KL ರಾಹುಲ್​ ಬ್ಯಾಟಿಂಗ್​ ಸ್ಲಾಟ್ ಚೇಂಜ್​.. ಓಪನರ್ ಆಡೋದು ಯಾವ ಪ್ಲೇಯರ್​?

author-image
Bheemappa
Updated On
KL ರಾಹುಲ್​ ಬ್ಯಾಟಿಂಗ್​ ಸ್ಲಾಟ್ ಚೇಂಜ್​.. ಓಪನರ್ ಆಡೋದು ಯಾವ ಪ್ಲೇಯರ್​?
Advertisment
  • ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್ ಫೈನಲ್​ಗೆ ಹೋಗುವುದಕ್ಕೆ ಒತ್ತಡ
  • ಕಳೆದ 10 ವರ್ಷಗಳಿಂದ ಮೆಲ್ಬರ್ನ್​ನಲ್ಲಿ ಭಾರತ ಸೋತೇ ಇಲ್ವಾ?
  • ನೆಟ್ಸ್​ ಸೆಷನ್​ ಸ್ಕಿಪ್ ಮಾಡದಂತೆ ಎಲ್ಲ ಆಟಗಾರರಿಗೆ ಕಟ್ಟೆಚ್ಚರಿಕೆ

ಪರ್ತ್ ಗೆದ್ದ ಟೀಮ್ ಇಂಡಿಯಾ, ಅಡಿಲೇಡ್​ನಲ್ಲಿ ಹೀನಾಯ ಮುಖಭಂಗ ಅನುಭವಿಸಿತ್ತು. ಬ್ರಿಸ್ಬೇನ್​ ಟೆಸ್ಟ್​ನಲ್ಲಿ ಸೋಲಿನಿಂದ ಪಾರಾದ ಟೀಮ್ ಇಂಡಿಯಾದ ಫೋಕಸ್ ಈಗ ಮೆಲ್ಬರ್ನ್​ ಮೇಲೆ ಶಿಫ್ಟ್​ ಆಗಿದೆ. ಶತಯಾ ಗತಯಾ ಗೆಲ್ಲೋಕೆ ಪಣ ತೊಟ್ಟಿರುವ ಭಾರತದ ಕಲಿಗಳು, ಮೆಲ್ಬರ್ನ್ ಕೋಟೆ ವಶ ಪಡಿಸಿಕೊಳ್ಳಲು ರಣತಂತ್ರ ಎಣೆಯುತ್ತಿದೆ.

ಮೆಲ್ಬರ್ನ್​ ಗೆಲುವಿಗಾಗಿ ತೆರೆ ಹಿಂದೆ ನಡೀತಿದೆ ರಣತಂತ್ರ..!

ಪರ್ತ್, ಅಡಿಲೇಡ್ ಆಯ್ತು. ಬ್ರಿಸ್ಬೇನ್​ ಟೆಸ್ಟ್‌ ಡ್ರಾನಲ್ಲಿ ಅಂತ್ಯ ಕಂಡಿರುವ ಟೀಮ್ ಇಂಡಿಯಾದ ಚಿತ್ತ ಈಗ ಮೆಲ್ಬರ್ನ್ ಟೆಸ್ಟ್​ನತ್ತ ನೆಟ್ಟಿದೆ. ಬ್ಯಾಟಿಂಗ್, ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ನೀಡಿರುವ ರೋಹಿತ್ ಗ್ಯಾಂಗ್, ಮೆಲ್ಬರ್ನ್​ನಲ್ಲಿ ಮೆರೆದಾಡಲು ಸಿಕ್ರೇಟ್​​​​​​​​​​ ಗೇಮ್ ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ರೂಪಿಸಿದೆ. 2014ರಿಂದ ಮೆಲ್ಬರ್ನ್​ನಲ್ಲಿ ಸೋಲನ್ನೇ ಅರಿಯದ ಟೀಮ್ ಇಂಡಿಯಾ, ಇದೀಗ ಅದೇ ಇತಿಹಾಸವನ್ನೇ ಪನರಾವರ್ತಿಸುವ ಕನಸಿನಲ್ಲಿದೆ. ಅಷ್ಟೇ ಅಲ್ಲ.! ಮೆಲ್ಬರ್ನ್​ ಗೆಲುನೊಂದಿಗೆ ಸರಣಿ ಮೇಲೆ ಬಿಗಿ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿದೆ.

publive-image

ಸ್ಟ್ರಿಕ್ಟ್​ ಪ್ರಾಕ್ಟೀಸ್.. ನೋ ರೆಸ್ಟ್​ & ನೋ ಸ್ಕಿಪ್..!

