/newsfirstlive-kannada/media/post_attachments/wp-content/uploads/2025/06/KL-RAHUL-1.jpg)
ಐಪಿಎಲ್ ಮೆಗಾ ಜಾತ್ರೆಗೆ ತೆರೆಬಿದ್ದಿದೆ. ಕೆಲವೊಂದು ಗೆಲುವುಗಳು ಕೆಲ ಆಟಗಾರರ ಪ್ರದರ್ಶನವನ್ನ ಇನ್ನೂ ಕ್ರಿಕೆಟ್ ಲೋಕ ಮೆಲುಕು ಹಾಕ್ತಿದೆ. ಆದ್ರಲ್ಲೂ ಬೊಂಬಾಟ್ ಪ್ರದರ್ಶನ ನೀಡಿದ ಕರ್ನಾಟಕದ ಕ್ರಿಕೆಟಿಗರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಕನ್ನಡಿಗರ ಅಬ್ಬರ ಹೇಗಿತ್ತು ಅನ್ನೋ ವಿವರ ಇಲ್ಲಿದೆ.
ಐಪಿಎಲ್ ಸೀಸನ್ 18ರಲ್ಲಿ ನಡೆದಿದ್ದು ಕನ್ನಡಿಗರ ಕಾರುಬಾರು. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ಕರ್ನಾಟಕ ಕ್ರಿಕೆಟರ್ಸ್ ಕಮಾಲ್ ಮಾಡಿದ್ರು. ಚಿಂದಿ ಪರ್ಫಾಮೆನ್ಸ್ ನೀಡಿ ಕ್ರಿಕೆಟ್ ಲೋಕ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ರು. ಒಬ್ಬೊಬ್ಬರ ಪ್ರದರ್ಶನವೂ ಅದ್ಭುತ, ಅಮೋಘ..
ಡೆಲ್ಲಿ ಪರ ಕನ್ನಡಿಗ ರಾಹುಲ್ ರಣಾರ್ಭಟ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಈ ಸೀಸನ್ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಸಾಲಿಡ್ ಆಟವಾಡಿದ್ರು. ಬರೋಬ್ಬರಿ 53.90ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ರಾಹುಲ್ 539 ರನ್ ರನ್ ಕೊಳ್ಳೆ ಹೊಡೆದ್ರು. 52 ಬೌಂಡರಿ, 21 ಸಿಕ್ಸರ್ ಚಚ್ಚಿದ ರಾಹುಲ್ 3 ಹಾಫ್ ಸೆಂಚುರಿ ಜೊತೆಗೆ 1 ಶತಕವನ್ನೂ ಸಿಡಿಸಿದ್ರು.
ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ ಕೇಸ್.. ಸಿಐಡಿ ತನಿಖೆ ಬೆನ್ನಲ್ಲೇ ಕೆಎಸ್ಸಿಎ ಕಾರ್ಯದರ್ಶಿ, ಖಜಾಂಚಿ ದಿಢೀರ್ ರಾಜೀನಾಮೆ
ಪರ್ಪಲ್ ಕ್ಯಾಪ್ ಗೆದ್ದ ಪ್ರಸಿದ್ಧ್ ಕೃಷ್ಣ..
ಕರ್ನಾಟಕದ ವೇಗಿ ಪ್ರಸಿದ್ಧ್ ಕೃಷ್ಣ ಶೇರವೇಗದ ಬೌಲಿಂಗ್ನಿಂದ ಈ ಸೀಸನ್ನಲ್ಲಿ ಇಡೀ ಕ್ರಿಕೆಟ್ ಲೋಕದ ಗಮನ ಸೆಳೆದ್ರು. ಗುಜರಾತ್ ಟೈಟನ್ಸ್ ಪರ ಟೈಟ್ ಸ್ಪೆಲ್ಗಳನ್ನ ಹಾಕಿದ ಪ್ರಸಿದ್ಧ್ ಕೃಷ್ಣ ಬ್ಯಾಟ್ಸ್ಮನ್ಗಳ ಸಖತ್ ಕಾಟ ಕೊಟ್ರು. ಕೇವಲ 8.27ರ ಎಕಾನಮಿಯಲ್ಲಿ ರನ್ ಬಿಟ್ಟು ಕೊಟ್ಟ ಪ್ರಸಿದ್ಧ್, 25 ವಿಕೆಟ್ಗಳನ್ನ ಬೇಟೆಯಾಡಿದ್ರು. ಹೈಯೆಸ್ಟ್ ವಿಕೆಟ್ ಟೇಕರ್ ಆಗಿ ಸೀಸನ್ ಮುಗಿಸಿದ ಪ್ರಸಿದ್ಧ್ ಪರ್ಪಲ್ ಕ್ಯಾಪ್ ಗೆದ್ರು.
