ್ನು ಗಳಿಸಿದೆ. ಇದರಲ್ಲಿ ಸ್ಟಿವ್ ಸ್ಮತ್ ಅವರ 140 ರನ್​ಗಳು ಕೂಡ ಸೇರಿವೆ. ಸ್ಯಾಮ್, ಖಾವಾಜ್, ಲ್ಯಾಬುಸ್ಚಾಗ್ನೆ ತಲಾ ಒಂದು ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾಗಿದ್ದಾರೆ. ಹಾಗೇ ಪ್ಯಾಟ್ ಕಮಿನ್ಸ್​ (49) ಕೂಡ ಕೇವಲ 1 ರನ್​ನಿಂದ ಅರ್ಧಶತಕ ಮಿಸ್ ಮಾಡಿಕೊಂಡರು. ಸದ್ಯ ಬೌಲಿಂಗ್ ಮಾಡುತ್ತಿರುವ ಕಮಿನ್ಸ್​ ಅವರು, ರೋಹಿತ್ ಶರ್ಮಾ, ಕೆ.ಎಲ್​ ರಾಹುಲ್​ ಅವರನ್ನು ಔಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us