ಚಾಂಪಿಯನ್ಸ್​​​ ಟ್ರೋಫಿ ಬೆನ್ನಲ್ಲೇ ಕ್ಯಾಪ್ಟನ್ಸಿ ಆಫರ್​​​; ನನಗೆ ಬೇಡ ಎಂದ KL ರಾಹುಲ್​​; ಕಾರಣವೇನು?

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • 2025ರ ಚಾಂಪಿಯನ್ಸ್​ ಟ್ರೋಫಿ ಗೆದ್ದ ಟೀಮ್​ ಇಂಡಿಯಾ
  • ಈ ಬೆನ್ನಲ್ಲೇ ಐಪಿಎಲ್​​ ಆಡಲು ಭಾರತ ಆಟಗಾರರ ಸಜ್ಜು
  • ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಲಿರೋ ಕನ್ನಡಿಗ KL ರಾಹುಲ್​​

ಇತ್ತೀಚೆಗೆ ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2025ರ ಚಾಂಪಿಯನ್ಸ್​ ಟ್ರೋಫಿ ಫೈನಲ್​​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ನ್ಯೂಜಿಲೆಂಡ್​ ತಂಡವನ್ನು ಸೋಲಿಸಿ ಭಾರತ ತಂಡ ಚಾಂಪಿಯನ್​ ಆಗಿದೆ.

ಟೀಮ್ ಇಂಡಿಯಾದ ಗೆಲುವಿನಲ್ಲಿ ಕನ್ನಡಿಗ ಕೆ.ಎಲ್​ ರಾಹುಲ್​​ ಪ್ರಮುಖ ಪಾತ್ರವಹಿಸಿದರು. ಪ್ರಶಸ್ತಿ ಗೆಲುವಿನ ನಂತರ ಟೀಮ್ ಇಂಡಿಯಾ ವಿಕೆಟ್ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಮುಂಬೈಗೆ ಮರಳಿದ್ದಾರೆ. ಇನ್ನೇನು 10 ದಿನಗಳಲ್ಲಿ 2025ರ ಐಪಿಎಲ್​ ಸೀಸನ್​ ಶುರುವಾಗಲಿದೆ. ಇದಕ್ಕಾಗಿ ಕೆ.ಎಲ್​ ರಾಹುಲ್​ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಸೇರಲಿದ್ದಾರೆ.

ಕ್ಯಾಪ್ಸನ್ಸಿ ಬೇಡ ಎಂದ ಕೆ.ಎಲ್​ ರಾಹುಲ್​​

ಮುಂದಿನ ಸೀಸನ್​ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್​ ಯಾರು? ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕ್ಯಾಪ್ಟನ್ಸಿ ರೇಸ್​ನಲ್ಲಿ ಮೂವರು ಹೆಸರು ಕೇಳಿ ಬಂದಿದೆ. ಅಕ್ಷರ್​ ಪಟೇಲ್​​​, ಫಾಫ್​ ಡುಪ್ಲೆಸಿಸ್​, ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್ಸಿ ರೇಸ್​ನಲ್ಲಿದ್ದಾರೆ. ಇದರ ಮಧ್ಯೆ ಕೆ.ಎಲ್​ ರಾಹುಲ್​, ನನಗೆ ಕ್ಯಾಪ್ಟನ್ಸಿ ಬೇಡ ಎಂದಿದ್ದಾರೆ.

publive-image

ಏನಂದ್ರು ಕೆ.ಎಲ್​ ರಾಹುಲ್​​?

ನನ್ನ ಪತ್ನಿ ಅತಿಯಾ ಶೆಟ್ಟಿ ಗರ್ಭಿಣಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾನು ಕುಟುಂಬದ ಜೊತೆಗೆ ಇರುವುದು ಅನಿವಾರ್ಯ. ಹೀಗಾಗಿ ಒಂದೆರಡು ಪಂದ್ಯಗಳಿಂದ ಹೊರಗುಳಿಯಲಿದ್ದೇನೆ. ಇದು ನನ್ನ ಮೊದಲ ಮಗು. ನಾನು ರಿಸ್ಕ್​ ಮಾಡಲ್ಲ. ನನಗೆ ಕ್ಯಾಪ್ಟನ್ಸಿ ಬೇಡ ಎಂದಿದ್ದಾರೆ ಕೆ.ಎಲ್​ ರಾಹುಲ್​.

ಇನ್ನು, ಕೆ.ಎಲ್​ ರಾಹುಲ್​ ಬದಲಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಷರ್ ಪಟೇಲ್ ಲೀಡ್​ ಮಾಡಲಿದ್ದಾರೆ. ಐಪಿಎಲ್ 2025ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ಅಕ್ಸರ್ ಪಟೇಲ್ ಅವರನ್ನು ಹೆಸರಿಸುವ ಸಾಧ್ಯತೆಯಿದೆ.

ಇದನ್ನೂ ಓದಿ:ಸ್ಟಾರ್​ ಆಟಗಾರನ ಮೇಲೆ 2 ವರ್ಷ ಬ್ಯಾನ್​​​; ಐಪಿಎಲ್​ ಆಡಳಿತ ಮಂಡಳಿಯಿಂದ ಮಹತ್ವದ ನಿರ್ಧಾರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment