/newsfirstlive-kannada/media/post_attachments/wp-content/uploads/2024/12/KL_RAHUL_JADEJA.jpg)
ಬಾರ್ಡರ್- ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ಆಸ್ಟ್ರೇಲಿಯಾ ವಿರುದ್ಧ ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿದ್ದಾರೆ.
ಗಬ್ಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ನಲ್ಲಿ 445 ರನ್ಗಳಿಗೆ ಆಲೌಟ್ ಆಗಿದೆ. ಇದಾದ ಬಳಿಕ ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ ಆಘಾತಕ್ಕೆ ಸಿಲುಕಿತ್ತು. ಜೈಸ್ವಾಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರಿಷಬ್ ಪಂತ್, ಶುಭ್ಮನ್ ಗಿಲ್ ಸೇರಿ ಉಳಿದ ಬ್ಯಾಟ್ಸ್ಮನ್ಗಳು ಬಂದಷ್ಟೇ ವೇಗವಾಗಿ ಪೆವಿಲಯನ್ಗೆ ನಡೆದರು. ಇನ್ನೊಂದು ಕಡೆ ಓಪನರ್ ಆಗಿ ಕ್ರೀಸ್ಗೆ ಬಂದಿದ್ದ ಕೆ.ಎಲ್ ರಾಹುಲ್ ಬ್ಯಾಟಿಂಗ್ ಮುಂದುವರೆಸಿದ್ದರು.
ಇದನ್ನೂ ಓದಿ:‘ಕನ್ನಡಕ್ಕಾಗಿ ಓಟ’ ಬೃಹತ್ ಮ್ಯಾರಥಾನ್.. ಸಾಹಿತ್ಯ ಹಬ್ಬಕ್ಕೆ ಕಿಕ್ ಕೊಟ್ಟ ಧನಂಜಯ್, ಸತೀಶ್, ಸಪ್ತಮಿ
ಈ ಹಿನ್ನೆಲೆಯಲ್ಲಿ ಕೆ.ಎಲ್ ರಾಹುಲ್ ಅವರು 139 ಎಸೆತಗಳಲ್ಲಿ 8 ಬೌಂಡರಿ ಸಮೇತ 84 ರನ್ ಗಳಿಸಿ ಆಡುವಾಗ ಸ್ಟಿವ್ ಸ್ಮಿತ್ಗೆ ಕ್ಯಾಚ್ ಕೊಟ್ಟು ಔಟ್ ಆದರು. ರಾಹುಲ್ಗೆ ಆಲ್ರೌಂಡರ್ ರವೀಂದ್ರ ಜಡೇಜಾ ಉತ್ತಮ ಸಾಥ್ ನೀಡಿದರು. ಸದ್ಯ ಬ್ಯಾಟಿಂಗ್ ಮಾಡುತ್ತಿರುವ ರವೀಂದ್ರ ಜಡೇಜಾ 6 ಬೌಂಡರಿಗಳಿಂದ 65 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ 16, ಮೊಹಮ್ಮದ್ ಸಿರಾಜ್ 1 ಬೇಗನೆ ಔಟ್ ಆದರು. ಇದು ತಂಡಕ್ಕೆ ನಷ್ಟ ಉಂಟು ಮಾಡಿತು. ಸದ್ಯ ಜಡೇಜಾ ಕ್ರೀಸ್ನಲ್ಲಿದ್ದು ಭಾರತ 8 ವಿಕೆಟ್ಗೆ 201ರನ್ಗಳನ್ನು ಗಳಿಸಿ ಆಡುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