RCB ಪರ ಕನ್ನಡಿಗ ಪಡಿಕ್ಕಲ್ ಪರಾಕ್ರಮ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬೆಂಗಳೂರು ಬಾಯ್ ದೇವದತ್ತ್ ಪಡಿಕ್ಕಲ್ ಬೊಂಬಾಟ್ ಆಟವಾಡಿದ್ರು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುತ್ತಿದ್ದ ಪಡಿಕ್ಕಲ್ ಕನ್ಸಿಸ್ಟೆಂಟ್ ಆಗಿ ಇಂಪ್ಯಾಕ್ಟ್ಫುಲ್ ಪರ್ಫಾಮೆನ್ಸ್ ನೀಡಿದ್ರು. ಆಡಿದ 10 ಪಂದ್ಯಗಳಿಂದ ತಂಡಕ್ಕೆ 247 ರನ್ಗಳ ಕಾಣಿಕೆ ನೀಡಿದ್ರು. 150ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ 21 ಬೌಂಡರಿ, 14 ಸಿಕ್ಸರ್ ಬಾರಿಸಿ ಶೈನ್ ಆದ್ರು.
ಇದನ್ನೂ ಓದಿ: ಕೊಹ್ಲಿಯ ಈ ನಡೆ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್.. ಘಟನೆ ನಡೆದ 2 ದಿನದಲ್ಲೇ ಇಂಥ ನಿರ್ಧಾರ ಯಾಕೆ?
ಸಿಕ್ಕ ಅವಕಾಶದಲ್ಲಿ ಮಯಾಂಕ್ ಮಿಂಚು..!
ಪಡಿಕ್ಕಲ್ ಇಂಜುರಿಯಿಂದಾಗಿ ಅದೃಷ್ಟದ ಅವಕಾಶ ಮಯಾಂಕ್ ಅಗರ್ವಾಲ್ ಕೂಡ ಮಿಂಚಿದ್ರು. 4 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡೋ ಅವಕಾಶ ಪಡೆದ ಮಯಾಂಕ್ 148ರ ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸಿದ್ರು. ಲಕ್ನೋ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮಯಾಂಕ್ ಕಟ್ಟಿದ ಇನ್ನಿಂಗ್ಸ್ ಅವಿಸ್ಮರಣೀಯ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ರು.
ಪಂಜಾಬ್ ತಂಡದಲ್ಲಿ ವೈಶಾಕ ‘ವಿಜಯ’
ಆಡಿದ್ದು ಕೇವಲ 5 ಪಂದ್ಯವಾದ್ರೂ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಈ ಸೀಸನ್ನಲ್ಲಿ ಎಲ್ಲರ ಗಮನಸೆಳೆದ್ರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕ್ರೂಶಿಯಲ್ ಟೈಮ್ನಲ್ಲಿ ಬೌಲಿಂಗ್ಗೆ ಬಂದ ವೈಶಾಕ್ ಟೈಟ್ ಸ್ಪೆಲ್ ಹಾಕಿ 2 ವಿಕೆಟ್ ಬೇಟೆಯಾಡಿಯೂ ಗಮನ ಸೆಳೆದ್ರು. ಆರ್ಸಿಬಿ ವಿರುದ್ಧದ ಫೈನಲ್ ಪಂದ್ಯದಲ್ಲೂ ಒಂದು ವಿಕೆಟ್ ಉರುಳಿಸಿದ್ರು.
ಈ ಸೀಸನ್ ಐಪಿಎಲ್ನಲ್ಲಿ ಅದ್ಭುತ ಪರ್ಫಾಮೆನ್ಸ್ ನೀಡಿ ಕಮಾಲ್ ಮಾಡಿದ ಈ ಕನ್ನಡಿಗರು ಇದೀಗ ಟೀಮ್ ಇಂಡಿಯಾ ಪರ ಮಿಂಚೋ ಲೆಕ್ಕಾಚಾರದಲ್ಲಿದ್ದಾರೆ. ಕೆ.ಎಲ್. ರಾಹುಲ್, ಪ್ರಸಿದ್ಧ್ ಕೃಷ್ಣ ಇಂಗ್ಲೆಂಡ್ ಸರಣಿಯನ್ನ ಎದುರು ನೋಡ್ತಿದ್ದಾರೆ. ಪಡಿಕ್ಕಲ್, ಮಯಾಂಕ್, ವೈಶಾಕ್ ಮುಂದಿನ ಸರಣಿಗಳಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: ದುಬೈನ ಶೇಖ್ಗಳಿಗೆ ರಾಜಸ್ಥಾನಿ ಮೇಕೆಗಳು ಅಂದ್ರೆ ಪಂಚಪ್ರಾಣ.. ಲಕ್ಷ ಲಕ್ಷ ಕೊಟ್ಟು ಖರೀದಿಸೋದು ಯಾಕೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