ಅಡಿಲೇಡ್ ಹಾಗೂ ಬ್ರಿಸ್ಬೇನ್​ನಲ್ಲಿ ಸೋತಿದ್ದೆ ಸೋತಿದ್ದು, ಟೀಮ್ ಇಂಡಿಯಾದ ಥಿಂಕ್​ ಟ್ಯಾಕ್​ಗಳು ಬುದ್ಧಿ ಕಲಿತಿದ್ದಾರೆ. ಮೆಲ್ಬರ್ನ್​ಗೆ ಆಗಮಿಸಿದ ಬೆನ್ನಲ್ಲೇ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸ್ತಿದ್ದಾರೆ. ಯಾವುದೇ ಕಾರಣಕ್ಕೂ ನೆಟ್ಸ್​ ಸೆಷನ್​ ಸ್ಕಿಪ್ ಮಾಡದಂತೆ ಕಟ್ಟೆಚ್ಚರಿಕೆ ನೀಡಿದ್ದಾರೆ. ಪ್ರ್ಯಾಕ್ಟೀಸ್ ಫಸ್ಟ್​ ಅನ್ನೋ ಮಾನದಂಡದಲ್ಲೇ ಬೆವರಿಳಿಸುತ್ತಿರುವ ಆಟಗಾರರು, ಮೆಲ್ಬರ್ನ್​ನ ಬಾಕ್ಸಿಂಗ್ ಡೇ ಟೆಸ್ಟ್​ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ.

ಮತ್ತೆ ರೋಹಿತ್ ಶರ್ಮಾನೇ ಓಪನರ್..!

ಪರ್ತ್, ಅಡಿಲೇಡ್, ಬ್ರಿಸ್ಬೇನ್​​​ ಟೆಸ್ಟ್​ನಲ್ಲಿ ಆರಂಭಿಕರಾಗಿದ್ದ ಜೈಸ್ವಾಲ್, ಕೆ.ಎಲ್.ರಾಹುಲ್, ಮೆಲ್ಬರ್ನ್​ನಲ್ಲಿ ಜೊತೆಯಾಗಿನ ಕಣಕ್ಕಿಳಿಯೋದು ಡೌಟ್. ಯಾಕಂದ್ರೆ, ಕೆ.ಎಲ್.ರಾಹುಲ್​ಗೆ ಸ್ಥಾನ ತ್ಯಾಗ ಮಾಡಿ, 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ರೋಹಿತ್, ಅಟ್ಟರ್ ಫ್ಲಾಫ್ ಪರ್ಫಾಮೆನ್ಸ್​ ನೀಡಿದ್ದಾರೆ. ಈ ಕಾರಣಕ್ಕೆ ರೋಹಿತ್​​ರನ್ನ ಮತ್ತೆ ಆರಂಭಿಕನಾಗಿ ಕಣಕ್ಕಿಳಿಸಲು ಮುಂದಾಗಿದೆ.

6ನೇ ಕ್ರಮಾಂಕಕ್ಕೆ ಕೆ.ಎಲ್.ರಾಹುಲ್ ಶಿಫ್ಟ್​..!

ರೋಹಿತ್ ಶರ್ಮಾರ ಮತ್ತೆ ಆರಂಭಿಕನಾಗಿ ಪ್ರಮೋಟ್ ಮಾಡಲು ಮುಂದಾಗಿರುವ ಮ್ಯಾನೇಜ್​ಮೆಂಟ್, ಕೆ.ಎಲ್.ರಾಹುಲ್​ಗೆ 6ನೇ ಕ್ರಮಾಂಕದ ಜವಾಬ್ದಾರಿ ನೀಡಲು ಚಿಂತನೆ ನಡೆಸಿದೆ. ಇದಕ್ಕೆ ಕಾರಣ ಕೆ.ಎಲ್.ರಾಹುಲ್ ಆರಂಭಿಕನಾಗಿ ಬೆಸ್ಟ್ ನೀಡಲಿಲ್ಲ ಎಂಬುವುದು ಅಲ್ಲ. ಉತ್ತಮ ಟಚ್​ನಲ್ಲಿರುವ ಕೆ.ಎಲ್.ರಾಹುಲ್, ರಿಷಭ್ ಪಂತ್, ನಿತಿಶ್ ಕುಮಾರ್ ರೆಡ್ಡಿ ಜೊತೆ ಸೇರಿ ಬಿಗ್ ಇನ್ನಿಂಗ್ಸ್ ಕಟ್ಟಬಲ್ಲರು. ಅವಶ್ಯಕತೆ ಬಿದ್ದರೆ, ತಾಳ್ಮೆಯ ಇನ್ನಿಂಗ್ಸ್​ ಕಟ್ಟಿ ತಡೆಗೋಡೆಯಾಗಿ ನಿಲ್ಲುತ್ತಾರೆ ಅನ್ನೋ ನಂಬಿಕೆ.

ಜಡೇಜಾ ಔಟ್​​.. ಸುಂದರ್ ಬ್ಯಾಕ್..?

ಪರ್ತ್ ಟೆಸ್ಟ್​ ಬಳಿಕ ವಾಷಿಂಗ್ಟನ್ ಸುಂದರ್​ಗೆ ಕೊಕ್ ನೀಡಿದ್ದ ಮ್ಯಾನೇಜ್​ಮೆಂಟ್, ಮೆಲ್ಬರ್ನ್​ನಲ್ಲಿ ಮತ್ತೆ ಕಣಕ್ಕಿಳಿಸುವ ಚಾನ್ಸ್​ ಇದೆ. ಇದಕ್ಕೆ ಕಾರಣ ಎದುರಾಳಿ ಪಡೆಯಲ್ಲಿನ ಲೆಫ್ಟಿ ಬ್ಯಾಟರ್​ಗಳ ಥ್ರೆಟ್.. ಈಗಾಗಲೇ ಉಸ್ಮಾನ್ ಖವಾಜಾ, ಅಲೆಕ್ಸ್ ಕ್ಯಾರಿ, ಟ್ರಾವಿಸ್ ಹೆಡ್ ಇನಿಲ್ಲದ ಕಾಟ ನೀಡ್ತಿದ್ದಾರೆ. ಈ ಕಾರಣಕ್ಕೆ ಜಡೇಜಾಗೆ ಬೆಂಚ್ ಕಾಯಿಸಿ ಸುಂದರ್​ಗೆ ಬುಲಾವ್ ನೀಡುವ ಪ್ಲಾನ್​ನಲ್ಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲೂ RCB ಫ್ಯಾನ್ಸ್​.. ವಿರಾಟ್​ ಕೊಹ್ಲಿ ಜೊತೆ ಜೆರ್ಸಿ ಧರಿಸಿ ಯುವತಿ ಕ್ಯೂಟ್ ಫೋಟೋ

publive-image

ವೇಗಿ ಪ್ರಸಿದ್ಧ್​​ ಕೃಷ್ಣನ ಬೇಟೆಗಿಳಿಸುವ ಪ್ಲಾನ್​..!

ಬೂಮ್ರಾಗೆ ಸೂಕ್ತ ಪಾರ್ಟ್​ನರ್ ಸಿಕ್ಕಿಲ್ಲ. ಇದು ಸಹಜವಾಗೇ ಟೀಮ್ ಮ್ಯಾನೇಜ್​​ಮೆಂಟ್ ತಲೆನೋವು ಹೆಚ್ಚಿಸಿದೆ. ಸಿರಾಜ್ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಹರ್ಷಿತ್ ರಾಣಾ ಬದಲಿಗೆ ಬ್ರಿಸ್ಬೇನ್​ನಲ್ಲಿ ಕಣಕ್ಕಿಳಿದ ಆಕಾಶ್ ದೀಪ್ ಡಿಸೆಂಟ್ ಆಟವಾಡಿದ್ದಾರೆ. ಹೀಗಾಗಿ ಸಿರಾಜ್ ಬದಲಿಗೆ ಅಭ್ಯಾಸ ಪಂದ್ಯಗಳಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್ ನೀಡಿರುವ ಪ್ರಸಿದ್ಧ್​, ಬೇಟೆಗೆ ಇಳಿಸುವ ಚಿಂತನೆಯನ್ನು ನಡೆಸಿದೆ.

ಮೆಲ್ಬರ್ನ್​ನಲ್ಲಿ ಕಾಂಗರೂಗಳ ಎಡೆಮುರಿ ಕಟ್ಟಲು ತಯಾರಿ ನಡೆಸ್ತಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್​ ಚಾಂಪಿಯನ್ ಶಿಫ್​ ಫೈನಲ್​ ದೃಷ್ಟಿಯಿಂದ ಗೆಲ್ಲುವ ಒತ್ತಡದಲ್ಲಿದೆ. ಇದಕ್ಕಾಗಿ ಟಫ್ ಕಾಲ್ಸ್​ ತೆಗೆದುಕೊಳ್ಳುತ್ತಿರುವ ಮ್ಯಾನೇಜ್​ಮೆಂಟ್​, ಎಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment